ಸರಕಾರಿ ಇಂಜಿನಿಯರಿಗೆ ಸ್ಟುಪಿಡ್ ಅಂದ ಸಂಸದೆ ರಮ್ಯಾ

ಸೋಮವಾರ ರಾತ್ರಿ ಮತ್ತು ಮಂಗಳವಾರ ತಾಲೂಕಿನ ಕೆ ಶೆಟ್ಟಹಳ್ಳಿ ಹೋಬಳಿಯ ಕೆಲವು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಉದ್ದಟತ ತೋರಿದ್ದಾರೆ. ಹೇಳಿಕೇಳಿ ಅದು ಸಂಸದೆ ದಿವ್ಯಸ್ಪಂದನಾರ ಜನ'ಸ್ಪಂದನಾ' ಕಾರ್ಯಕ್ರಮ. ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಸಂಸದೆಗೆ,
'ಗಣಂಗೂರು ಮತ್ತು ಗೌಡಹಳ್ಳಿಗಳಲ್ಲಿ ಕುಡಿಯಲು ಸರಿಯಾಗಿ ನೀರು ಇಲ್ಲ' ಎಂದು ಗ್ರಾಮಸ್ಥರು ಸಂಸದೆ ರಮ್ಯಾಗೆ ಅಲವತ್ತುಕೊಂಡರು. ಅದನ್ನು ಕೇಳಿ ಕೆಂಡಾಮಂಡಲರಾದ ಹಳೆಯ ನಟಿ/ ಹಾಲಿ ರಾಜಕಾರಣಿ ರಮ್ಯಾ, ಮಂಡ್ಯ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಹನುಮಂತಯ್ಯ ಅವರನ್ನುದ್ದೇಶಿಸಿ 'ಸ್ಟುಪಿಡ್! ಸುಮ್ಮನೆ ಬುರುಡೆ ಬಿಡ್ತೀಯಾ? ಜನಕ್ಕೆ ಸುಮ್ಮನೆ ನೀರು ಬಿಡೋಕ್ಕಾಗೊಲ್ವಾ' ಎಂದು ತರಾಟೆಗೆ ತೆಗೆದುಕೊಂಡರು.
'ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಆ ಬಗ್ಗೆ ನಿಗಾ ವಹಿಸಿ. ಅಲ್ಲದೇ ಗ್ರಾಮದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ತೋರುವ ಅಧಿಕಾರಿಗಳಿಗೆ ಮೈ ಚಳಿ ಬಿಡುಸುತ್ತೇನೆ' ಎಂದು ಅಧಿಕಾರಿಗಳಿಗೆ ನೀರು ಕುಡಿಸಿದರು.
ಅದೇ ವೇಳೆ ಮಂಡ್ಯ ZPಯ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಪಿ ಸಿ ಜಯರಾಂ ಅವರ ಮೊಬೈಲಿಗೆ ಕರೆ ಮಾಡಿದ ರಮ್ಯಾ, ಅದೇನು ಮಾಡ್ತೀರೋ ನಂಗಿತ್ತಿಲ್ಲ. ಇನ್ನೆರಡು ವಾರದಲ್ಲಿ ಇಲ್ಲಿನ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡಬೇಕು' ಎಂದು ಎಚ್ಚರಿಕೆಯ ಸಂದೇಶ ನೀಡಿದರು.












Click it and Unblock the Notifications