ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾಯುಕ್ತ ದಾಳಿ, 4.35 ಕೋಟಿ ಅಕ್ರಮ ಆಸ್ತಿ ಪತ್ತೆ

|
Google Oneindia Kannada News

ಬೆಂಗಳೂರು, ನ. 27 : ಮಂಗಳವಾರ ಲೋಕಾಯುಕ್ತ ಪೊಲೀಸರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇಲೆ ಐಎಎಸ್‌ ಅಧಿಕಾರಿ ರಮೇಶ್‌ ಬಿ. ಝಳಕಿ ಸೇರಿದಂತೆ ಮೂವರು ಸರ್ಕಾರಿ ನೌಕರರ ಮನೆ ಹಾಗೂ ಕಚೇರಿಗಳ ಮೇಲೆ ನಡೆಸಿದ್ದಾರೆ. ಒಟ್ಟು 4.35 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯ ದಾಖಲೆ ಪತ್ರಗಳನ್ನು ದಾಳಿಯ ವೇಳೆ ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ಬೆಂಗಳೂರು, ಹೊಸಪೇಟೆ, ಶಿವಮೊಗ್ಗ ಸೇರಿದಂತೆ 10 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಮೇಶ್‌ ಬಿ. ಝಳಕಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಉಪ ವಿಭಾಗದ ಪ್ರಥಮ ದರ್ಜೆ ಗುಮಾಸ್ತ ಬಿ.ಟಿ.ಭೋಗೇಶ ಹಾಗೂ ಶಿವಮೊಗ್ಗ ಮೆಸ್ಕಾಂ ಗ್ರಾಮಾಂತರ ಉಪ ವಿಭಾಗದ ವಾಹನ ಚಾಲಕ ಕ್ಲೇಮೆಂಟ್‌ ರಾಯನ್‌ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಅಧಿಕಾರಿಗಳು.

Lokayukta raid

ಬೆಂಗಳೂರು, ಬಳ್ಳಾರಿ, ಹೊಸಪೇಟೆ, ಕೂಡ್ಲಿಗಿ, ಶಿವಮೊಗ್ಗ ನಗರ ಸೇರಿದಂತೆ 10 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಭ್ರಷ್ಟರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸ್ಥಿರ ಮತ್ತು ಚರಾಸ್ತಿಯ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಾಯುಕ್ತ ಎಡಿಜಿಪಿ ಎಚ್‌.ಎನ್‌.ಸತ್ಯನಾರಾಯಣ ರಾವ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಶಪಡಿಸಿಕೊಂಡ ಆಸ್ತಿ ವಿವರ
ರಮೇಶ್‌ ಬಿಂದುರಾವ್‌ ಝಳಕಿ
* ಬೆಂಗಳೂರಿನ ಮಹಾಲಕ್ಷ್ಮೀಪುರಂ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ 35 ಲಕ್ಷ ರೂ. ಮೌಲ್ಯದ ಮನೆ
* ಕೆಎಎಸ್‌ ಅಧಿಕಾರಿಗಳ ಲೇಔಟ್‌ 2ನೇ ಹಂತದಲ್ಲಿ 10 ಲಕ್ಷ ರೂ. ಮೌಲ್ಯದ ನಿವೇಶನ
* ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಫ್ಲೈ ಓಕ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಕೋಟಿ ರೂ.ಗಿಂತ ಅಧಿಕ ಮೌಲ್ಯದ 2 ಫ್ಲಾಟ್‌
* ಬೆಳಗಾವಿಯ ಕಾಂಗ್ರಲಿ ಕುದ್‌ನಲ್ಲಿ 1.30 ಲಕ್ಷ ರೂ. ಮೌಲ್ಯದ ನಿವೇಶನ ಮತ್ತು ಸುಪ್ರಮೆಂಟಲ್‌ ರೆಂಟಲ್‌ ಪ್ರೈ.ಲಿ. ಹೆಸರಲ್ಲಿ 1.45 ಕೋಟಿ ರೂ. ಮೌಲ್ಯದ ಸ್ತಿರಾಸ್ಥಿ.

ಬಿ.ಟಿ.ಭೋಗೇಶ್‌ (ಪ್ರಥಮ ದರ್ಜೆ ಗುಮಾಸ್ತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೂಡ್ಲಿಗಿ ಉಪ ವಿಭಾಗ )
* ಹೊಸಪೇಟೆಯಲ್ಲಿ 60 ಲಕ್ಷ ರೂ. ಮೌಲ್ಯದ 3 ಅಂತಸ್ತಿನ ಮನೆ
* ಪತ್ನಿ ಹೆಸರಲ್ಲಿ 20 ಲಕ್ಷ ರೂ. ಮೌಲ್ಯದ ಎರಡು ಅಂತಸ್ತಿನ ಮನೆ ಮತ್ತು ನಗದು
* ಚಿನ್ನಾಭರಣ, ಬೆಳ್ಳಿ ವಸ್ತುಗಳು ಸೇರಿದಂತೆ 83.17 ಲಕ್ಷ ರೂ. ಅಕ್ರಮ ಸ್ಥಿರ ಮತ್ತು ಚರಾಸ್ತಿ ದಾಳಿಯ ವೇಳೆ ಪತ್ತೆಯಾಗಿದೆ.

ಕ್ಲೇಮೆಂಟ್‌ ರಾಯನ್‌, ಲಾರಿ ಚಾಲಕ, (ಶಿವಮೊಗ್ಗ ಗ್ರಾಮಾಂತರ ಉಪ ವಿಭಾಗ, ಮೆಸ್ಕಾಂ)
* ಶಿವಮೊಗ್ಗ ನಂಜಪ್ಪ ಲೇಔಟ್‌ನಲ್ಲಿ 47 ಲಕ್ಷ ರೂ. ಮೌಲ್ಯದ 1 ನಿವೇಶನ
* 2.33 ಲಕ್ಷದ ಮನೆ, ಎನ್‌.ಆರ್‌.ಪುರದಲ್ಲಿ ಎರಡು ಲಕ್ಷ ರೂ. ಮೌಲ್ಯದ ರಬ್ಬರ್‌ ತೋಟ
* ನಗದು, ಚಿನ್ನಾಭರಣ, ವಾಹನಗಳು ಸೇರಿದಂತೆ 49.07 ಲಕ್ಷ ರೂ. ಮೌಲ್ಯದ ಅಕ್ರಮ ಆಸ್ತಿ.

English summary
The Lokayukta police on Tuesday, November 26 conducted raids on 10 premises belonging to three government officials, including a senior IAS officer, in Bangalore, Bellary and Shimoga. The Lokayukta police carried out simultaneous raids on the offices and properties belonging to the three officials and unearthed total assets of Rs 4.35 core.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X