ಬಿಸಿಯೂಟ ನೌಕರರಿಗೆ ಶುಭಸುದ್ದಿ; ಕನಿಷ್ಠ ವೇತನ, ಇನ್ನಿತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ ಮಧು ಬಂಗಾರಪ್ಪ

ಬೆಂಗಳೂರು: ಕರ್ನಾಟಕ ಬಿಸಿಯೂಟ ನೌಕರರ ಪರವಾಗಿದ್ದೇನೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಮಗನಾಗಿ ನಿಮಗೆಲ್ಲ ಸಹಾಯ ಮಾಡಲು ಸಿದ್ಧನಿದ್ದೇನೆ. ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದ ಬಿಸಿಯೂಟ ನೌಕರರಿಗೆ ಗುರುವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಅವರ ಭರವಸೆ ನೀಡಿದರು.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಸದಸ್ಯರು ಪ್ರತಿಭಟಿಸಿದರು. ಇದೇ ವೇಳೆ ಯೂನಿಯನ್ ಸದಸ್ಯರನ್ನು ವಿಧಾನಸೌಧದದಲ್ಲಿನ ತಮ್ಮ ಕಚೇರಿಗೆ ಕರೆಸಿಕೊಂಡು ಸಮಾಲೋಚನೆ ಮಾಡಿದರು. ಬಳಿಕ ಸಚಿವರು ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.

Madhu Bangarappa Workers 1

ರಾಜ್ಯ ಅಕ್ಷರದಾಸೋಹ ಬಿಸಿಯೂಟ ತಯಾರಕರ ಯೂನಿಯನ್ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ ಅವರು, ಕನಿಷ್ಠ ವೇತನ ನೀಡುವುದು, ಬಿಸಿಯೂಟ ತಯಾರಕರಿಗೆ ಇಡುಗಂಟು ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಯೂನಿಯನ್ ಆಗ್ರಹಿಸಿತು.

ಕನಿಷ್ಠ ವೇತನ ದರಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದೆ. ಇದರಲ್ಲಿ ನಾನೂ ಸದಸ್ಯನಿದ್ದ, ಬಿಸಿಯೂಟ ನೌಕರರ ಸಮಸ್ಯೆಗಳ ಅವರಿವು ನನಗಿದೆ. ನೀವು ಸಹ ಸರ್ಕಾರದ ಅಂಗ ನೀವು. ನಮ್ಮ ಮಕ್ಕಳನ್ನು ನೀವೂ ನೋಡಿಕೊಳ್ಳುತ್ತಿದ್ದು, ನಿಮ್ಮ ಕುರಿತು ಸಹಾನುಭೂತಿ ಇದೆ. ನಿಮ್ಮ ಕಷ್ಟಕ್ಕೆ ಸ್ಪಂದಿಸುವುದು ನನ್ನ ಕರ್ತವ್ಯ. ಸರ್ಕಾರದ ನಿಯಮಗಳ ಅಡಿಯಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ

ಯಾವ ಯಾವ ರಾಜ್ಯದಲ್ಲಿ ಎಷ್ಟು ವೇತನ ನೀಡಲಾಗುತ್ತಿದೆ? ಜೊತೆಗೆ ಬೇರೆ ಬೇರೆ ಸೌಲಭ್ಯಗಳನ್ನು ಹೇಗೆ ವಿತರಿಸಲಾಗುತ್ತಿದೆ? ಕೇಂದ್ರ ಸರ್ಕಾರ ಮತ್ತು ಉಳಿದ ರಾಜ್ಯ ಸರ್ಕಾರಗಳು ಇಡುಗಂಟು ಎಷ್ಟು ನೀಡುತ್ತಿವೆ? ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ರಾಜ್ಯಗಳ ಸ್ಥಿತಿಗತಿ ಹೇಗಿದೆ? ಎಂಬುದರ ಕುರಿತು ಶೀಘ್ರ ವರದಿ ನೀಡುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ನೀವು ಪ್ರತಿಭಟಿಸಬೇಡಿ, ಮನೆಗೆ ಬನ್ನಿ!

ಬಿಸಿಯೂಟ ನೌಕರರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಮೂರು ವರ್ಷದ ಅವಧಿಯಲ್ಲಿ ನಿಮಗೆ ಹಲವಾರು ಬಾರಿ ನೆರವಾಗಿದ್ದೇನೆ. ಕಳೆದ ದೀಪಾವಳಿ ಸಂದರ್ಭದಲ್ಲಿ ನಿಮಗೆಲ್ಲ ಮುಂಚಿತವಾಗಿ ಹಣ ಬಿಡುಗಡೆಗೊಳಿಸಿದ್ದೆ. ದೂರದ ಊರಿಂದ ಬಂದು, ಹೀಗೆ ದುಡಿಮೆಯ ಹಣವನ್ನು ಖರ್ಚು ಮಾಡಿಕೊಂಡು ಪ್ರತಿಭಟಿಸಬೇಡಿ. ಏನೇ ಇದ್ದರೂ ನೇರವಾಗಿ ನನ್ನ ಮನೆಗೆ ಬನ್ನಿ ಎಂದು ಸಚಿವರು ಕಿವಿ ಮಾತು ಹೇಳಿದರು.

ಗೃಹಲಕ್ಷ್ಮಿ ಹಣವನ್ನು ಎಲ್ಲಾ ಬಿಸಿಯೂಟದ ಮಹಿಳಾ ನೌಕರರಿಗೆ ನೀಡಬೇಕು ಎಂದು ನಿಯೋಗವು ಸಚಿವರಿಗೆ ಮನವಿ ಮಾಡಿತು. ಇದಕ್ಕೆ ಸ್ಪಂದಿಸಿದ ಸಚಿವರು, ನಮ್ಮ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ನಿಮ್ಮ ಮನೆಯ ಆರ್ಥಿಕತೆಗೆ ಶಕ್ತಿ ತುಂಬಿವೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರುತ್ತೇನೆ. ಸಾಧ್ಯತೆ ಇದ್ದರೆ ಗೃಹಲಕ್ಷ್ಮಿ ಹಣವನ್ನು ಕೊಡಿಸೋಣ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+