INDIA PM Candidate: ದೇಶದಲ್ಲಿ ದಲಿತರು ಪ್ರಧಾನಿ ಆಗಬಾರದಾ?: ಕಾಂಗ್ರೆಸ್ ಶಾಸಕ ಹೀಗಂದಿದ್ಯಾಕೆ?
ಕೋಲಾರ, ಡಿಸೆಂಬರ್ 20: ಇಂಡಿಯಾ ಮೈತ್ರಿ ಕೂಟದಲ್ಲಿ ಲೋಕಸಭಾ ಚುನಾವಣೆಯ ತಯಾರಿ ನಡೆದಿದೆ. ಈ ಮಧ್ಯೆ ಮೈತ್ರಿಯಿಂದ ಪ್ರಧಾನಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸೂಕ್ತ ವಿಚಾರ ಬಹಿರಂಗವಾಗಿದೆ. ಮೈತ್ರಿಕೂಟದ ಈ ನಿರ್ಧಾರ ಸರಿಯಾಗಿದೆ. ಯಾಕೆ ದೇಶದಲ್ಲಿ ದಲಿತರು ಪ್ರಧಾನಿ ಆಗಬಾರದಾ ಎಂದು ಶಾಸಕರೊಬ್ಬರು ಕೇಳಿದ್ದಾರೆ.
ಕೋಲಾರದಲ್ಲಿ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅವರು ಇಂಡಿಯಾ ಮೈತ್ರಿಯ ನಿರ್ಧಾರ ಸ್ವಾಗತಿಸಿದ್ದಾರೆ. ಅಲ್ಲದೇ ಅವರು ದಲಿತರು ಪ್ರಧಾನಿ ಆಗಬಾರದಾ? ಎಂದು ಕೇಳುವ ಮೂಲಕ ಬಿಜೆಪಿ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರಕ್ಕೆ ಹೋರಾಟ ಮಾಡಿರುವ ಇತಿಹಾಸವಿದೆ. ಇಲ್ಲಿ ದಲಿತರಿಗೂ ಉನ್ನತ ಸ್ಥಾನ ಇದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ನಲ್ಲಿ ರಾಜೀವ್ ಗಾಂಧಿ ಆಕಸ್ಮಿಕವಾಗಿ ನಿಧನದ ಬಳಿಕ ನರಸಿಂಹರಾವ್ ಅವರನ್ನು ಪ್ರಧಾನಿ ಮಾಡಿದ್ದರು. ಅಧಿಕಾರಕ್ಕೆ ಆಸೆ ಪಟ್ಟಿದ್ರೆ ಸೋನಿಯಾ ಗಾಂಧಿ ಅವತ್ತೇ ಪ್ರಧಾನಿ ಆಗಬಹುದಿತ್ತು. 10 ವರ್ಷಗಳ ಕಾಲ ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿ ಮಾಡಿದರು.
ಪ್ರಧಾನಿ ಅಭ್ಯರ್ಥಿ ವಿಚಾರ ಸಂತಸ ತಂದಿದೆ
ರಾಹುಲ್ ಗಾಂಧಿ ಸಹ ಚಿಕ್ಕ ವಯಸ್ಸಿಗೆ ಪ್ರಧಾನಿ ಅಗಬಹುದಿತ್ತು. ಗಾಂಧಿ ಕುಟುಂಬ ಅಧಿಕಾರಕ್ಕೆ ಆಸೆ ಪಟ್ಟಿಲ್ಲ. ಮಲ್ಲಿಕಾರ್ಜುನ ಖರ್ಗೆ ಈಗ ರಾಷ್ಟ್ರೀಯ ನಾಯಕರಾಗಿ ಬೆಳೆದಿದ್ದಾರೆ. INDIA ಒಕ್ಕೂಟದಿಂದ ಪ್ರಧಾನಿ ಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರ ಸಂತಸ ತಂದಿದೆ ಎಂದು ಅವರು ವಿವರಿಸಿದರು.

ಕಾಂಗ್ರೆಸ್ ಪಕ್ಷದಿಂದ ಮಾತ್ರ ದಲಿತರಿಗೆ ಸ್ಥಾನಮಾನ ಸಿಗುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಜಾತಿ ಭೇದ ಇಲ್ಲ, ಖರ್ಗೆ ಆಯ್ಕೆ ಯಾರು ವಿರೋಧ ಮಾಡುವುದಿಲ್ಲ. ಈ ಎಲ್ಲ ಲೆಕ್ಕಚಾರದಲ್ಲಿ ಪರಿಗಣಿಸಿ ಇಂಡಿಯಾ ಒಕ್ಕೂಟದಿಂದ ಆಯ್ಕೆ ಮಾಡಲಾಗಿದೆ. ಮೊನ್ನೆ ನಡೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಒಂದು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ.
ಆದರೆ ಪಂಚರಾಜ್ಯ ಚುನಾವಣೆಯಲ್ಲಿ ಮತಗಳ ಅಂಕಿ ಅಂಶದಲ್ಲಿ ಶೇಖಡಾವಾರು ಕಾಂಗ್ರೆಸ್ ಮುಂದಿದೆ. ಇಂಡಿಯಾ ಮೈತ್ರಿಕೂಟದ ನಿರ್ಧಾರಕ್ಕೆ ಸ್ವಾಗತ ಮಾಡುವುದಾಗಿ ಅವರು ಪುನರುಚ್ಚರಿಸಿದರು.












Click it and Unblock the Notifications