ಮದ್ದೂರು: ಮುಂಗಾರು ಮಳೆ ಗಣೇಶ್ ಕಾರು ಚಾಲಕ ಸಾವು

ಬೆಂಗಳೂರಿನ ಚಾಮರಾಜಪೇಟೆಯ ಕೃಷ್ಣಪ್ಪ ಎಂಬುವರ ಪುತ್ರ ತಿಲಕ್ (24) ಹಾಗೂ ಮನೋಹರ ರಾವ್ ಅವರ ಪುತ್ರ ಶಿವಾಜಿ ರಾವ್ (26) ಮೃತಪಟ್ಟ ದುರ್ದೈವಿಗಳು. ಗೂಡ್ಸ್ ಆಟೋ ಚಾಲಕನಾಗಿರುವ ಶಿವಾಜಿ ರಾವ್ ಜತೆ ನಿನ್ನೆ ಬೆಳಗ್ಗೆ ತಿಲಕ್ ಬೈಕಿನಲ್ಲಿ ಮಳವಳ್ಳಿ ತಾಲ್ಲೂಕಿನಲ್ಲಿರುವ ಶಿವನಸಮುದ್ರಕ್ಕೆ (ಬ್ಲಫ್) ತೆರಳಿದ್ದರು. ಅಲ್ಲಿನ ಮಾರಮ್ಮ ದೇಗುಲದಲ್ಲಿ ಪೂಜೆ ಸಲ್ಲಿಸಿ ರಾತ್ರಿ ಅದೇ ಬೈಕಿನಲ್ಲಿ ಕಳೆದ ರಾತ್ರಿ ಇಬ್ಬರೂ ವಾಪಸ್ ಆಗಿದ್ದಾರೆ.
ಮದ್ದೂರು-ಕೊಳ್ಳೇಗಾಲ ರಸ್ತೆಯ ಉಪ್ಪಿನಕೆರೆ ಗೇಟ್ ಬಳಿ ಬೆಂಗಳೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಮತ್ತು ತಿಲಕ್ ಇದ್ದ ಬೈಕಿಗೆ ಡಿಕ್ಕಿಯಾಗಿ ತಿಲಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಶಿವಾಜಿರಾವ್ ಮಂಡ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮದ್ದೂರು ಪೊಲೀಸ್ ಠಾಣೆ ಪಿಎಸ್ ಐ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಗಿದೆ.












Click it and Unblock the Notifications