Karnataka Maize Price: ಮೆಕ್ಕೆಜೋಳ ಕ್ವಿಂಟಾಲ್ ₹1400ಗೆ ಕುಸಿತ, ಇಂದಿನ ಮಾರುಕಟ್ಟೆ ದರಪಟ್ಟಿ
Karnataka Maize Price Today: ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮೆಕ್ಕೆಜೋಳ ಬೆಳೆಯುವುದು ಹೆಚ್ಚು. ಕಳೆದ ವರ್ಷಕ್ಕಿಂತ ಈ ವರ್ಷ ಅಧಿಕ ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ. ಆದರೆ ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದೇ ರೈತರು ಪರಿತಪಿಸುವಂತಾಗಿದೆ. ಇತ್ತ ಸರ್ಕಾರ ಇನ್ನೂ "ಮೆಕ್ಕೆಜೋಳ ಖರೀದಿ ಕೇಂದ್ರ' ತೆರೆದಿಲ್ಲ ಎಂದ ಬಿಜೆಪಿ ಕೂಡಲೇ ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿದೆ. ಇಂದಿನ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ದರವೆಷ್ಟಿದೆ?
ರೈತರ ನಿರೀಕ್ಷೆ ಮೆಕ್ಕೆಜೋಳ ಬೆಲೆಯಲ್ಲಿ ಹುಸಿಯಾಗಿದೆ. 2024ರಲ್ಲಿ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 54 ಲಕ್ಷ ಮೆಟ್ರಿಕ್ ಟನ್ ಬೆಳೆ ಬಳೆಯಲಾಗಿತ್ತು. ಈ ವರ್ಷ 17 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಉತಮ್ಮ ಮಳೆಯಿಂದಾಗಿ ಉತ್ತಮ ಬೆಳೆ ಬಂದಿದೆ. ದರೆ ಉತ್ತಮ ಪ್ರತಿ ಕ್ವಿಂಟಾಲ್‌ಗೆ ಉತ್ತಮ ದರ ಸಿಗದೇ ರೈತ ಕಂಗಾಲಾಗಿದ್ದಾನೆ. ಕೆಲವೆಡೆ ಮೆಕ್ಕೆಜೋಳದ ದರವು 1400 ರೂಪಾಯಿವರೆಗೂ ಕುಸಿದಿದೆ.

ರಾಜ್ಯದ ಕೆಲವೆಡೆ ಗರಿಷ್ಠ ದರ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2300 ರೂಪಾಯಿವರೆಗೆ ಇತ್ತು. ಸದ್ಯ ಅದು 1800 ರಿಂದ 1400 ರೂಪಾಯಿ ಕುಸಿತ ಕಂಡಿದೆ. ದರ ಹೆಚ್ಚಾಗಬಹುದೆಂಬ ನಿರೀಕ್ಷೆಯಲ್ಲಿ ಕೆಲವು ರೈತರು ಚೀಲ ಮಾಡಿ ಶೇಖರಿಸಿಟ್ಟುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಹಿಂಗಾರು ಹಂಗಾಮಿಗೆ ಬಿತ್ತನೆ ಹಣ ಬೇಕೆಂದು ಈಗಾಗಲೇ ಮಾರಿದ್ದಾರೆ. ಸದ್ಯ ರಾಜ್ಯದಲ್ಲಿ ಪ್ರತಿ ಕ್ವಿಂಟಾಲ್ ಮಕ್ಕೆಜೋಳದ ದರದಲ್ಲಿ ಮಾರುಕಟ್ಟೆವಾರು ಬೆಲೆ, ಹಿಂದಿನ ಬೆಲೆಯಲ್ಲಿ ಬದಲಾವಣೆ ವಿವರ ಇಲ್ಲಿದೆ.
ಕರ್ನಾಟಕದ ವಿವಿಧೆಡೆ ಮಾರುಕಟ್ಟೆಗಳಲ್ಲಿ ಮೆಕ್ಕೆಜೋಳದ ದರ
* ನವೆಂಬರ್ 19ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಗರಿಷ್ಠ ಮತ್ತು ಕನಿಷ್ಠ 1800 ರೂಪಾಯಿ.
* ನವೆಂಬರ್ 19ರಂದು ಉತ್ತರ ಕನ್ನಡದ ಜಿಲ್ಲೆಯ ಹಳಿಯಾಳ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಗರಿಷ್ಠ ದರ 1870 ರೂ.ಮತ್ತು ಕನಿಷ್ಠ ಬೆಲೆ 1750 ರೂಪಾಯಿ ಇದೆ.
* ನವೆಂಬರ್ 19 ರಂದು ಧಾರವಾಡದ ಕಲಘಟಗಿಯಲ್ಲಿ ಮೆಕ್ಕೆಜೋಳದ ಗರಿಷ್ಠ ಬೆಲೆ 1820 ಮತ್ತು ಕನಿಷ್ಠ ಬೆಲೆ 1600 ರೂಪಾಯಿ ಇದೆ.
* ನವೆಂಬರ್ 19 ಶಿವಮೊಗ್ಗದ ಸೊರಬ ಮಾರ್ಕೆಟ್‌ನಲ್ಲಿ ಮೆಕ್ಕೆಜೋಳದ ಗರಿಷ್ಠ ದರ 2,275 ರೂಪಾಯಿ
* ನವೆಂಬರ್ 19ರಂದು ಬೆಳಗಾವಿಯ ಸಂಕೇಶ್ವರದಲ್ಲಿ ಗರಿಷ್ಠ ದರ 2,300 ರೂಪಾಯಿ.
* ನವೆಂಬರ್ 19ರಂದು ಹಾವೇರಿ ಮಾರುಕಟ್ಟೆಯಲ್ಲಿ ಗರಿಷ್ಠ ದರ 2,300 ರೂ., ಮತ್ತು ದಾವಣಗೆರೆಯಲ್ಲಿ 1,952 ರೂಪಾಯಿ ಇದೆ.
* ನವೆಂಬರ್ 06 ರಂದು ಕಲಘಟಗಿ ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳದ ಗರಿಷ್ಠ ಬೆಲೆ 2000 ರೂ. ಮತ್ತು ಕನಿಷ್ಠ ದರ 1650 ರೂಪಾಯಿ.
* ನವೆಂಬರ್ 06 ರಂದು ಮೈಸೂರಿನ ಪಿರಿಯಾಪಟ್ಟಣದಲ್ಲಿ ಮೆಕ್ಕೆಜೋಳದ ಗರಿಷ್ಠ ಬೆಲೆ 1800 ರೂ. ಮತ್ತು ಕನಿಷ್ಠ ದರ1200 ರೂಪಾಯಿ.
* ನವೆಂಬರ್ 06 ರಂದು ಚಾಮರಾಜಪೇಟೆಯ ಗುಂಡ್ಲುಪೇಟೆಯಲ್ಲಿ ಗರಿಷ್ಠ ಬೆಲೆ 1900 ರೂ. ಮತ್ತು ಕನಿಷ್ಠ ದರ 1900 ರೂಪಾಯಿ ಇತ್ತು.












Click it and Unblock the Notifications