ಲೋಕ ಅದಾಲತ್‌; 24 ಲಕ್ಷ ಪ್ರಕರಣ ಇತ್ಯರ್ಥ, 1420 ಕೋಟಿ ಪರಿಹಾರ

ಬೆಂಗಳೂರು, ಸೆಪ್ಟೆಂಬರ್ 13; ಶನಿವಾರ (ಸೆಪ್ಟೆಂಬರ್ 9) ದಂದು ರಾಜ್ಯಾದ್ಯಂತ ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 24,36,270 ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 1420 ಕೋಟಿ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಿ. ನರೇಂದ್ರರ್, ಮೂರು ಪೀಠಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 1,012 ಪೀಠಗಳು ಅದಾಲತ್‌ಗಾಗಿ ಕಾರ್ಯನಿರ್ವಹಣೆ ಮಾಡಿದ್ದು, ನ್ಯಾಯಾಲಯದಲ್ಲಿ ಬಾಕಿಯಿರುವ 2,14,925 ಪ್ರಕರಣಗಳು ಹಾಗೂ 22,21,345 ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿ ಒಟ್ಟು 24,36,270 ಪ್ರಕರಣಗಳ ಇತ್ಯರ್ಥ ಪಡಿಸಲಾಗಿದೆ ಎಂದರು.

Lok Adalat 24 lakh Cases Settled And 1420 Crore Compensation Awarded

ಅಲ್ಲದೆ, ಲೋಕ ಅದಾಲತ್‌ನಿಂದ ಸಾರ್ವಜನಿಕರಿಗೆ ಯಾವುದೇ ವೆಚ್ಚವಿಲ್ಲದೆ ಪರಿಹಾರ ಲಭ್ಯವಾಗುತ್ತಿದೆ. ಜತೆಗೆ, ನ್ಯಾಯಾಲಯದ ಸಮಯವೂ ಉಳಿಯುತ್ತಿದೆ ಎಂದರು. ಹೈಕೋರ್ಟ್‌ನ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಕೆ. ಸೋಮಶೇಖರ್, ಅದಾಲತ್‌ನಲ್ಲಿ 1305 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, 255 ದಂಪತಿಗಳು ಮತ್ತೆ ಒಂದಾಗುವಂತೆ ಮಾಡಲಾಗಿದೆ ಎಂದರು.

ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ 3,303 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು ಒಟ್ಟು 166 ಕೋಟಿ ರೂ.ಗಳನ್ನು ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಕೊಡಿಸಲಾಗಿದೆ. 9269 ಚೆಕ್ ಬೌನ್ಸ್ ಪ್ರಕರಣಗಳ ಇತ್ಯರ್ಥ ಪಡಿಸಿದ್ದು 373 ಕೋಟಿ ರೂ,ಗಳ ಪರಿಹಾರ ವಿತರಣೆ ಮಾಡಲಾಗಿದೆ.

430 ಭೂಸ್ವಾಧೀನ ಅಮಲ್ಜಾರಿ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿದ್ದು 88 ಕೋಟಿ ರೂ.ಗಳ ಪರಿಹಾರ ವಿತರಣೆ ಮಾಡಲಾಗಿದೆ. 767 ಮೋಟಾರು ವಾಹನ ಅಮಲ್ಜಾರಿ ಪ್ರಕರಣಗಳು ಇತ್ಯರ್ಥ ಪಡಿಸಿದ್ದು 48 ಕೋಟಿ ರೂ.ಗಳ ಪರಿಹಾರ ವಿತರಣೆ ಮಾಡಲಾಗಿದೆ. ಇದಲ್ಲದೆ, ಇತರೆ 2,899 ಅಮಲ್ಜಾರಿ ಪ್ರಕರಣಗಳು ಇತ್ಯರ್ಥವಾಗಿದ್ದು 103 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ. 35 ರೇರಾ ಪ್ರಕರಣಗಳಲ್ಲಿ 7.40 ಕೋಟಿ ಪರಿಹಾರ, 95 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳಲ್ಲಿ 2 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಅದಾಲತ್ ವೈಶಿಷ್ಟ್ಯಗಳು

* ಕಳೆದ 13 ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿಯಿದ್ದ ಸ್ಪೇಸಿಫಿಕ್ ಫಾರಫಾರ್ಮೆನ್ಸ್ ಪ್ರಕರಣದ ಇತ್ಯರ್ಥ

* ಮೋಟಾರು ವಾಹನ ಪ್ರಕರಣವೊಂದರಲ್ಲಿ 51,46,820 ರೂ.ಗಳ ಪರಿಹಾರ ಹಾಗೂ ಮತ್ತೊಂದು ಪ್ರಕರಣದಲ್ಲಿ 53 ಕೋಟಿ ರೂ. ಗಳ ಪರಿಹಾರ ವಿತರಣೆ.

* ಲಘು ವ್ಯಾಜ್ಯಗಳ ನ್ಯಾಯಾಲಯದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಹಾಗೂ ಬಿ. ವಿ. ಮಂಜುನಾಥ್ ವಿರುದ್ಧದ ಪ್ರಕರಣದಲ್ಲಿ 6.85 ಕೋಟಿ ರೂ.ಗಳ ಪರಿಹಾರ ಹಾಗೂ ಟಾಟಾ ಕ್ಯಾಪಿಟಲ್ ಫೈನಾನ್ಸ್ ಸರ್ವೀಸ್ ಲಿಮಿಟೆಡ್ ಮತ್ತು ಗಿರಿ ಸಹಜನ್ಯ ಪ್ರೋಜೆಕ್ಟ್ ವಿರುದ್ಧದ ಪ್ರಕರಣದಲ್ಲಿ 3.35 ಕೋಟಿ ರೂ.ಗಳ ಪರಿಹಾರ, ಟಾಟಾ ಕ್ಯಾಪಿಟಲ್ ಸರ್ವೀಸ್ ಮತ್ತು ವೆಂಕಟೇಶ್ವರ ಕ್ರಷರ್ಸ್ ನಡುವಿನ ಪ್ರಕರಣದಲ್ಲಿ 3.35 ಕೋಟಿ ರೂ.ಗಳ ಪರಿಹಾರ ನೀಡಿ ಇತ್ಯರ್ಥ ಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+