• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿವಿಪ್ಯಾಟ್‌ ಜೊತೆ ಮತ ತಾಳೆ ಹೇಗೆ?, ಚುನಾವಣಾ ಫಲಿತಾಂಶ ವಿಳಂಬ

|

ಬೆಂಗಳೂರು, ಮೇ 15 : ಕರ್ನಾಟಕದಲ್ಲಿಯೂ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಲಿದೆ. ಸುಪ್ರೀಂಕೋರ್ಟ್ ಆದೇಶದಂತೆ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಹಾಕಲು ಕಾಲಾವಕಾಶ ಬೇಕಾಗುತ್ತದೆ.

'ಸುಪ್ರೀಂಕೋರ್ಟ್ ಆದೇಶದಂತೆ ಇವಿಎಂ-ವಿವಿಪ್ಯಾಟ್ ಮತಗಳನ್ನು ತಾಳೆ ಮಾಡಬೇಕಿದೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಎಣಿಕೆ ಮಾಡಬೇಕಿದೆ' ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

ವಿವಿಪ್ಯಾಟ್ ಪ್ರಮಾಣೀಕರಣ: ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ ಸುಪ್ರೀಂ

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ. 58,186 ಮತಗಟ್ಟೆಗಳಲ್ಲಿ ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ಮತದಾನ ನಡೆದಿದೆ. ಮೇ 23ರಂದು ರಾತ್ರಿ 8 ಗಂಟೆ ವೇಳೆಗೆ ಅಂತಿಮ ಪ್ರಕಟವಾಗುವ ನಿರೀಕ್ಷೆ ಇದೆ.

ಮತಯಂತ್ರ ದೋಷ: ಸುಪ್ರೀಂ ಮೊರೆ ಹೋಗಲಿರುವ ವಿಪಕ್ಷಗಳು

ಸುಪ್ರೀಂಕೋರ್ಟ್ ಆದೇಶದಂತೆ ಮತ ಎಣಿಕೆ ಮಾಡಲು ಸಾಕಷ್ಟು ಸಮಯ ಬೇಕಿದೆ. ಒಂದ ವಿವಿಪ್ಯಾಟ್‌ನ ಚೀಟಿಗಳ ಎಣಿಕೆಗೆ ಕನಿಷ್ಠ 45 ನಿಮಿಷಗಳು ಬೇಕಾಗಿವೆ. ಆದ್ದರಿಂದ, ರಾಜ್ಯದಲ್ಲಿಯೂ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಲಿದೆ.

ಮತದಾನಕ್ಕೆ ಬಳಕೆ

ಮತದಾನಕ್ಕೆ ಬಳಕೆ

ಈ ಬಾರಿಯ ಚುನಾವಣೆಯಲ್ಲಿ ದೇಶಾದ್ಯಂತ ವಿವಿಪ್ಯಾಟ್ ಬಳಕೆ ಮಾಡಲಾಗಿದೆ. ಜನರು ಮತದಾನ ಮಾಡಿದ ತಕ್ಷಣ ವಿವಿಪ್ಯಾಟ್ (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೈಲ್) ಮೆಷಿನ್‌ನಲ್ಲಿ ಯಾರಿಗೆ ಮತ ಹಾಕಿದೆ ಎಂಬುದು ಭಾವಚಿತ್ರ ಸಹಿತ ತಿಳಿಯುತ್ತಿತ್ತು. ಈಗ ವೋಟಿಂಗ್ ಮೆಷಿನ್ ಫಲಿತಾಂಶ ಮತ್ತು ವಿವಿಪ್ಯಾಟ್‌ನಲ್ಲಿ ಸ್ಲಿಪ್‌ಗೆ ಫಲಿತಾಂಶ ತಾಳೆಯಾಗಬೇಕಿದೆ.

ಸುಪ್ರೀಂಕೋರ್ಟ್ ಆದೇಶವೇನು?

ಸುಪ್ರೀಂಕೋರ್ಟ್ ಆದೇಶವೇನು?

ಸುಪ್ರೀಂಕೋರ್ಟ್ ಮತ ಎಣಿಕೆ ಮಾಡುವಾಗ ಪ್ರತಿ ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಬೇಕು. ವೋಟಿಂಗ್ ಮೆಷಿನ್ ಜೊತೆ ಚೀಟಿಯ ಫಲಿತಾಂಶ ತಾಳೆಯಾಗಬೇಕು ಎಂದು ಆದೇಶ ನೀಡಿದೆ.

ಸಾಕಷ್ಟು ಸಮಯ ಬೇಕು

ಸಾಕಷ್ಟು ಸಮಯ ಬೇಕು

ಒಂದು ವಿವಿಪ್ಯಾಟ್‌ನ ಚೀಟಿ ಮತ್ತು ವೋಟಿಂಗ್ ಮೆಷಿನ್ ಫಲಿತಾಂಶ ತಾಳೆ ಮಾಡಲು ಸುಮಾರು 45 ನಿಮಿಷಗಳು ಬೇಕು. ಒಂದು ವಿಧಾನಸಭಾ ಕ್ಷೇತ್ರದ 5 ಮತಗಟ್ಟೆಯ ಫಲಿತಾಂಶ ತಾಳೆಯಾಗಲು ಸುಮಾರು 3 ರಿಂದ 4 ತಾಸುಗಳು ಬೇಕಾಗುತ್ತದೆ. ಆದ್ದರಿಂದ, ಫಲಿತಾಂಶ ಘೋಷಣೆ ತಡವಾಗಲಿದೆ.

ಅಂತಿಮ ಫಲಿತಾಂಶ ಘೋಷಣೆ

ಅಂತಿಮ ಫಲಿತಾಂಶ ಘೋಷಣೆ

ಮತ ಎಣಿಕೆ ಕೇಂದ್ರದಲ್ಲಿ ಕೊನೆಯ ಟೇಬಲ್‌ನಲ್ಲಿ ವಿವಿಪ್ಯಾಟ್‌ನ ಮುದ್ರಿತ ಚೀಟಿಗಳನ್ನು ತಾಳೆ ಮಾಡಲಾಗುತ್ತದೆ. ಇದು ಮುಗಿದ ಬಳಿಕ ಅಂತಿಮ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ಹೀಗಾಗಿ ಕರ್ನಾಟಕದ 28 ಕ್ಷೇತ್ರಗಳ ಫಲಿತಾಂಶ ಘೋಷಣೆ ರಾತ್ರಿ 8 ಗಂಟೆಗೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

1,120 ಮತಗಟ್ಟೆಗಳು

1,120 ಮತಗಟ್ಟೆಗಳು

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ 58,186 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಸುಪ್ರೀಂಕೋರ್ಟ್ ಆದೇಶದಂತೆ 224 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಂತೆ 28 ಕ್ಷೇತ್ರಗಳಲ್ಲಿ ತಲಾ 40ರಂತೆ 1,120 ಮತಗಟ್ಟೆಗಳ ಫಲಿತಾಂಶವನ್ನು ತಾಳೆ ಮಾಡಬೇಕು. ಬಳಿಕ ಅಂತಿಮ ಫಲಿತಾಂಶ ಘೋಷಣೆಯಾಗಲಿದೆ.

English summary
Lok Sabha elections 2019 result to be declared late due supreme court order said Sanjiv Kumar chief electoral officer (CEO) of Karnataka. Supreme Court ordered that Voter Verified Paper Audit Trail slips of 5 electronic voting machines in every constituency should be counted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X