ಸಿದ್ದರಾಮಯ್ಯ-ನರೇಂದ್ರ ಮೋದಿ ರಾಜಕಾರಣದ ನಡುವೆ ಬಡವಾದ ರೈತ

Posted By:
Subscribe to Oneindia Kannada

ಬೆಳಗಾವಿಯ ಭೀಮಗಡದಲ್ಲಿ ಹುಟ್ಟಿ ಅರಬ್ಬೀ ಸಮುದ್ರ ಸೇರುತ್ತಿರುವ ಮಹಾದಾಯಿ ನದಿ ನೀರನ್ನು, ಪ್ರತೀ ವರ್ಷ ಬರದಿಂದ ಬಳಲಿ ಬೆಂಡಾಗುತ್ತಿರುವ ಉತ್ತರ ಕರ್ನಾಟಕದ ಜನರಿಗೆ ಕುಡಿಯಲು ಹಾಗೂ ಕೃಷಿಗೆ ದೊರಕಿಸಲು ನಡೆಸಿದ ಹೋರಾಟಕ್ಕೆ ರಾಜಕಾರಣಿಗಳ ಲಜ್ಜೆಗೇಡಿತನ, ಮಾನ್ಯ ಮುಖ್ಯಮಂತ್ರಿಗಳ ಬೇಜವಾಬ್ದಾರಿತನ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳ ನಿರ್ಲಕ್ಷತನ ಹಾಗೂ ಕರ್ನಾಟಕ ವಿರೋಧಿ ನಿಲುವಿನಿಂದಾಗಿ ಸೋಲಾಗಿದೆ.

ಇದು ರಾಜ್ಯದ ಜನತೆಗೆ, ಈ ಕರ್ನಾಟಕವನ್ನು ರಾಜ್ಯ ಹಾಗೂ ಕೇಂದ್ರದಲ್ಲಿ ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಒಟ್ಟಾಗಿ ಮಾಡಿರುವ ಬೃಹತ್ ವಂಚನೆ. ಇಂದು 28 ಜನ ಸಂಸದರ ಹಾಗೂ 224 ಶಾಸಕರ ಪಾಲಿಗೆ ಉತ್ತರ ಕರ್ನಾಟಕದ ಜನತೆಯ ಕೂಗು ಕೇಳದಾಗಿದ್ದರೆ, ಅವರ ಪಾಲಿಗೆ ಜನರು ಸತ್ತಿದ್ದಾರೆಯೇ? ಎಂಬುದನ್ನು ಅವರೇ ಜಾಹಿರುಪಡಿಸಬೇಕಿದೆ.[ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]

2015 ಸೆಪ್ಟೆಂಬರ್ ನಲ್ಲಿ ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ನಿಯೋಗ ಮಹಾದಾಯಿ ಯೋಜನೆಯ ಕುರಿತು ಅಲ್ಲಿನ ಸ್ಥಳೀಯರು, ಹೋರಾಟಗಾರ ಮುಖಂಡರು ಹಾಗೂ ತಜ್ಞರಿಂದ ವಿಸ್ತೃತವಾಗಿ ಮಾಹಿತಿ ಪಡೆದು, ಮಲಪ್ರಭಾ ಹಾಗೂ ಮಹಾದಾಯಿ ನದಿ ಪ್ರದೇಶವನ್ನು ವೀಕ್ಷಿಸಿ, ಅಲ್ಲಿ ನಿರ್ಮಾಣವಾಗಿದ್ದ ನಾಲೆಗಳನ್ನು ಹಾಗೂ ನಿರ್ಮಾಣವಾಗಬೇಕಿದ್ದ ನಾಲಾ ಪ್ರದೇಶವನ್ನು ಕೂಲಂಕುಷವಾಗಿ ಪರಿಶೀಲಿಸಿ, ಹಳ್ಳಿಗಳನ್ನು ಭೇಟಿ ಮಾಡಿ ಅಲ್ಲಿನ ನೀರಿನ ಅಭಾವದ ಪರಿಸ್ಥಿತಿಯನ್ನು ಅವಲೋಕಿಸಿ ಈ ಕೆಳಗಿನ ಸಲಹೆಗಳನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ನೀಡಿತ್ತು.[ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]

ಆದರೆ ಇಷ್ಟೆಲ್ಲಾ ಅಧ್ಯಯನ ನಡೆಸಿ ಗಂಭೀರ ಸಲಹೆಗಳನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ನಿಯೋಗ ನೀಡಿದ್ದರೂ ಸರಕರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಎಎಪಿ ಕರ್ನಾಟಕ ಆರೋಪಿಸಿದೆ.

ಹೈ ಪವರ್ ಕಮಿಷನ್ ರಚಿಸಿ ಎಂದು ಕೋರಲಾಗಿತ್ತು

ಹೈ ಪವರ್ ಕಮಿಷನ್ ರಚಿಸಿ ಎಂದು ಕೋರಲಾಗಿತ್ತು

ಭೂವಿಜ್ಞನಾ ತಜ್ಞ, ಗೇಜ್ ತಜ್ಞ, ಹವಾಮಾನ ತಜ್ಞ, ಪರಿಸರ ತಜ್ಞ, ದೂರು ಸಂವೇದಿ ತಜ್ಞ, ವನ್ಯ ಜೀವಿ ತಜ್ಞ, ತಾಂತ್ರಿಕ ತಜ್ಞ, ಇಂಜಿನಿಯರಿಂಗ್ ತಜ್ಞ, ನೀರಾವರಿ ತಜ್ಞ, ಕೃಷಿ ತಜ್ಞ ಹಾಗೂ ರೈತ ಹೋರಾಟಗಾರನ್ನು ಒಳಗೊಂಡ ಹೈ ಪವರ್ ಕಮಿಷನ್ ರಚಿಸಿ, ಈ ಸಮಿತಿಯಿಂದ ವರದಿ ಪಡೆದು ಅದರ ಆಧಾರದ ಮೇಲೆ ನ್ಯಾಯಾಧೀಕರಣದಲ್ಲಿ ವಾದ ಮಂಡಿಸಬೇಕು.

ಪಶ್ಚಿಮ ಘಟ್ಟ ಪ್ರದೇಶಕ್ಕೆ ತೊಂದರೆಯಾಗಬಹದು

ಪಶ್ಚಿಮ ಘಟ್ಟ ಪ್ರದೇಶಕ್ಕೆ ತೊಂದರೆಯಾಗಬಹದು

ಈ ಮೂಲಕ ಗೋವಾದ ತಕರಾರಿಗೆ ಎದುರಾಗಿ ಯೋಜನೆಯಿಂದ ಎಷ್ಟು ಪ್ರಮಾಣದ ಪಶ್ಚಿಮ ಘಟ್ಟ ಪ್ರದೇಶಕ್ಕೆ ತೊಂದರೆಯಾಗಬಹದು, ಆದರೆ ಅದರಿಂದ ಉತ್ತರ ಕರ್ನಾಟಕದ ಎಷ್ಟು ಸಾವಿರ ಹಳ್ಳಿಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಬಹುದು ಎಂಬುದನ್ನು ಅಂಕಿಅಂಶಗಳ ಸಮೇತ ವಿಸ್ತøತ ವರದಿ ಸಲ್ಲಿಸಿ ವಾದ ಮಂಡಿಸಬೇಕು,

ಎಷ್ಟು ಸಾವಿರ ಹಳ್ಳಿಗಳಿಗೆ ಕುಡಿಯುವ ನೀರಿನ ಸಂಪರ್ಕ

ಎಷ್ಟು ಸಾವಿರ ಹಳ್ಳಿಗಳಿಗೆ ಕುಡಿಯುವ ನೀರಿನ ಸಂಪರ್ಕ

ಉತ್ತರ ಕರ್ನಾಟಕದ ನೀರಿನ ಅಭಾವದ ಪರಿಸ್ಥಿತಿಯನ್ನು ನ್ಯಾಯಾದಿಕರಣಕ್ಕೆ ಅರಿವು ಮಾಡಿಕೊಟ್ಟು, ನಾಲೆ ನಿರ್ಮಿಸಲು ಉದ್ದೇಶಿಸಿದ್ದ ಪ್ರದೇಶಗಳಲ್ಲಿ ನೀರಿನ ಲಭ್ಯತೆ ವಿವರಗಳನ್ನು ತಜ್ಞರ ವರದಿ ಮೂಲಕ ಸಲ್ಲಿಸಬೇಕು.

ಇಷ್ಟೆಲ್ಲಾ ಅಧ್ಯಯನ ನಡೆಸಿ ಗಂಭೀರ ಸಲಹೆಗಳನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ನಿಯೋಗ ನೀಡಿದ್ದರೂ, ಉತ್ತರ ಕರ್ನಾಟಕದ ಜನತೆ 2002ರಿಂದ ಸತತವಾಗಿ ಹೋರಾಟ ಮಾಡಿಕೊಂಡು ಬಂದಿದ್ದರೂ, ಪರಿಸ್ಥಿತಿಯ ಗಂಭೀರವನ್ನು ಅರಿಯಲು ಯತ್ನಿಸಲಿಲ್ಲ

ನ್ಯಾಯವಾದಿಗಳಿಂದ ಬರೀಗೈಯಲ್ಲಿ ವಾದ ಮಂಡಿಸಿ

ನ್ಯಾಯವಾದಿಗಳಿಂದ ಬರೀಗೈಯಲ್ಲಿ ವಾದ ಮಂಡಿಸಿ

ಬೇಜವಾಬ್ದಾರಿಯಾಗಿ ನ್ಯಾಯವಾದಿಗಳಿಂದ ಬರೀಗೈಯಲ್ಲಿ ವಾದ ಮಂಡಿಸಿ ಮೂರ್ಖತನದ ಪರಮಾವಧಿ ಮೆರೆದು, ನ್ಯಾಯಾಧಿಕರಣದ ಮುಂದೆ ಕರ್ನಾಟಕದ ಜನತೆಗೆ ಮಹದಾಯಿ ನೀರಿನ ಅಗತ್ಯತೆ ಇದೆ ಎಂಬುದನ್ನು ಸಫಲವಾಗಿ ಮಂಡಿಸಲು ವಿಫಲವಾಗಿ ರಾಜ್ಯ ಸರ್ಕಾರ ಜನರ ಪಾಲಿಗೆ ಸತ್ತಂತೆ ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಬಲವಾಗಿ ನಂಬುತ್ತದೆ.

ಧಾರವಾಡ ಜಿಲ್ಲೆಯ ಆಮ್ ಆದ್ಮಿ ಪಾರ್ಟಿ

ಧಾರವಾಡ ಜಿಲ್ಲೆಯ ಆಮ್ ಆದ್ಮಿ ಪಾರ್ಟಿ

ಕಳೆದ ವರ್ಷ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಗದಗದ ತೊಂಟದಾರ್ಯ ಮಠದಿಂದ ಧಾರವಾಡಕ್ಕೆ ಪಾದಯಾತ್ರೆ ನಡೆಸಿ, ಹಳ್ಳಿಗಳಿಗೆ ತೆರಳಿ ಜನಸಂಪರ್ಕ ಯಾತ್ರೆ ಮಾಡಿ, ಅಲ್ಲಿನ ರೈತರ ಸಂಕಷ್ಟವನ್ನು ಆಲಿಸಿ, ಮಹಾದಾಯಿ ಹೋರಾಟಕ್ಕೆ ತನ್ನ ಬೆಂಬಲ ಸೂಚಿಸಿತ್ತು.

ಧಾರವಾಡ ಜಿಲ್ಲೆಯ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ನಿರಂತರವಾಗಿ ಅಲ್ಲಿನ ಹೋರಾಟದಲ್ಲಿ ಪಾಲ್ಗೊಂಡು ಸತತವಾಗಿ ರೈತರೊಂದಿಗೆ ಸಂಪರ್ಕದಲ್ಲಿದ್ದಾರೆ. ಆಮ್ ಆದ್ಮಿ ಪಾರ್ಟಿ ದೇಶದ ಬೆನ್ನೆಲುಬಾದ ರೈತರ ಪರವಾಗಿ ನಿಲ್ಲಲು ಎಂದಿಗೂ ಹಿಂಜರೆಯುವುದಿಲ್ಲ.

ವಿಧಾನಸಭೆ ಅಧಿವೇಶನ ಬಲಿ

ವಿಧಾನಸಭೆ ಅಧಿವೇಶನ ಬಲಿ

ಇಡೀ ವಿಧಾನಸಭೆ ಅಧಿವೇಶನವನ್ನೇ ಬಲಿಹಾಕಿದ ವಿರೋಧ ಪಕ್ಷಗಳೆರಡೂ ಇಡೀ ಉತ್ತರ ಕರ್ನಾಟಕದ 5.4 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುವ ಮಹಾದಾಯಿ ಯೋಜನೆ ಒಳಗೊಂಡಂತೆ ಯಾವುದೇ ಜನಪರ ವಿಷಯಗಳ ಬಗ್ಗೆ ಚರ್ಚಿಸಲೇ ಇಲ್ಲ.

ಇತ್ತ ರಾಜ್ಯದ ಪರಿಸ್ಥಿತಿ ಹೀಗಾದರೆ, ಆತ್ತ ಕೇಂದ್ರದಲ್ಲಿ 17 ಜನ ಆಡಳಿತಾರೂಢ ಬಿಜೆಪಿ ಸಂಸದರು ಪ್ರಧಾನ ಮಂತ್ರಿಗಳ ಬಳಿ ತೆರಳಿ ಮಹಾದಾಯಿ ನದಿ ವಿವಾದದಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿಯನ್ನೂ ಸಲ್ಲಿಸಲಿಲ್ಲ,

ಯಾವುದೇ ಚರ್ಚೆ ನಡೆಸದಿರುವುದು

ಯಾವುದೇ ಚರ್ಚೆ ನಡೆಸದಿರುವುದು

ಉತ್ತರ ಕರ್ನಾಟಕದ ಸಂಸದರಾದ, ಪ್ರತಿಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇನ್ನುಳಿದ 11 ಕಾಂಗ್ರೆಸ್ ಸಂಸದರೂ ಸಂಸತ್ತಿನಲ್ಲಿ ಮಹಾದಾಹಿ ಯೋಜನೆ ಬಗ್ಗೆ ಯಾವುದೇ ಚರ್ಚೆ ನಡೆಸದಿರುವುದು ಜನರ ಬಗೆಗಿನ ಅವರ ಬೇಜವಾಬ್ದಾರಿತನವನ್ನು ಪ್ರರ್ದಶಿಸುತ್ತದೆ. ಇಂತಹ ಜನಪ್ರತಿನಿಧಿಗಳು ಇದ್ದರು ಒಂದೇ, ಇಲ್ಲದೇ ಹೋದರು ಒಂದೇ ಎಂದು ರಾಜ್ಯದ ಜನತೆಯಲ್ಲಿ ಅವಿಶ್ವಾಸ ಮೂಡುತ್ತಿದೆ.

ರಾಜಕೀಯ ನಾಟಕವಾಡುತ್ತಿರುವುದು ಸ್ಪಷ್ಟ

ರಾಜಕೀಯ ನಾಟಕವಾಡುತ್ತಿರುವುದು ಸ್ಪಷ್ಟ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ, ಉತ್ತರ ಕರ್ನಾಟಕದ ಜನರ ಜೀವನಾಡಿಯನ್ನು ಅರಿಯಲು ವಿಫಲರಾಗಿದ್ದಲ್ಲದೇ, ಮುಂಬರುವ ಗೋವಾ ರಾಜ್ಯದ ಚುನಾವಣೆಯಲ್ಲಿ ಗೆಲ್ಲಲು, ಅಲ್ಲಿನ ಜನರ ಮನವೊಲಿಸಲು ಮಹಾದಾಯಿ ವಿವಾದದಲ್ಲಿ ಒಂದು ಮಾತೂ ಆಡದೆ, ನ್ಯಾಯಾಧಿಕರಣದ ತೀರ್ಪಿನ ಹೆಸರಲ್ಲಿ ರಾಜಕೀಯ ನಾಟಕವಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ನ್ಯಾಯಾಧಿಕರಣದಲ್ಲಿ ಗೋವಾದ ಪರವಾಗಿ ವಾದ ಮಂಡಿಸಲು ತನ್ನದೇ ಸರ್ಕಾರದ ಸಾಲಿಸಿಟಾರ್ ಜನರಲ್ ಆತ್ಮಾರಾಮ್ ನಾಡಕರ್ಣಿಯವರನ್ನು ಗೋವಾ ಪರ ವಕೀಲರಾಗಿ ನೇಮಿಸಿದಾಗಲೇ ಜಗತ್ಜಾಹೀರಾಗಿತ್ತು.

ಸಚಿವ ಎಂ.ಬಿ.ಪಾಟೀಲ

ಸಚಿವ ಎಂ.ಬಿ.ಪಾಟೀಲ

ಮಹಾದಾಯಿ ನ್ಯಾಯಾಧಿಕರಣದ ಎದುರು ಸಮರ್ಥವಾಗಿ ವಾದ ಮಂಡಿಸಲು ವಿಫಲರಾಗಿ ಉತ್ತರ ಕರ್ನಾಟಕದ ಜನರ ಆಶಾಕಿರಣಕ್ಕೆ ತಣ್ಣೀರೆರಚಿದ ಬೇಜಬಾಬ್ದಾರಿ ನೀರಾವರಿ ಸಚಿವ ಎಂ.ಬಿ.ಪಾಟೀಲರವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ. ಈ ಕುರಿತು ಈಗಾಗಲೇ ರಾಜ್ಯದ ಜನರು ತಾಳ್ಮೆಗೆಟ್ಟಿದ್ದು, ಜನತೆಯ ಆಕ್ರೋಶವನ್ನು ನಿಯಂತ್ರಿಸಲು ಕಳೆದ ಒಂದು ವರ್ಷದಿಂದ ಸತತವಾಗಿ ನಡೆಸುತ್ತಿರುವ ಮಹಾದಾಯಿ ಹೋರಾಟಗಾರರ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸುತ್ತದೆ.

ಜನರ ಕೂಗನ್ನು ಸರ್ಕಾರಕ್ಕೆ ತಲುಪಿಸಬೇಕು

ಜನರ ಕೂಗನ್ನು ಸರ್ಕಾರಕ್ಕೆ ತಲುಪಿಸಬೇಕು

ಕೇಂದ್ರದಲ್ಲಿನ ಸಂಸದರು ತಾವು ಜನರ ಸೇವಕರೆನ್ನುವುದನ್ನು ಅರಿತು, ತಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರ ಕೂಗನ್ನು ಸರ್ಕಾರಕ್ಕೆ ತಲುಪಿಸಬೇಕು ಎಂದೂ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ. ಒಂದು ವೇಳೆ ಮಹದಾಯಿ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತೆ ರಾಜಕೀಯ ನಾಟಕ ನಡೆಸಿ ತತಕ್ಷಣವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾದರೆ ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಉಗ್ರ ಹೋರಾಟಕ್ಕೆ ಇಳಿಯಲಿದೆ ಎಂದೂ ಈ ಮೂಲಕ ಎಚ್ಚರಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
River Mahadayi has been made to fail to quench the thirst of the people of North Karnataka due to the shamelessness of its politicians, irresponsibility of the CM and the apathy of the PM towards the state alleges AAP Karnataka.
Please Wait while comments are loading...