'ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿಗೆ ನಾಮಕಾವಾಸ್ತೆ ಅಧ್ಯಕ್ಷ'
ಬೆಳಗಾವಿ, ಏಪ್ರಿಲ್ 17: ಮಲ್ಲಿಕಾರ್ಜುನ ಖರ್ಗೆ ರವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ಅವರಿಗೆ ಕವಡೆ ಕಿಮ್ಮತ್ತು ಇಲ್ಲ. ಯಾವ ಸಭೆ ಸಮಾರಂಭದಲ್ಲೂ ಅವರಿಗೆ ಕವಡೆ ಕಿಮ್ಮತ್ತು ಇಲ್ಲ, ಯಾವುದೇ ಸಭೆ ಸಮಾರಂಭದಲ್ಲಿ ಯಾವುದೇ ಸ್ಥಾನಮಾನ ಇರುವುದಿಲ್ಲ. ಮಲ್ಲಿಕಾರ್ಜುನ್ ಖರ್ಗೆ ಅವರು ನಾಮಕವಾಸ್ತೆ ಅಧ್ಯಕ್ಷ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಹೇಳಿದರು.
'ಜನಾಕ್ರೋಶ ಯಾತ್ರೆ' ಸಂಬಂಧ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಸರ್ವಾಧಿಕಾರಿಗಳು, ಅವರು ಹೇಳಿದ ಹಾಗೆ ಕಾಂಗ್ರೆಸ್ ಆಡಳಿತ ನಡೆಯುತ್ತಿದೆಯೇ ಹೊರತು ಮಲ್ಲಿಕಾರ್ಜುನ್ ಖರ್ಗೆಯವರದ್ದಲ್ಲ ಎಂದ ಅವರು, ಡಾ. ಬಾಬಾಸಾಹೇಬ ಅಂಬೇಡ್ಕರ್ ರವರು ಕರ್ನಾಟಕ್ಕೆ ಬಂದು 100 ವರ್ಷ ಆಗಿದೆ. ಆದರೆ ಬೆಳಗಾವಿಯಲ್ಲಿ ಮಹಾತ್ಮಗಾಂಧೀಜಿ ಬಂದುಹೋದಕ್ಕೆ ಕಾರ್ಯಕ್ರಮ ಮಾಡಿದರು. ಆದರೆ ಸಹೋದರಿ ಶಶಿಕಲಾ ಜೊಲ್ಲೆ ರವರು ಡಾ. ಬಾಬಾಸಾಹೇಬರು ಬೆಳಗಾವಿಗೆ ಬಂದುಹೋಗಿ 100 ವರ್ಷ ಆಗಿದೆ ಈ ಎರಡೂ ಸೇರಿ ಕಾರ್ಯಕ್ರಮ ಮಾಡಿ ಎಂದು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರೆ ಯಾರ ಬಾಯಿಯಿಂದ ಶಬ್ದ ಬಂದಿಲ್ಲ ಎಂದು ಟೀಕಿಸಿದರು.

ದಲಿತ ವಿರೋಧಿ ಕಾಂಗ್ರೆಸ್ ಪಕ್ಷವು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಎರಡು ಬಾರಿ ಲೋಕಸಭೆಯ ಚುನಾವಣೆÉಯಲ್ಲಿ ಸೋಲಿಸಿದೆ ಎಂದು ದೂರಿದರು. ಬೆಲೆ ಏರಿಕೆ ಸಮಸ್ಯೆ, ಕಾಂಗ್ರೆಸಿನ ದುರಾಡಳಿತ ಮತ್ತು ಕೇಂದ್ರದ ವಿರುದ್ಧ ಕಾಂಗ್ರೆಸಿನ ಅಪಪ್ರಚಾರದ ಬಗ್ಗೆ ಜನಜಾಗೃತಿಯ ಹೋರಾಟವನ್ನು ತಾವೆಲ್ಲರೂ ಬೆಂಬಲಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಮನವಿ ಮಾಡಿದರು
5 ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ರವರು ಹೇಳಿದರು. ಆದರೆ 5 ಕಿಲೋ ಅಕ್ಕಿ ಕೊಟ್ಟವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ; ಅಕ್ಕಿಯ ಒಂದು ಚೀಲದ ಮೇಲೆ ಸಿದ್ದರಾಮಯ್ಯ ನವರ ಪೋಟೊ ಹಾಕಿಕೊಂಡಿದ್ದಾರೆ ಎಂದು ಆಕ್ಷೇಪಿಸಿದರು ರಾಜ್ಯದಲ್ಲಿ ಎಲ್ಲ ದಿನಬಳಕೆ ವಸ್ತುಗಳ ದರ ಹೆಚ್ಚಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನವರು ದಲಿತರ ಹಣ 38 ಸಾವಿರ ಕೋಟಿ ರೂ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ; ಅವರನ್ನು ಕ್ಷಮಿಸಬಾರದು ಎಂದು ವಿನಂತಿಸಿದರು.
ಸಿಎಂಗೇ ಸವಾಲು ಹಾಕಿದ ಛಲವಾದಿ ನಾರಾಯಣಸ್ವಾಮಿ
ಸಿದ್ದರಾಮಯ್ಯನವರೇ, ಬಾಬಾ ಸಾಹೇಬ ಅಂಬೇಡ್ಕರರನ್ನು ಸಾವರ್ಕರ್ ಸೋಲಿಸಿದ್ದಾಗಿ ಋಜುವಾತು ಪಡಿಸಿದರೆ ನನ್ನ ವಿಪಕ್ಷ ಸ್ಥಾನಕ್ಕೆ ಇವತ್ತೇ ರಾಜೀನಾಮೆ ಕೊಡುತ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಸವಾಲು ಹಾಕಿದರು. ಆ ಸುಳ್ಳನ್ನು ನೀವು ಸಾಬೀತು ಮಾಡದಿದ್ದರೆ ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧರಾಗಿ ಎಂದು ಆಗ್ರಹಿಸಿದರು. ನಿಮಗೆ ವಯಸ್ಸೂ ಆಗಿದೆ. ಎಲ್ಲ ಪದವಿ ಅನುಭವಿಸಿದ್ದೀರಿ. ಇದಕ್ಕಿಂತ ಹೆಚ್ಚಿನ ಪದವಿ ನಿಮಗೆ ಕಾಂಗ್ರೆಸ್ಸಿನಲ್ಲಿ ಸಿಗಲಾರದು ಎಂದು ತಿಳಿಸಿದರು.
ನನಗೆ ಮೊದಲು ಆತ್ಮೀಯರಾಗಿದ್ದ ಸಿದ್ದರಾಮಯ್ಯನವರು ಈ ಹಿಂದೆ ಇಷ್ಟು ಸುಳ್ಳು ಹೇಳುತ್ತಿರಲಿಲ್ಲ. ಈಗ ಅವರನ್ನು ಪ್ರಶ್ನಿಸಿದರೆ ಹೇಗಾದರೂ ಮಾಡಿ ಅಧಿಕಾರದಲ್ಲಿ ಇರಬೇಕಲ್ಲಪ್ಪ; ಕಾಂಗ್ರೆಸ್‍ನವರು ಸುಳ್ಳು ಹೇಳದಿದ್ರೆ ಬಿಡ್ತಾರ ಎನ್ನುತ್ತಾರೆ ಎಂಬಂತೆ ಮಾತನಾಡುತ್ತಿದ್ದಾರೆ. ಬಾಬಾ ಸಾಹೇಬ ಅಂಬೇಡ್ಕರರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಎಂಬುದಾಗಿ ಬಾಬಾ ಸಾಹೇಬರೇ ಬರೆದಿದ್ದಾರೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಇದಕ್ಕಿಂತ ಅಪ್ಪಟ ಸುಳ್ಳು ಬೇರೇನಾದರೂ ಇದೆಯೇ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು. ಇದನ್ನು ಅವರಿಗೆ ಚೋಟಾ ಖರ್ಗೆ ಹೇಳಿಕೊಟ್ಟಿದ್ದಾಗಿ ಆರೋಪಿಸಿದರು. ಮೋಟಾ ಖರ್ಗೆ ಮೇಲಿದ್ದಾರೆ ಎಂದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಕೇವಲ 50 ಲಕ್ಷ ಹೂಡಿಕೆ ಮಾಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಸಂಪೂರ್ಣವಾಗಿ ಆ ಟ್ರಸ್ಟಿನ ಹಿಡಿತ ಸಾಧಿಸಿದ್ದರು. ನಂತರ 3 ಕೋಟಿ ಬಂಡವಾಳ ಹಾಕಿ ಒಂದೇ ವರ್ಷದಲ್ಲಿ ಆ ಟ್ರಸ್ಟ್ 150 ಕೋಟಿ ಸಂಪಾದನೆ ಮಾಡಿತ್ತು. 3 ಕೋಟಿ ಬಂಡವಾಳ ಹಾಕಿದ ಆಸ್ತಿಗಳು 150 ಕೋಟಿ ಆಗುತ್ತದೆ. ಇದು ರಾಹುಲ್ ಬಾಬಾ ಅವರ ಅಭಿವೃದ್ಧಿಯ ಮಾಡೆಲ್. ಬಹುಶಃ ಅಂಬಾನಿಯವರಿಗೂ ಇದನ್ನು ಮಾಡಲು ಸಾಧ್ಯವಾಗಿಲ್ಲ ಎಂದು ವಿಜಯೇಂದ್ರ ಅವರು ತಿಳಿಸಿದರು. ಅಂಥ ಸಾಧನೆ, ಸಂಪಾದನೆಯನ್ನು ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರು ಯಂಗ್ ಇಂಡಿಯ ಟ್ರಸ್ಟ್ ಮೂಲಕ ಮಾಡಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು.
ಇವತ್ತು ಜಾರಿ ನಿರ್ದೇಶನಾಲಯದ (ಇ.ಡಿ) ವಿರುದ್ಧ ಕಾಂಗ್ರೆಸ್ಸಿನವರು ಬೊಬ್ಬೆ ಹೊಡೆಯುತ್ತಾರೆ. ಮೋದಿ ಸರಕಾರ ಬಂದ ಬಳಿಕ ಇ.ಡಿ., ಕಾಂಗ್ರೆಸ್ ಮೇಲೆ ಗೂಂಡಾಗರ್ದಿ ಮಾಡುತ್ತಿದೆ ಎಂದು ಆರೋಪಿಸುತ್ತಾರೆ. ಇ.ಡಿ. ಪಾರದರ್ಶಕ ತನಿಖೆಯ ಪರಿಣಾಮವಾಗಿ ಸ್ವಾತಂತ್ರ್ಯ ಹೋರಾಟಗಾರರು ಪ್ರಾರಂಭಿಸಿದ ಟ್ರಸ್ಟ್, ದೇಶದ ಯುವರಾಜ ಎಂದು ಭಾವಿಸಿದವರ ಕೈಯಲ್ಲಿ ಬಂದ ಮೇಲೆ ಹಗರಣವು ಬೆಳಕಿಗೆ ಬಂತು. ರಾಹಲ್ ಗಾಂಧಿಯವರು ದೇಶದ ಪ್ರಧಾನಿ ಆಗುವ ಕನಸು ಇವತ್ತು ದೂರವಾಗಿದೆ ಎಂದು ತಿಳಿಸಿದರು.
ಬೆಲೆ ಏರಿಕೆ- ಭ್ರಷ್ಟಾಚಾರದ ಕಾಂಗ್ರೆಸ್ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸಲು ನಾವು ಜನಾಕ್ರೋಶ ಯಾತ್ರೆ ಮೂಲಕ ಹೊರಟಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸಲ್ಮಾನರನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಸರಕಾರಿ ಕಾಮಗಾರಿಗಳಲ್ಲಿ ಶೇ 4 ರಷ್ಟು ಮೀಸಲಾತಿ ನೀಡಿದ್ದಾರೆ. ಇದು ಹಿಂದೂಗಳಿಗೆ ಅವಮಾನ ಮಾಡುವ ಕ್ರಮ ಎಂದು ಟೀಕಿಸಿದರು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ದುರುಪಯೋಗ ಮಾಡಿಕೊಂಡ ಕ್ರಮವನ್ನು ಆಕ್ಷೇಪಿಸಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವೆ ಮತ್ತು ಶಾಸಕಿ ಶ್ರೀಮತಿ ಶಶಿಕಲಾ ಜೊಲ್ಲೆ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಅಭಯ್ ಪಾಟೀಲ್, ದುರ್ಯೋಧನ ಮಹಾಲಿಂಗಪ್ಪ ಐಹೊಳೆ, ವಿಠ್ಠಲ್ ಹಲಗೇಕರ್, ನಿಖಿಲ್ ಕತ್ತಿ, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಮೈಸೂರು ಸಂಸದ ಯದುವೀರ್ ಒಡೆಯರ್, ವಿಧಾನಪರಿಷತ್ ಮಾಜಿ ಸದಸ್ಯ ಮಹಂತೇಶ್ ಕವಟಗಿಮಠ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹಾಗೂ ಮತ್ತಿತರ ಮುಖಂಡರು ಭಾಗವಹಿಸಿದ್ದರು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications