ಕರ್ನಾಟಕದಲ್ಲಿ ಮಾಯವಾಗುತ್ತಿರುವ ತೃತೀಯ ಶಕ್ತಿ
ಬೆಂಗಳೂರು, ಮೇ 22: ಸ್ವತಂತ್ರ ಭಾರತದ ಚುನಾವಣಾ ಇತಿಹಾಸದಲ್ಲಿ ಮೋದಿ ಸುನಾಮಿಗೆ ಸಿಲುಕಿ ಪುರಾತನ ಕಾಂಗ್ರೆಸ್ ಪಕ್ಷವಷ್ಟೇ ತರಗೆಲೆಯಂತೆ ಉದುರಿಲ್ಲ. ರಾಜ್ಯದಲ್ಲಿ ತೃತೀಯ ರಂಗವು ಶಕ್ತಿಹೀನವಾಗುತ್ತಿದೆ. ಪಕ್ಷೇತರರೂ ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ ಉಳಿದ ಪಕ್ಷಗಳು ಶೇ. 16ರಷ್ಟು ಮತ ಪಡೆದಿವೆ.
ದಕ್ಷಿಣ ಭಾರತದಲ್ಲಿ ಇತರೆ ನೆರೆಯ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಅಥವಾ ತೃತೀಯ ರಂಗ ಪಕ್ಷಗಳು ಮತ ಗಳಿಸಿವುದು ಅಷ್ಟಕ್ಕಷ್ಟೇ. 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟು ಶೇ. 80ರಷ್ಟು ಗಳಿಸಿದ್ದರೆ ಉಳಿದ ಪಕ್ಷಗಳ ಸಾಧನೆ ಶೇ. 20ಕ್ಕೆ ಸೀಮಿತವಾಗಿತ್ತು. ಇದರರ್ಥ ತೃತೀಯ ಶಕ್ತಿಯ ಬಲ ಶೇ. 4ರಷ್ಟು ಕುಸಿದಿದೆ ಎಂದಾಯಿತು.
ಅದಕ್ಕಿಂತ ಹಿಂದೆ ಅಂದರ 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಟ್ಟು ಶೇ. 72ರಷ್ಟು ಗಳಿಸಿದ್ದವು. ಆಗ ತೃತೀಯ ರಂಗದ ಸಾಧನೆ ಶೇ. 28ರಷ್ಟಾಗಿತ್ತು. ಅಂದರೆ ಗಣನೀಯ ಪ್ರಮಾಣಲ್ಲಿ (ಶೇ. 8ರಷ್ಟು) ಮತಗಳನ್ನು ಕಳೆದುಕೊಂಡಿತ್ತು.
ಚುನಾವಣೆಯಲ್ಲಿ ಜೆಡಿಎಸ್ ಸಾಧನೆ ಹೀಗಿತ್ತು:

ಲೋಕಸಭಾ ಚುನಾವಣೆಯಲ್ಲಿ ಎಡ ರಂಗದ ಸಾಧನೆ ಕರ್ನಾಟಕದಲ್ಲಿ ಎಂದಿಗೂ ಆಶಾದಾಯಕವಾಗಿಲ್ಲ. 2014ರಲ್ಲಿ ಎಡ ರಂಗದ ಸಾಧನೆ ಶೇ 0.3 ಮಾತ್ರ. ಬಹುಜನ ಸಮಾಜ ಪಕ್ಷದ ಸಾಧನೆಯೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. 2009ರಲ್ಲಿ ಶೇ. 2 ರಷ್ಟು ಮತ ಗಳಿಕೆ ಹೊಂದಿದ್ದ ಬಿಎಸ್ ಪಿ, ಇದೀಗ ಶೆ. 1ಕ್ಕಿಂತ ಕಡಿಮೆ ಮತ ಗಳಿಸಿದೆ. ಇನ್ನು ಹೊಸದಾಗಿ ಅವತರಿಸಿದ ಆಮ್ ಆದ್ಮಿ ಪಕ್ಷವು ಬೆಂಗಳೂರಿನಲ್ಲಿ ಶೇ. 0.8ರಷ್ಟು ಮತ ಗಳಿಸಿದೆ. ಇದು ನೋಟಾ (NOTA) ಸಾಧನೆಗಿಂತ ಕಡಿಮೆಯಾಗಿದೆ.












Click it and Unblock the Notifications