• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಬಿಜೆಪಿ ಆಂತರಿಕ ಸಮೀಕ್ಷೆ: ಬೆಚ್ಚಿಬಿದ್ದ ಅಮಿತ್ ಶಾ!

|
   Lok Sabha Elections 2019: ಕರ್ನಾಟಕ ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ ಹೆಚ್ಚು ಮತ ಯಾರಿಗೆ? |

   ಚುನಾವಣಾ ಹೊಸ್ತಿಲಲ್ಲಿ ವಿವಿಧ ಮಾಧ್ಯಮಗಳು ನಡೆಸುವ ಸಮೀಕ್ಷೆಯ ಜೊತೆಗೆ, ವಿವಿಧ ಪಕ್ಷಗಳು ತಮ್ಮ ತಮ್ಮ ನಂಬಲರ್ಹ ಖಾಸಗಿ ಸಂಸ್ಥೆಗಳಿಂದ ಸರ್ವೇ ನಡೆಸುವ ಪದ್ದತಿಯಿದೆ.

   ಕ್ಷೇತ್ರಾವಾರು ಸಮೀಕ್ಷೆ ನಡೆಸುವ ಸಂಸ್ಥೆಗಳು, ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಸೂಕ್ತ ಎಂದು ಜನರ ಮೂಡ್ ಅನ್ನು ಆಧರಿಸಿ ತಮ್ಮ ವರದಿಯಲ್ಲಿ ಉಲ್ಲೇಖಿಸುತ್ತವೆ.

   ಅದರಂತೆಯೇ, ಬಿಜೆಪಿ ಆಂತರಿಕ ಸಮೀಕ್ಷೆಯನ್ನು ನಡೆಸಿತ್ತು. ಅದರ ಪ್ರಕಾರ, 'ಮಿಷನ್ 22' ಹಾಳಾಗಿ ಹೋಗಲಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಷ್ಟು ಸೀಟ್ ಅನ್ನು ಗೆಲ್ಲುವುದು ಕಷ್ಟ ಎನ್ನುವ ವರದಿ ಬಂದಿದೆ ಎನ್ನುವ ಮಾಹಿತಿಯಿದೆ.

   ಇಂಥ ಅಪ್ರಬುದ್ಧ ಮಾತು ಆಡುವ ಅಗತ್ಯವಿತ್ತೆ ಯಡಿಯೂರಪ್ಪನವರೆ?

   ವರದಿಯನ್ನು ನೋಡಿ ಫುಲ್ ಗರಂ ಆಗಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ರಾಜ್ಯ ಪ್ರಮುಖ ಮುಖಂಡರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿಯಿದೆ. ಸಮೀಕ್ಷೆ ಪ್ರಕಾರ, ಬಿಜೆಪಿ ಎಷ್ಟು ಸ್ಥಾನವನ್ನು ಗೆಲ್ಲಬಹುದು?

   ಹಲವು ಬಾರಿ ಆಪರೇಷನ್ ಮಾಡಲು ಹೋಗಿ ವಿಫಲರಾಗಿದ್ದ ಬಿಎಸ್ವೈ

   ಹಲವು ಬಾರಿ ಆಪರೇಷನ್ ಮಾಡಲು ಹೋಗಿ ವಿಫಲರಾಗಿದ್ದ ಬಿಎಸ್ವೈ

   ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಹಲವು ಬಾರಿ ಆಪರೇಷನ್ ಮಾಡಲು ಹೋಗಿ ವಿಫಲರಾಗಿದ್ದ ಯಡಿಯೂರಪ್ಪ ಇನ್ನು ಮುಂದೆ ಆಪರೇಷನ್ ಕಮಲಕ್ಕೆ ಕೈಹಾಕುವುದಿಲ್ಲ, ಅದಾಗಿಯೇ ಬೀಳುವ ತನಕ, ಸಮ್ಮಿಶ್ರ ಸರಕಾರದ ತಂಟೆಗೆ ಹೋಗುವುದಿಲ್ಲ. ಇನ್ನೇನಿದ್ದರೂ ರಾಜ್ಯ ಪ್ರವಾಸ ಮಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 'ಮಿಷನ್ 22' ಗೆದ್ದು ಮೋದಿಯವರ ಕೈಬಲಪಡಿಸುವುದಷ್ಟೇ ನನ್ನ ಗುರಿ ಎಂದು ಹೇಳಿದ್ದರು.

   ಲೋಕಸಭಾ ಚುನಾವಣೆ : ಹಾವೇರಿಯಲ್ಲಿ ಶಪಥ ಮಾಡಿದ ಯಡಿಯೂರಪ್ಪ!

   ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಹೇಳಬಾರದನ್ನು ಹೇಳಿದ ಯಡಿಯೂರಪ್ಪ

   ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಹೇಳಬಾರದನ್ನು ಹೇಳಿದ ಯಡಿಯೂರಪ್ಪ

   28 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2ಕ್ಷೇತ್ರದಲ್ಲಿ ಗೆದ್ದಿತ್ತು. 22 ಕ್ಷೇತ್ರವನ್ನು ಗೆದ್ದಿದ್ದೇ ಆದಲ್ಲಿ, ರಾಜ್ಯದ ಮುಖ್ಯಮಂತ್ರಿಯಾಗಲು ನಿಮಗೆ ನಮ್ಮ ಫುಲ್ ಸಪೋರ್ಟ್ ಎಂದಿದ್ದರು ಅಮಿತ್ ಶಾ. ಆದರೆ, ಯಡಿಯೂರಪ್ಪನವರು, ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ಹೇಳಬಾರದನ್ನು ಹೇಳಿ, ದೇಶಾದ್ಯಂತ ಟೀಕೆಗೊಳಗಾದರು. ಪಕ್ಕದ ಪಾಕಿಸ್ತಾನದಲ್ಲೂ ಫೇಮಸ್ ಆದರು. ಇದು, ಬಿಜೆಪಿಗೆ ತೀವ್ರ ಮುಜುಗರವನ್ನು ತಂದೊಡ್ಡಿತ್ತು.

   ಲೋಕಸಭೆಯಲ್ಲಿ ಬಿಜೆಪಿ 22 ಸೀಟು ಗೆಲ್ಲಲು ಏರ್‌ಸ್ಟ್ರೈಕ್ ಸಹಾಯ ಮಾಡಲಿದೆ: ಯಡಿಯೂರಪ್ಪ

   ಬಿಜೆಪಿ ಐದು ಸ್ಥಾನಗಳನ್ನು ಕಳೆದುಕೊಳ್ಳಲಿದೆ

   ಬಿಜೆಪಿ ಐದು ಸ್ಥಾನಗಳನ್ನು ಕಳೆದುಕೊಳ್ಳಲಿದೆ

   ವಿಚಾರಕ್ಕೆ ಬರುವುದಾದರೆ, ಅಮಿತ್ ಶಾ ಕೈ ತಲುಪಿರುವ ಸಮೀಕ್ಷೆಯ ಪ್ರಕಾರ, ಕಳೆದ ಚುನಾವಣೆಯ ಫಲಿತಾಂಶವನ್ನು ಹೋಲಿಸಿದರೆ ಬಿಜೆಪಿ , ಐದು ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎನ್ನುವ ವರದಿ ಬಂದಿದೆ. ಮೋದಿ ವಿಜಯ ಸಂಕಲ್ಪ ಯಾತ್ರೆ, ಮನೆಮನೆಯಲ್ಲಿ ಬಿಜೆಪಿ ಧ್ವಜಹಾರಾಟ ಮುಂತಾದ ಕಾರ್ಯಕ್ರಮ ಹೊರತಾಗಿಯೂ ಬಿಜೆಪಿ ಕೇವಲ 12 ಸ್ಥಾನವನ್ನು ಗೆಲ್ಲಲಷ್ಟೇ ಶಕ್ತವಾಗಲಿದೆ.

   ಸೋತ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವಿದೆ

   ಸೋತ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವಿದೆ

   ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಕಣಕ್ಕೆ ಇಳಿಯುತ್ತಿರುವುದರಿಂದ, ಬಿಜೆಪಿಗೆ ಹಲವು ಕ್ಷೇತ್ರಗಳಲ್ಲಿ ಹಿನ್ನಡೆಯಾಗಲಿದೆ. ಆದರೆ, ಕಳೆದ ಬಾರಿ ಸೋತ ಕ್ಷೇತ್ರದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣವಿದೆ ಎನ್ನುವ ಅಂಶ ಸಮೀಕ್ಷೆಯಲ್ಲಿ ಉಲ್ಲೇಖವಾಗಿದೆ. ಹಾಗಾಗಿ, ಅಂತಹ ಕ್ಷೇತ್ರಗಳಲ್ಲಿ ಇನ್ನಷ್ಟು ಶ್ರಮವಹಿಸುವಂತೆ ಅಮಿತ್ ಶಾ ಪ್ರಮುಖವಾಗಿ ಯಡಿಯೂರಪ್ಪನವರಿಗೆ ಸೂಚಿಸಿದ್ದಾರೆ ಎನ್ನುವ ಮಾಹಿತಿಯಿದೆ.

   ಸೋತ ಸೀಟಿನಲ್ಲಿ ಪ್ರಯತ್ನ ಪಟ್ಟರೆ ಗೆಲ್ಲಬಹುದು ಎನ್ನುವ ಅಂಶ ಸಮೀಕ್ಷೆಯಲ್ಲಿ

   ಸೋತ ಸೀಟಿನಲ್ಲಿ ಪ್ರಯತ್ನ ಪಟ್ಟರೆ ಗೆಲ್ಲಬಹುದು ಎನ್ನುವ ಅಂಶ ಸಮೀಕ್ಷೆಯಲ್ಲಿ

   ಕಳೆದ ಬಾರಿ ಗೆದ್ದಿದ್ದ ಮೈಸೂರು, ಬೆಂಗಳೂರು ನಗರ ವ್ಯಾಪ್ತಿಯ ಕ್ಷೇತ್ರಗಳು, ವಿಜಯಪುರ, ಬೆಳಗಾವಿ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸಂಘಟನಾತ್ಮಕ ಪ್ರಯತ್ನ ನಡೆಸಬೇಕಿದೆ. ಆದರೆ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿ, ಕಲಬುರಗಿ ಕ್ಷೇತ್ರಗಳನ್ನು ಪ್ರಯತ್ನ ಪಟ್ಟರೆ ಗೆಲ್ಲಬಹುದು ಎನ್ನುವ ಅಂಶವನ್ನು ಸಮೀಕ್ಷೆಯಲ್ಲಿ ಹೇಳಲಾಗಿದೆ.

   English summary
   Loksabha elections 2019: BJP National President Amit Shah shocked to parties internal survey report. As per report, party may loose five more seats comapre to 2014 LS elections.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X