• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಕಾರಿ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್

|

ಬೆಂಗಳೂರು, ಸೆಪ್ಟೆಂಬರ್ 02: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದಾರೆ.

ಶಿಕ್ಷಕರ ಕಡ್ಡಾಯ ವರ್ಗಾವಣೆಯನ್ನು ತಡೆ ಹಿಡಿದಿರುವುದಾಗಿ ಸುರೇಶ್ ಕುಮಾರ್ ಹೇಳಿದ್ದು, ಇದರ ಬಗ್ಗೆ ಅಂತಿಮ ತೀರ್ಮಾನವನ್ನು ನಾಳೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಹೆಂಡತಿ ಆಸೆ ಈಡೇರಿಸಲು ನಿವೃತ್ತಿಯಾದ ದಿನ ಹೆಲಿಕಾಪ್ಟರ್ ಬುಕ್ ಮಾಡಿದ ಶಿಕ್ಷಕ

ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದಾಗಿ ಒಂದು ಸ್ಥಳದಲ್ಲಿ ಮತ್ತೊಂದು ಸ್ಥಳಕ್ಕೆ ಇಷ್ಟವಿಲ್ಲದಿದ್ದರೂ ಹೋಗಬೇಕಾಗಿತ್ತು. ಸದ್ಯಕ್ಕೆ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದ್ದು, ಪ್ರಸ್ತುತ ಶಿಕ್ಷಕರು ನಿರಾಳರಾಗಿದ್ದಾರೆ.

ಶಿಕ್ಷಕರು ಪರಸ್ಪರ ವರ್ಗಾವಣೆ ಸಹ ಮಾಡಿಕೊಳ್ಳಬಹುದಾಗಿತ್ತು, ಆದರೆ ಇದಕ್ಕೂ ಸದ್ಯ ತಡೆ ಬಿದ್ದಿದೆಯೋ ಅಥವಾ ಪರಸ್ಪರ ವರ್ಗಾವಣೆ ಚಾಲ್ತಿಯಲ್ಲಿದೆಯೋ ಮಾಹಿತಿಯನ್ನು ಶಿಕ್ಷಣ ಸಚಿವರು ನಾಳೆ ನೀಡಲಿದ್ದಾರೆ.

ಹಲವು ಗೊಂದಲ; ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್‌ಗೆ ತಡೆ

ಮುಂದುವರೆದು ಮಾತನಾಡಿದ ಸುರೇಶ್ ಕುಮಾರ್, 'ಹಿಂದಿನ ಸರ್ಕಾರದ 'ಇಂಗ್ಲಿಷ್ ಮಾಧ್ಯಮ ಶಾಲೆ' ವಿಚಾರ ಹಾಗೂ ಕಡ್ಡಾಯ ವರ್ಗಾವಣೆ ವಿಚಾರ ನಮ್ಮ ಮುಂದೆ ಇದೆ. ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ಉಸ್ತುವಾರಿ ನನಗೆ ವಹಿಸಿರುವ ಕಾರಣ ನಿರ್ಧಾರ ತೆಗೆದುಕೊಳ್ಳುವುದು ಸ್ವಲ್ಪ ತಡವಾಗುತ್ತಿದೆ ಎಂದು ಸುರೇಶ್ ಕುಮಾರ್ ಹೇಳಿದರು.

English summary
Education minister Suresh Kumar told that, mandatory transfer for teachers is paused. He also said government will take decision about mandatory transfer tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X