ಮಂಡ್ಯ ರಾಜಕೀಯ ಕಿರಿಕಿರಿ ಮಧ್ಯೆ ಕ್ರಿಕೆಟ್ ಆಡಿದ ರಮ್ಯಾ!

ಮಂಡ್ಯ, ಏ.9: ಕನ್ನಡದ ಮೋಹಕ ಚಿತ್ರ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನಗೆ ಕ್ರಿಕೆಟ್ ಹುಚ್ಚು ಹೆಚ್ಚು ಎಂಬುದು ನೀವೂ ಬಲ್ಲಿರಿ. ಆದರೆ ಆಕೆಯೀಗ ಮಾಜಿ ನಟಿ, ನಟನೆಗೆ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ. ಏಕೆಂದರೆ ರಾಜಕೀಯದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಆದರೆ ರಾಜಕೀಯ ಅದರಲ್ಲೂ ಮಂಡ್ಯ ರಾಜಕೀಯದಲ್ಲಿನ ಕಿರಿಕಿರಿ ಅವರನ್ನು ನಿಜಕ್ಕೂ ಹೈರಾಣಗೊಳಿಸಿದೆ. ರಾಜಕೀಯ ಬದುಕು ಅವರಂದುಕೊಂಡಷ್ಟು ರಮ್ಯಾವಾಗಿಲ್ಲ. ಆ ರಾಜಕೀಯ ಜಂಜಾಟದಿಂದ ಹೊರಬರಲು ನಿನ್ನೆ ತಮ್ಮ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದಾಗ 'ಬನ್ರೋ ರಾಜಕೀಯದ ಕಿರಿಕಿರಿ ಸಾಕಾಗಿದೆ.. ಒಂದಷ್ಟು ಕಿರಿಕೆಟ್ ಆಡಿ ದೇಹ- ಮನಸ್ಸಿಗೆ ಒಂದಷ್ಟು ಲವಲವಿಕೆ/ ನವಚೈತನ್ಯ ತುಂಬಿಸಿಕೊಳ್ಳೋಣ' ಎಂದು ಎದುರಿಗೆ ಸಿಕ್ಕಿದ ಪಡ್ಡೆ ಹೈಕಳನ್ನು/ ಚಿಳ್ಳೆಪಿಳ್ಳೆಗಳನ್ನು ಗುಡ್ಡೆ ಹಾಕಿಕೊಂಡು ಕ್ರಿಕೆಟ್ ಆಡಿ ಮನಸಾರೆ ಎಂಜಾಯ್ ಮಾಡಿದ್ದಾರೆ.

ಇದನ್ನು, ಸ್ವತಃ ರಮ್ಯಾ ಅವರೇ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ

ಹಳ್ಳಿ ಹೈಕಳುಗಳ ಮಧ್ಯೆ ಕಂಗೊಳಿಸಿದ ರಮ್ಯಾ

ಹಳ್ಳಿ ಹೈಕಳುಗಳ ಮಧ್ಯೆ ಕಂಗೊಳಿಸಿದ ರಮ್ಯಾ

ಮಂಡ್ಯದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿದ್ದ ಸಂಸದೆ ರಮ್ಯಾ ಅವರು ಕ್ರಿಕೆಟ್ ಆಡಿದ್ದು ಹೀಗೆ. ಸುಮಾರು ಅರ್ಧ ಗಂಟೆ ಕಾಲ ಕ್ರಿಕೆಟ್ ಆಡಿದ ರಮ್ಯಾ ಕೊನೆಗೆ ಹೇಳಿದ್ದು ಅಯ್ಯೋ ನಾನು ಸಿದ್ಧಾರ್ಥ ಮಲ್ಯ ಜತೆ ಕ್ರಿಕೆಟ್ ನೋಡುತ್ತೇನಷ್ಟೇ; ಆಡೋಲ್ಲ. ನನ್ನ ಕ್ರಿಕೆಟ್ ಆಟ ಕೆಟ್ಟದ್ದಾಗಿದೆ. ನೀವೇ ನೋಡಿದರಲ್ಲಾ! ಎಂದು ಹಳ್ಳಿ ಹೈಕಳುಗಳ ಮಧ್ಯೆ ಕಂಗೊಳಿಸಿದ ರಮ್ಯಾ ಅಮಾಯಕವಾಗಿ ಹೇಳಿದರು.

 ರಮ್ಯಾ ಕ್ರಿಕೆಟ್ ಆಟದ ಭಂಗಿ ಹೇಗಿದೆ?

ರಮ್ಯಾ ಕ್ರಿಕೆಟ್ ಆಟದ ಭಂಗಿ ಹೇಗಿದೆ?

ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ/ಎಡವಟ್ಟುಗಳ ಮಧ್ಯೆ ಸಂಸದೆ/ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಕ್ರಿಕೆಟ್ ಆಟದ ಭಂಗಿ ಹೇಗಿದೆ?

ಮುಗ್ಧ ಮನಸುಗಳ ಜತೆಗೆ ರಮ್ಯಾ ಬ್ಯಾಟ್ ಬೀಸಿದ್ದು ಹೀಗೆ

ಮುಗ್ಧ ಮನಸುಗಳ ಜತೆಗೆ ರಮ್ಯಾ ಬ್ಯಾಟ್ ಬೀಸಿದ್ದು ಹೀಗೆ

ರವೀಂದ್ರ ಶ್ರೀಕಂಠಯ್ಯ, ಲಿಂಗರಾಜುಗಳ ಕಾಟವಿಲ್ಲದೆ ಮುಗ್ಧ ಮನಸುಗಳ ಜತೆಗೆ ನಟಿ ರಮ್ಯಾ ಬ್ಯಾಟ್ ಬೀಸಿದ್ದು ಹೀಗೆ. ನಟಿ ರಮ್ಯಾ ನಮ್ಮ ಕಣ್ಣೆದುರಿಗೇ ಬಂದು ಕ್ರಿಕೆಟ್ ಆಡಿದ್ದನ್ನು ನೋಡಿ ನನಸೋ ಕನಸೋ ಎಂದು ಮೂಕವಿಸ್ಮಿತರಾದರು.

ಕ್ರಿಕೆಟ್ ಮಧ್ಯೆ ಯುವಕರಲ್ಲಿ ಮತಯಾಚಿಸಿದರಾ ರಮ್ಯಾ?

ಕ್ರಿಕೆಟ್ ಮಧ್ಯೆ ಯುವಕರಲ್ಲಿ ಮತಯಾಚಿಸಿದರಾ ರಮ್ಯಾ?

ಕ್ರಿಕೆಟ್ ಮಧ್ಯೆ ಸುತ್ತಮುತ್ತ ನೆರೆದಿದ್ದ ಯುವಕರಿಗೆ ' ಏಯ್, ನನ್ಗೇ ಓಟ್ ಹಾಕ್ರೋ... ಪ್ಲೀಸ್' ಎಂದು ಕೇಳಿದರಾ? ಗೊತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+