ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ನಾಂದೇಡ್ ರೈಲು ಅಪಘಾತಕ್ಕೆ ಕಾರಣ ಬಹಿರಂಗ

|
Google Oneindia Kannada News

ಬೆಂಗಳೂರು, ಮಾರ್ಚ್ 07 : ಬೆಂಗಳೂರು-ನಾಂದೇಡ್ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೆ ಲಾರಿ ಚಾಲಕ ಕಾರಣ ಎಂಬುದು ತನಿಖಾ ವರದಿಯಿಂದ ಬಹಿರಂಗವಾಗಿದೆ. ಈ ರೈಲು ಅಪಘಾತದಲ್ಲಿ ದೇವದುರ್ಗ ಕ್ಷೇತ್ರದ ಅಂದಿನ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಸೇರಿದಂತೆ ಐವರು ಮೃತಪಟ್ಟಿದ್ದರು.

2015ರ ಆಗಸ್ಟ್ 24ರಂದು ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್‌ ಬಳಿ ಗ್ರಾನೈಟ್ ತುಂಬಿದ್ದ ಲಾರಿ ಬೆಂಗಳೂರು-ನಾಂದೇಡ್ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಿಂದಾಗಿ ಬೆಂಗಳೂರು ರೈಲ್ವೆ ವಲಯಕ್ಕೆ 3 ಕೋಟಿ ರೂ. ನಷ್ಟವಾಗಿದೆ ಎಂದು ವರದಿ ಹೇಳಿದೆ. [ಐವರನ್ನು ಬಲಿಪಡೆದ ರೈಲು ದುರಂತದ ಚಿತ್ರಗಳು]

indian railways

ನೈಋತ್ಯ ರೈಲ್ವೆಯ ರೈಲ್ವೆ ಸುರಕ್ಷತಾ ಆಯುಕ್ತ ಸತೀಶ್ ಕುಮಾರ್ ಮಿತ್ತಲ್ ಅವರು ಈ ವರದಿ ಸಿದ್ಧಪಡಿಸಿದ್ದಾರೆ. ಲಾರಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಗ್ರಾನೈಟ್ ತುಂಬಲಾಗಿತ್ತು. ಲಾರಿ ಚಾಲಕನ ಬಳಿ ಡ್ರೈವಿಂಗ್ ಲೈಸೆನ್ಸ್ ಸಹ ಇರಲಿಲ್ಲ ಎಂದು ಮಿತ್ತಲ್ ವರದಿಯಲ್ಲಿ ಹೇಳಿದ್ದಾರೆ. [ದೇವದುರ್ಗ ಉಪ ಚುನಾವಣೆ : ಗೆದ್ದವರು ಯಾರು?]

ಆಗಸ್ಟ್ 24ರಂದು ಮುಂಜಾನೆ 2.14ಕ್ಕೆ ಈ ಅಪಘಾತ ಸಂಭವಿಸಿದೆ. 21 ಟನ್ ಗ್ರಾನೈಟ್ ತುಂಬಬೇಕಿದ್ದ ಲಾರಿಯಲ್ಲಿ 4 ಟನ್ ಹೆಚ್ಚು ಕಲ್ಲು ತುಂಬಲಾಗಿತ್ತು. 40 ಕಿ.ಮೀ. ವೇಗದಲ್ಲಿ ಬಂದ ಲಾರಿ ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ವರದಿ ಹೇಳಿದೆ.

railway

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಎಚ್ 1, ಎಸ್‌ 1, ಎಸ್ 2 ಮತ್ತು ಬಿ 1 ಬೋಗಿಗಳು ಹಳಿ ತಪ್ಪಿದವು. ಮೊದಲನೆ ದರ್ಜೆ ಎಚ್ 1 ಬೋಗಿಗೆ ಲಾರಿ ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಅದರಲ್ಲಿದ್ದ 5 ಜನರು ಮೃತಪಟ್ಟರು. ಅಪಘಾತದಲ್ಲಿ 4 ಜನರು ಗಾಯಗೊಂಡರು ಎಂದು ವರದಿ ತಿಳಿಸಿದೆ.

ಉಪ ಚುನಾವಣೆ : ಈ ರೈಲು ಅಪಘಾತದಲ್ಲಿ ಶಾಸಕ ಎ.ವೆಂಕಟೇಶ್ ನಾಯಕ್ ಅವರು ಮೃತಪಟ್ಟಿದ್ದರಿಂದ ದೇವದುರ್ಗ ಕ್ಷೇತ್ರ ತೆರವಾಗಿತ್ತು. 2016ರ ಫೆ.13ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಅವರು ಗೆಲುವು ಸಾಧಿಸಿದ್ದಾರೆ.

English summary
A man steering a lorry without a driving license caused for Bangalore-Nanded express rail accident said report of Satish Kumar Mittal, Commissioner of Rail Safety, Southern Circle. Five people including Devadurga MLA A.Venkatesh Naik (Congress) died on the spot in the collision on August 24th, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X