ಮಲ್ಪೆ ಬೀಚಿನಲ್ಲಿ ಜಲಕ್ರೀಡೆ, ಕುಣಿದು ಕುಪ್ಪಳಿಸಲು ತಯಾರಾಗಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ,ಮಾ.11: ಮಲ್ಪೆ ಬೀಚ್‍ ನಲ್ಲಿ ಏಪ್ರಿಲ್ ಎರಡನೇ ವಾರದಲ್ಲಿ 'ಜಲಕ್ರೀಡೆ ಉತ್ಸವ' ನಡೆಸಲು ತೀರ್ಮಾನಿಸಲಾಗಿದ್ದು, ಉತ್ಸವದಲ್ಲಿ ನೃತ್ಯ, ನಾನಾ ಕ್ರೀಡೆ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ವಿಶಾಲ್ ಅವರು, 'ಉತ್ಸವಕ್ಕೆ 3 ಲಕ್ಷ ರೂ ಬಿಡುಗಡೆಗೊಳಿಸಲಾಗುವುದು. ಮಲ್ಪೆ ಬೀಚ್ ಬಳಿ 226 ಲಕ್ಷ ರೂ ವೆಚ್ಚದ ಬೋಟ್ ಜೆಟ್ಟಿ, ರಸ್ತೆಗೆ ಇಂಟರ್ ಲಾಕ್, ಟಿಕೆಟ್ ಕೌಂಟರ್, ಪ್ರವಾಸಿ ತಂಗುದಾಣ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ' ಎಂಬ ಮಾಹಿತಿ ನೀಡಿದರು.[ವೃಕ್ಷರಕ್ಷ-ವಿಶ್ವರಕ್ಷ : ಉಡುಪಿಯಲ್ಲಿ ಬೃಹತ್ ಜಾಗೃತ ಸಮಾವೇಶ]

Malpe beach to host Water sports Festival at Udupi

ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಮತ್ತು ಶಾಸಕ ಪ್ರಮೋದ್ ಮಧ್ವರಾಜ್ , ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಪೌರಾಯುಕ್ತ ಮಂಜುನಾಥಯ್ಯ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಲ್ಪೆ ಬೀಚ್ ಉಸ್ತುವಾರಿಯ ಸುದೇಶ್ ಶೆಟ್ಟಿ, ಕೋಸ್ಟಲ್ ಟೂರಿಸಂ ನ ಮನೋಹರ ಶೆಟ್ಟಿ ನೇತೃತ್ವದಲ್ಲಿ ಸಭೆ ಕೈಗೊಳ್ಳಲಾಯಿತು.[ಉಡುಪಿಯಲ್ಲಿ 'ಹೆಲಿ ಟೂರಿಸಂ', ರಾಜ್ಯದಲ್ಲೇ ಪ್ರಥಮ]

ಉತ್ಸವಕ್ಕೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳೇನು?

* ಪ್ರವಾಸಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವುದರಿಂದ ಉಂಟಾಗುವ ಜೀವಹಾನಿ ಮತ್ತಿತರ ಅನಾಹುತಗಳನ್ನು ತಡೆಯುವ ನಿಟ್ಟಿನಲ್ಲಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಲು ತಿಳಿಸಲಾಗಿದೆ.

* ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯದಂತೆ ಎಚ್ಚರಿಕೆಯ ಬೋರ್ಡ್ ಗಳನ್ನು ಹಾಗೂ ಪೋಸ್ಟರ್ ಗಳನ್ನು ಹಾಕುವಂತೆ ತಿಳಿಸಲಾಗಿದೆ.[ಪ್ರೀತಿ ಪಾತ್ರರೊಂದಿಗೆ ಪ್ರವಾಸದ ಐಡಿಯಾ ತಲೆಯಲ್ಲಿದೆಯೇ?]

* ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರವಾಸಿ ಸ್ಥಳಗಳ ಕುರಿತು ಹೆಚ್ಚಿನ ಸಂಖ್ಯೆಯ ಹೋರ್ಡಿಂಗ್ ಅಳವಡಿಸುವಂತೆ ಸೂಚಿಸಲಾಗಿದೆ.

* ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಟ್ಯಾಕ್ಸಿ ಪಡೆದವರಿಗೆ ಮತ್ತು ಆಸಕ್ತರಿಗೆ 3 ದಿನಗಳ ಟೂರಿಸ್ಟ್ ಗೈಡ್ ತರಬೇತಿಯನ್ನು ನೀಡಲಾಗುತ್ತದೆ.[ಏರಿದ ಬಿಸಿಲ ಧಗೆ, ಮಡಿಕೆ ವ್ಯಾಪಾರ ಬಲು ಜೋರು]

* ಉಡುಪಿ ಕೃಷ್ಣ ಮಠ ಮತ್ತು ಮಲ್ಪೆ ಬೀಚ್‍ ನಲ್ಲಿ ಪೊಲೀಸರಿಗೆ ಗಸ್ತು ತಿರುಗಲು ಅನುಕೂಲವಾಗುವಂತೆ ಉಡುಪಿ ಟೂರಿಸ್ಟ್ ಚೀತಾ ಹೆಸರಿನಲ್ಲಿ 2 ಪಲ್ಸರ್ ಬೈಕ್ ಗಳನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಒದಗಿಸಲಾಗುತ್ತದೆ.

* ಮಲ್ಪೆ ಬೀಚ್ ಸ್ವಚ್ಛಗೊಳಿಸಲು 47 ಲಕ್ಷ ರೂ ಮೌಲ್ಯದ ಯಂತ್ರ ಖರೀದಿ ಹಾಗೂ ಸೈಂಟ್ ಮೇರಿ ದ್ವೀಪದ ಬಳಿ ಫ್ಲೋಟಿಂಗ್ ಜೆಟ್ಟಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Udupi district Tourism Development Committee will organize a Water Sports Festival on the Malpe beach in the second week of April said by Dr, R. Vishal, Deputy Commissioner, Udupi.
Please Wait while comments are loading...