• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಮ್ಮಿಶ್ರ ಸರ್ಕಾರದ ಮೊದಲ ಐಎಎಸ್‌ ವರ್ಗಾವಣೆ: ಯಾವ ಇಲಾಖೆಗೆ ಯಾರು?

By Nayana
|

ಬೆಂಗಳೂರು, ಜು.13: ರಾಜ್ಯ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಬಜೆಟ್‌ ಅಧಿವೇಶನ ಮುಗಿದ ಕೆಲವೇ ನಿಮಿಷಗಳಲ್ಲೇ ಆಡಳಿತಕ್ಕೆ ಭಾರಿ ಸರ್ಜರಿ ಮಾಡಲಾಗಿದ್ದು, 20 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಲ್‌ ಕೆ ಅತೀಕ್‌ ಅವರಿಗೆ ಕೊನೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜಿಸಿದೆ. ಸಿದ್ದರಾಮಯ್ಯ ಆಪ್ತ ಅಧಿಕಾರಿಗಳಿಗೆ ಹುದ್ದೆ ದೊರೆತಿದೆ.

ಸಚಿವರೇ ಹೇಳ್ತಿದ್ದಾರೆ ಟೀಚರ್ಸ್‌ ವರ್ಗಾವಣೆ 15 ದಿನದಲ್ಲಿ ಪಕ್ಕಾ

ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಂತೆ ಯಾವುದೇ ಹುದ್ದೆ ನೀಡಿರಲಿಲ್ಲ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನೀಡಿದ್ದರು. ಡಿ. ರಂದೀಪ್‌ ಬಿಬಿಎಂಪಿ ಹೆಚ್ಚುವರಿ ಆಯುಕ್ತರಾಗಿ, ಜಾವೇದ್‌ ಅಖ್ತರ್‌, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಟಿಸಿಎಲ್‌ ಎಂಡಿಯಾಗಿಯೂ ಹೆಚ್ಚುವರಿ ಹೊಣೆ, ಡಾ. ನಾಗಲಾಂಬಿಕಾದೇವಿಗೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ, ಅಂಜುಂ ಪರ್ವೇಜ್‌ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಕಾರ್ಯದರ್ಶಿಯಾಗಿ, ನವೀನ್‌ ರಾಜ್‌ ಸಿಂಗ್‌ ಕರ್ನಾಟಕ ಮಿನರಲ್ಸ್ ಕಾರ್ಪೊರೇಷನ್‌ ಎಂಡಿಯಾಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Major surgery for state governments machinery as 20 IAS officers transferred

ಐಎಎಸ್‌ ಅಧಿಕಾರಿಗಳ ಹೆಸರು ಇಲಾಖೆ

ಐಎಎಸ್‌ ಅಧಿಕಾರಿಗಳ ಹೆಸರು ಇಲಾಖೆ
ಜಾವೇದ್ ಅಖ್ತರ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ, ಕೆಪಿಟಿಸಿಎಲ್ ಎಂಡಿ (ಪ್ರಭಾರ)
ಡಾ.ಎನ್.ನಾಗಲಾಂಬಿಕಾ ದೇವಿ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ
ಎಲ್.ಕೆ.ಅತೀಕ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ
ಅಂಜುಮ್ ಪರ್ವೇಜ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ
ನವೀನ್ ರಾಜ್ ಸಿಂಗ್ ಕರ್ನಾಟಕ ರಾಜ್ಯ ಖನಿಜಗಳ ನಿಗಮ (ಎಂಎಂಎಲ್) ವ್ಯವಸ್ಥಾಪಕ ನಿರ್ದೇಶಕ
ಸುಬೋಧ್ ಯಾದವ್ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಹಾಗೂ ಕಲಬುರಗಿ ಪ್ರಾದೇಶಿಕ ಆಯುಕ್ತ (ಪ್ರಭಾರ),
ಪಂಕಜ್ ಕುಮಾರ್ ಪಾಂಡೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ (ಪ್ರಭಾರ)ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ (ಪ್ರಭಾರ).
ಡಾ.ಜೆ.ರವಿಶಂಕರ್ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಎಂಡಿ (ಪ್ರಭಾರ)
ಡಾ.ಪಿ.ಸಿ.ಜಾರ್ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ
ಗುಂಜನ್ ಕೃಷ್ಣ ಕೆಎಸ್‌ಎಸ್‌ಐಡಿಸಿ ಎಂಡಿ
ಡಿ.ರಂದೀಪ್ ಬಿಬಿಎಂಪಿ ಹೆಚ್ಚುವರಿ ಆಯುಕ್ತ (ಆಡಳಿತ)
ವಿ.ಪಿ.ಇಕ್ಕೇರಿ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ
ಎಂ.ದೀಪಾ ಧಾರವಾಡ ಜಿಲ್ಲಾಧಿಕಾರಿ
ಸುಷ್ಮಾ ಗೋಡಬೋಲೆ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ
ಡಾ.ಎಸ್.ಬಿ.ಬೊಮ್ಮನಹಳ್ಳಿ ಯುಕೆಪಿ ಪ್ರಧಾನ ವ್ಯವಸ್ಥಾಪಕ
ಡಾ.ಬಿ.ಆರ್.ಮಮತಾ ರಾಷ್ಟ್ರೀಯ ಜೀವ ಸಂಕುಲ ಯೋಜನೆಯ ಯೋಜನಾ ನಿರ್ದೇಶಕಿ
ನಳಿನಿ ಅತುಲ್ ರಾಯಚೂರು ಜಿಪಂ ಸಿಇಓ
ಶಿಲ್ಪಾ ಶರ್ಮಾ ರಾಯಚೂರು ಉಪ ವಿಭಾಗಾಧಿಕಾರಿ
ಎಂ.ಆರ್.ರವಿಕುಮಾರ್ ಮೈಸೂರು ಮಹಾನಗರ ಪಾಲಿಕೆ ಆಯುಕ್ತ
ಕೆ.ಎಂ.ಜಾನಕಿ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಎಂಡಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Very few minutes after completing legislature session, state government has reshuffled many department's head and earlier principal secretary to chief minister LK Ateeq got posting as principal secretary of RDPR.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more