ಬಿಜೆಪಿ 20 ಸ್ಥಾನ ಗೆಲ್ಲುತ್ತಾ? ಲೋಕಸಭೆ ಚುನಾವಣೆ ಫಲಿತಾಂಶ ನಿಜವಾಗುತ್ತಾ?

ಬಿಜೆಪಿ ಪಕ್ಷ 2024ರ ಲೋಕಸಭೆ ಚುನಾವಣೆಯಲ್ಲಿ, ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಅದರಲ್ಲೂ, ಈ ಕುರಿತು ಬಿಜೆಪಿ ವರಿಷ್ಠ ಬಿಎಸ್ ಯಡಿಯೂರಪ್ಪ ಅವರು ಸೇರಿ ಘಟಾನುಘಟಿ ನಾಯಕರೇ ಭವಿಷ್ಯ ನುಡಿದಿದ್ದರು. ಹಾಗಾದ್ರೆ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ಗ್ಯಾರಂಟಿನಾ? ಬನ್ನಿ ತಿಳಿಯೋಣ.

ಭಾರತ ಪ್ರಜಾಪ್ರಭುತ್ವ ದೇಗುಲ, ಭಾರತವೇ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಕೂಡ ಹೌದು. ಪ್ರಧಾನಿ ಮೋದಿ ನೇತೃತ್ವದಲ್ಲಿ ಹ್ಯಾಟ್ರಿಕ್ ಬಾರಿಸಿ ಕೇಂದ್ರದಲ್ಲಿ 3ನೇ ಬಾರಿಗೆ ಅಧಿಕಾರ ಹಿಡಿಯಲು ಎನ್‌ಡಿಎ ಒಕ್ಕೂಟ ಸಜ್ಜಾಗಿದೆ. ಈ ಬಾರಿ ಕನಿಷ್ಠ 400 ಸ್ಥಾನಗಳನ್ನ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್‌ ಮಾಡಿತ್ತು. ಹಾಗಾದ್ರೆ ಬಿಜೆಪಿ ಪಕ್ಷದ 'ಮಿಷನ್ 400' ಸಕ್ಸಸ್ ಆಗುತ್ತಾ? ಈ ಮಾಸ್ಟರ್ ಪ್ಲ್ಯಾನ್‌ಗೆ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳು ಸಿಗುತ್ತವಾ? ಬಿಜೆಪಿ ನಾಯಕರ ಮಾತು ನಿಜವಾಗುತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

Lok Sabha Election 2024 Results Will BJP Can Win 20 Seats In Lok Sabha Election 2024

ಬಿಜೆಪಿಗೆ 28 ಸ್ಥಾನದಲ್ಲಿ 20 ಸೀಟ್?

2024ರ ಲೋಕಸಭೆ ಚುನಾವಣೆ ಫಲಿತಾಂಶ ಇನ್ನೇನು ಹೊರಬೀಳಲಿದೆ. ಹೀಗಾಗಿ, ಸಕಲ ಸಿದ್ಧತೆ ಸಾಗಿದೆ. ಜೂನ್ 4 ರಂದು ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಸೋಲು & ಗೆಲುವಿನ ಭಾರಿ ಲೆಕ್ಕಾಚಾರ ಶುರುವಾಗಿದೆ. ಹೀಗಿದ್ದಾಗ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು? ಎಂಬ ಮಾತು & ಚರ್ಚೆ ಶುರುವಾಗಿದೆ. ಅದರಲ್ಲೂ 28 ಸ್ಥಾನ ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಈಗ ಬಿಜೆಪಿ ಎಷ್ಟು ಸ್ಥಾನ ಗೆಲ್ಲಬಹುದು? ಎಂಬ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.

ಈಗಿನ ಲೆಕ್ಕಾಚಾರದ ಪ್ರಕಾರ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲಬಹುದು ಎಂಬುದು, ಬಿಜೆಪಿ ನಾಯಕರ ಲೆಕ್ಕಾಚಾರ. ಆದರೆ ಕಾಂಗ್ರೆಸ್ ಕೂಡ ಬಿಜೆಪಿಗೆ ಪೈಪೋಟಿ ನೀಡಿದೆ. ಇಲ್ಲಿ ಮತ್ತೊಮ್ಮೆ ಕರ್ನಾಟಕದ ಚುನಾವಣಾ ಅಖಾಡದಲ್ಲಿ 'ಗ್ಯಾರಂಟಿ' ಆಶ್ವಾಸನೆ ವರ್ಕೌಟ್ ಆಗಿದೆ ಎಂಬ ಮಾತು ಕೂಡ ಓಡಾಡುತ್ತಿದೆ ಹೀಗಿದ್ದಾಗ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನಗಳ ಗೆಲ್ಲಬಹುದಾ? ಎಂಬ ಚರ್ಚೆ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+