ಟ್ವಿಟ್ಟರಲ್ಲಿ #ImplementKalasaBanduri ಟ್ರೆಂಡ್ ಆಗಲೇಬೇಕ್!

Posted By:
Subscribe to Oneindia Kannada

ಮದುವೆ ಮುಂಜಿಯ ವಾರ್ಷಿಕೋತ್ಸವವೆಂದರೆ ಅಲ್ಲೊಂದು ಸಂಭ್ರಮವಿರುತ್ತದೆ. ಆದರೆ, ಹನಿಹನಿ ನೀರಿಗಾಗಿ ನಡೆಸುತ್ತಿರುವ ಹೋರಾಟಕ್ಕೇ ಒಂದು ವರ್ಷ ಸಂದಿದೆಯೆಂದು ಸಂಭ್ರಮದಿಂದ ಆಚರಿಸಬೇಕೋ, ಈ ಹೋರಾಟವನ್ನು ಕಡೆಗಣಿಸಿದವರನ್ನು ಹಿಡಿದುಕೊಂಡು ಬಾರಿಸಬೇಕೋ?

ಕಳಸಾ ಬಂಡೂರಿ ನೀರಿನ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿರುವ ನೋವಿನ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ಮಾಡುವುದಕ್ಕೆ ಸಾಮಾಜಿಕ ಜಾಲತಾಣದ ಕನ್ನಡಿಗರು ತಯಾರಾಗಿದ್ದಾರೆ. ಜುಲೈ 13ರ ಬುಧವಾರ ಬೆಳಿಗ್ಗೆ 7 ಗಂಟೆಯಿಂದ #ImplementKalasaBanduri ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಕನ್ನಡಿಗರು ಟ್ವೀಟ್ ಯುದ್ಧವನ್ನು ಆರಂಭಿಸಲಿದ್ದಾರೆ.

ನಾಡಿನ ಗಣ್ಯರಾದ ನಟ ಶಿವರಾಜ್ ಕುಮಾರ್, ದೊಡ್ಡಣ್ಣ, ಸ್ವಾಮಿಗಳಾದ ಬಸವ ಮೃತ್ಯುಂಜಯ, ಡಾ. ಶಿವಕುಮಾರ ಸ್ವಾಮೀಜಿ, ನಿರ್ಮಾಲಾನಂದ ಸ್ವಾಮೀಜಿ, ಹಲವಾರು ಕವಿಗಳು, ಚಂದ್ರಶೇಖರ್ ಕಂಬಾರರಂತ ದೊಡ್ಡ ಸಾಹಿತಿಗಳು ಹೋರಾಟಗಾರರಿಗೆ ಶುಭಕೋರಿ ಅವರ ವಿಡಿಯೋ ಮೂಲಕ ಬೆಂಬಲಿಸಿದ್ದಾರೆ. ಖ್ಯಾತನಾಮರು ಮಾತ್ರ ಬೆಂಬಲಿಸಿದರೆ ಸಾಕಾಗುವುದಿಲ್ಲ, ಇಡೀ ನಾಡಿನ ಪ್ರತಿ ಕನ್ನಡಿಗರು ಈ ಹೋರಾಟಕ್ಕೆ ಶಕ್ತಿ ನೀಡಬೇಕು. [ಕಳಸಾ ಬಂಡೂರಿ ಹೋರಾಟಕ್ಕೆ ಐಟಿಬಿಟಿ ಕನ್ನಡಿಗರ ಕಿಚ್ಚು]

Make video in support of Kalasa Banduri protest

ಕಾವೇರಿ ನೀರನ್ನು ತಮಿಳುನಾಡಿಗೆ, ಮಹದಾಯಿ ನದಿಯ ನೀರನ್ನು ಗೋವಾಕ್ಕೆ ಕೊಟ್ಟರೆ ಕನ್ನಡಿಗರು ಏನ್ ಮಾಡ್ಬೇಕು? ಕೇಂದ್ರ ಸರ್ಕಾರ - ರಾಜ್ಯ ಸರ್ಕಾರಗಳು ಒಂದು ನಿಲುವಿಗೆ ಬಂದು ಸಮಸ್ಯೆ ಬಗೆಹರಿಸುವಂತಾಗಲೆಂದು ಒತ್ತಾಯಿಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ಕನ್ನಡಿಗರು ಮಾತ್ರವಲ್ಲ ಕರ್ನಾಟಕದ ಗಾಳಿ ನೀರು ಸೇವಿಸುತ್ತಿರುವ ಪ್ರತಿ ನಾಗರಿಕರು ಕೈಜೋಡಿಸಬೇಕು.

ಕನ್ನಡಿಗರು ಮಾಡಬೇಕಿರುವುದು ಇಷ್ಟೇ : ಎಲ್ಲರೂ ನಾಳೆ ನಿಮ್ಮ ನಿಮ್ಮ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಒಂದು ಸೆಲ್ಫೀ ವಿಡಿಯೋವನ್ನು "I SUPPORT KALASA BANDURI FROM 'YOUR PLACE'" ಅಂತ ಮಾಡಿ ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿರಿ.

Your Place ಅಂತ ಇದ್ದಲ್ಲಿ ನಿಮ್ಮ ಊರನ್ನು ನಮೂದಿಸಿ. ಯಾಕೆ ನಿಮ್ಮ ಊರಿನ ಹೆಸರು ಅಂದ್ರೆ, ಇಡೀ ದೇಶಕ್ಕೆ ಗೊತ್ತಾಗಲಿ, ಪೂರ್ತಿ ಕರ್ನಾಟಕ ಜನ ಕಳಸಾ ಬಂಡೂರಿಗೆ ಸಪ್ಪೋರ್ಟ್ ಮಾಡ್ತಿದಾರೆ ಎಂದು. [ಏನಿದು ಕಳಸಾ-ಬಂಡೂರಿ ಯೋಜನೆ?]

Make video in support of Kalasa Banduri protest

ಉದಾಹರಣೆಗೆ :

I SUPPORT KALASA BANDURI FROM ಹಾನಗಲ್
I SUPPORT KALASA BANDURI FROM ಬೆಂಗಳೂರು
I SUPPORT KALASA BANDURI FROM ಕುಂದಾಪುರ

ಹೀಗೆ ಜುಲೈ 13ರಂದು ಬುಧವಾರ ಫೇಸ್ ಬುಕ್ ನಲ್ಲಿ ಮತ್ತು ಟ್ವಿಟ್ಟರಲ್ಲಿ ಲಕ್ಷಾಂತರ ವಿಡಿಯೋ ಹರದಾಡಲಿ. ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಬರಲಿ. ಬೆಂಬಲಿಸದೆ ತಣ್ಣಗೆ ಕುಳಿತವರಿಗೂ ಬಿಸಿ ಮುಟ್ಟಲಿ. ಇದು ಪಕ್ಷಾತೀತ ಮತ್ತು ನಮ್ಮ ಜನರ ಕೂಗಿಗೆ ಬಲ ಕೊಡುವ ಹೋರಾಟ. ಎಲ್ಲರೂ ಇದನ್ನು ಬೆಂಬಲಿಸೋಣ. [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The fight for water from Mahadayi river to Karnataka has almost completing one year. The Kalasa Banduri Nala Project to provide water to North Karnataka districts has not progressed even an inch. So, IT BT Kannadigaru of Karnataka have taken an initiative in support of the fight and have requested Kannadigas to upload selfie in support of the protest.
Please Wait while comments are loading...