ಕಾಂಗ್ರೆಸ್ ಮನೆಯೊಂದ ನಾಲ್ಕು ಬಾಗಿಲು ಆಗಿದೆ: ಮಹೇಶ ಟೆಂಗಿನಕಾಯಿ ವ್ಯಂಗ್ಯ

ಹುಬ್ಬಳ್ಳಿ, ಅಕ್ಟೋಬರ್‌ 30: ಕಾಂಗ್ರೆಸ್ ಮನೆಯೊಂದ ನಾಲ್ಕು ಬಾಗಿಲು ಆಗಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಲ್ಲಿ ಜನವರಿ ಫೆಬ್ರುವರಿ ವೇಳೆಗೆ ಏನಾದರೂ ಅಚ್ಚರಿ ಇಲ್ಲ. ಕಾಂಗ್ರೆಸ್ ನಲ್ಲಿ ದೊಡ್ಡ ಪ್ರಮಾಣದ ಅಲ್ಲೋಲ‌‌ ಕಲ್ಲೋಲ ಆಗುತ್ತಿದೆ ಎಂದ ಅವರು ಇದನ್ನು ಸ್ವತಃ ಕಾಂಗ್ರೆಸ್ ಶಾಸಕರು ನೀರಿಕ್ಷೆ ಮಾಡಿರಲಿಲ್ಲ ಎಂದು ಹೇಳಿದರು.

Mahesh Tenginakai Fierce Attack Against Congress Government

ಕಾಂಗ್ರೆಸ್‌ ನಲ್ಲಿ 135 ಜನ ಇದ್ರೂ ನಿಮ್ಮ ತಳ ಅಳುಗಾಡ್ತಿದ್ದು ಇದಕ್ಕೆ ಕಾಂಗ್ರೆಸ್ ವಕ್ತಾರರು ಮಾತಾಡಬೇಕು ಬಿಜೆಪಿ ಲೀಡರ್ ಲೆಸ್ ಪಾರ್ಟಿ ಅಂತಾರೆ ನಿಮ್ಮ‌ ಪಕ್ಷದ ಬಗ್ಗೆ ಮಾತಾಡಿ ಎಂದು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ವಿರುದ್ದ ಟೆಂಗಿನಕಾಯಿ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ವಕ್ತಾರರು ಆಗಿದ್ದು, ಕಾಂಗ್ರೆಸ್ ನಲ್ಲಿ‌ ನಾಲ್ಕು ಬಾಗಿಲು ಆಗಿ ಬಿಟ್ಟಿವೆ ಕಾಂಗ್ರೆಸ್ ನಲ್ಲಿ ಮೊದಲು‌ ಒಂದು ಬಣ,ಎರಡು ಬಣ ಇದೀಗ ನಾಲ್ಕು ಬಣ ಆಗಿವೆ. ಪ್ರತಿನಿತ್ಯ ಒಂದಲ್ಲ ಒಂದು ಸಮಸ್ಯೆ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ರಚಾನತ್ಮಕ ವಿರೋಧ ಪಕ್ಷವಾಗಿ ಕೆಲಸ‌ ಮಾಡುತ್ತಿದೆ. ಬಿಜೆಪಿ ಆಪರೇಶನ್ ಕಮಲ ಮಾಡೋದಿಲ್ಲ. ಒಳಜಗಳ ಮುಚ್ಚಿ ಹಾಕಲು ಕಾಂಗ್ರೆಸ್ ಮಾತಾಡುತ್ತಿದೆ. ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು‌ ಅನ್ನೋ ಕಲ್ಪನೆಯಲ್ಲಿ ಸಾಕಷ್ಟು ಇನ್ವೆಸ್ಟ್ ಮಾಡಿದ್ರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಹಳ ದೊಡ್ಡ ಕನಸು ಕಂಡಿದ್ರು. ಆದರೆ, ಸಿದ್ದರಾಮಯ್ಯ ಬಂದು ಮುಖ್ಯಮಂತ್ರಿ ಆದರೂ. ಡಿಕೆ ಶಿವಕುಮಾರ್ ಸಿದ್ದರಾಮಯ್ಯರನ್ನ‌‌ ಇಳಸಿ‌ ಕುರ್ಚಿಯಲ್ಲಿ ಕೂರಬೇಕು ಅಂತೀದಾರೆ ಎಂದು ಹೇಳಿದರು.

ಒಂದು ಸಲ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ಶಾಸಕರು ಮಾತನಾಡುತ್ತಾರೆ ಇನ್ನೊಂದು ದಿನ ಡಿ ಕೆ ಶಿವಕುಮಾರ್ ಬಣದ ಶಾಸಕರು ಮಾತನಾಡುತ್ತಾರೆ. ಅನೇಕ ಕಾಂಗ್ರೆಸ್ ಶಾಸಕರು‌ ಬಿಜೆಪಿ ಸರ್ಕಾರ ಚುಲೋ ಅಂತೀದಾರೆ. ಗ್ಯಾರಂಟಿ ಯೋಜನೆಯಲ್ಲಿ ಸಿಕ್ಕು ಸಾಕಾಗಿದೆ ಎಂದು ನಮ್ಮ ಮುಂದೆ ಹೇಳಿದ್ದಾರೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ‌ ಯಾಕೆ ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದಾರೆ. ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಸ್ವಾಗತಕ್ಕೆ ಶಾಸಕರೇ ಇರಲಿಲ್ಲ. ಇದು ಕಾಂಗ್ರೆಸ್ ಪಕ್ಷದ ಸ್ಥಿತಿ ಆಗಿದೆ‌. ಇದನ್ನು ಮರೆಮಾಚಲು ಹೊಸ ಕಲ್ಪನೆಯನ್ನು ಜನರ ಮದ್ಯೆ ತೂರಿ ಬಿಡ್ತೀದೆ. ಇದುವರೆಗೂ ಯಾವುದೇ ಹಣ ಬಿಡುಗಡೆ ಆಗಿಲ್ಲ. ಬರಗಾಲ ಘೋಷಣೆ ಆದರೂ ಹಣ ಬಿಡುಗಡೆ ಆಗಿಲ್ಲ.ಬೀಕರ ಬರಗಾಲ ಬಂದರೂ ಸ್ಪಂದನೆ ಮಾಡುತ್ತಾನೆ. ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಇದೆ. ಕೇವಲ ಒಂದು ರಿಂದ ಎರಡು ಗಂಟೆ ವಿದ್ಯುತ್ ಕೊಡುತ್ತಿದ್ದಾರೆ. ಮುಂದಾಲೋಚನೆ ಇಲ್ಲದ ಸರ್ಕಾರ ಎಂದ‌ ಅಸಮಾಧಾನ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+