ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಡಾ ಹಗರಣ ಆರೋಪಿ ಕೆಬ್ಬಳ್ಳಿ ಆನಂದ್ ಗೆ 'ಡಾನ್' ಬೆದರಿಕೆ?

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಜ. 31: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಗಳ ಹಣ ದುರುಪಯೋಗದ ಆರೋಪ ಎದುರಿಸುತ್ತಿರುವ ಕೆ. ಆನಂದ್ ಅಲಿಯಾಸ್ ಕೆಬ್ಬಳ್ಳಿ ಆನಂದ್ ಅವರಿಗೆ ಹಣ ನೀಡುವಂತೆ ಡಾನ್ ಕುಮಾರ್ ಎಂಬಾತ ಬೆದರಿಕೆ ಕರೆ ಮಾಡಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಬಗ್ಗೆ ಖುದ್ದು ಆನಂದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿರುವ ಕುಮಾರ್ ಅಲಿಯಾಸ್ ಡಾನ್ ಕುಮಾರ ಪ್ರತ್ಯೇಕ ಮೂರು ಮೊಬೈಲ್ ನಿಂದ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಬಗ್ಗೆ ಇದೀಗ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಆನಂದ್ ದೂರು ನೀಡಿದ್ದಾರೆ.[ಮಂಡ್ಯ ಮುಡಾ: 5 ಕೋಟಿ ಗೋಲ್ ಮಾಲ್ 3 ಜನ ಬಲೆಗೆ]

MUDA scam accused Kebballi Anand gets extortion calls

ಕೆಬ್ಬಳ್ಳಿ ಆನಂದ್ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ರೂ. ಮತ್ತು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ(ಆರ್ ಸಿಯುಡಿಎ) ಪ್ರಾಧಿಕಾರದಿಂದ 9.9 ಕೋಟಿ ರೂ.ಗೂ ಹೆಚ್ಚು ಹಣ ದುರುಪಯೋಗ ಪ್ರಕರಣದ ಎದುರಿಸುತ್ತಿದ್ದು, ಬೇಲೇಕೇರಿ ಅದಿರು ಪ್ರಕರಣದಲ್ಲಿಯೂ ಈತನ ನಂಟಿದೆ ಎನ್ನಲಾಗುತ್ತಿದೆ. 2012ರಲ್ಲಿ ನಡೆದ ನಗರಾಭಿವೃದ್ಧಿ ಪ್ರಾಧಿಕಾರಗಳ ಹಣ ದುರುಪಯೋಗ ಪ್ರಕರಣದಲ್ಲಿ ಆನಂದ್ ಸೇರಿದಂತೆ ಎರಡೂ ಪ್ರಾಧಿಕಾರಗಳ ಅಂದಿನ ಆಯುಕ್ತರು ಸೇರಿದಂತೆ ಹಲವರು ಜೈಲ್ ಸೇರಿದ್ದರು.[ಜೆಡಿಎಸ್ ಶಾಸಕರು ಮುಡಾ ಸೈಟು ನುಂಗಿದ ಕಥೆ]

ಈ ನಡುವೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿರುವ ಕುಮಾರ್ ಅಲಿಯಾಸ್ ಡಾನ್ ಕುಮಾರ ಎಂಬಾತ ಕೆಬ್ಬಳ್ಳಿ ಆನಂದ್ ಗೆ ಹಣ ನೀಡುವಂತೆ ಜನವರಿ 26 ರಿಂದ 29ರ ಅವಧಿಯಲ್ಲಿ ಅನೇಕ ಬಾರಿ ಬೆದರಿಕೆ ಕರೆಗಳನ್ನು ಮಾಡಿದ್ದಾನೆ ಎಂದು ಆನಂದ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಐಪಿಸಿ ಸೆಕ್ಷನ್ 384, 506ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮಂಡ್ಯ ಸಬ್ ಡಿವಿಷನ್ ಡಿಎಸ್ಪಿ ಟಿಜೆ ಉದೇಶ ಅವರು ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)

English summary
Kebballi Anand, the accused in the alleged misappropriation of funds of Mandya Urban Development Authority (MUDA) and Ramanagaram-Channapatna Urban Development Authority (RCUDA), has filed a police complaint stating that he received extortion calls from Don Kumar an inmate of the Ballari Central Prison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X