ಶೀಘ್ರದಲ್ಲೇ ಮಹದಾಯಿ ಮೇಲುಸ್ತುವಾರಿ ಸಮಿತಿ ರಚನೆ

ಬೆಂಗಳೂರು, ಆಗಸ್ಟ್ 17 : ಕೇಂದ್ರ ಸರ್ಕಾರ ಶೀಘ್ರದಲ್ಲೇ ಮಹದಾಯಿ ನೀರು ಮೇಲುಸ್ತುವಾರಿ ಸಮಿತಿಯನ್ನು ರಚನೆ ಮಾಡುವ ಸಾಧ್ಯತೆ ಇದೆ. ಮಹದಾಯಿ ನ್ಯಾಯಾಧಿಕರಣ ಈಗಾಗಲೇ ವಿವಾದದ ಕುರಿತು ಅಂತಿಮ ತೀರ್ಪನ್ನು ಪ್ರಕಟಿಸಿದೆ.

ಮಹದಾಯಿ ನ್ಯಾಯಾಧಿಕರಣ ಆ.14ರಂದು ಅಂತಿಮ ತೀರ್ಪು ನೀಡುವಾಗ ಮಹದಾಯಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಮಹದಾಯಿ ನೀರು ಮೇಲುಸ್ತುವಾರಿ ಸಮಿತಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

12 ಸಂಪುಟದ ತೀರ್ಪಿನಲ್ಲಿ ಮಹದಾಯಿ ನ್ಯಾಯಾಧಿಕರಣ ಮೇಲುಸ್ತುವಾರಿ ಸಮಿತಿ ರಚನೆಗೆ ಸೂಚನೆ ನೀಡಿತ್ತು. ಮಹದಾಯಿ ಯೋಜನೆಯ ಪ್ರತಿಯೊಂದು ಮಾಹಿತಿ ಉಸ್ತುವಾರಿ ಸಮಿತಿಗೆ ಇರಬೇಕು. ಸಮಿತಿಯ ಒಪ್ಪಿಗೆ ಪಡೆದು ಯೋಜನೆ ಜಾರಿಗೊಳಿಸಬೇಕು ಎಂದು ಹೇಳಿತ್ತು.

Mahadayi Water Management Authority may set up soon

ಮಹದಾಯಿ ಯೋಜನೆಯ ಕುರಿತು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ನಡುವೆ ವಿವಾದವಿದೆ. ಆದರೆ, ಯೋಜನೆಯ ಕುರಿತು ಸ್ಪಷ್ಟವಾದ ನೀಲನಕ್ಷೆ ಇನ್ನೂ ಸಿದ್ದಗೊಂಡಿಲ್ಲ ಎಂದು ನ್ಯಾಯಾಧಿಕರಣ ತೀರ್ಪಿನಲ್ಲಿ ತಿಳಿಸಿತ್ತು.

ಆಗಸ್ಟ್ 14ರಂದು ಅಂತಿಮ ತೀರ್ಪು ನೀಡಿದ್ದ ನ್ಯಾಯಾಧಿಕರಣ ಕರ್ನಾಟಕಕ್ಕೆ 13.5 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು. ಗೋವಾಕ್ಕೆ 24 ಮತ್ತು ಮಹಾರಾಷ್ಟ್ರಕ್ಕೆ 1.30 ಟಿಎಂಸಿ ನೀರನ್ನು ನೀಡಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+