ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಹೂಡಿಕೆಗೆ ಮುಂದಾದ ಲಾಕ್ ಹೀಡ್ ಮಾರ್ಟಿನ್ ಕಂಪನಿ

|
Google Oneindia Kannada News

ಬೆಂಗಳೂರು, ಜನವರಿ 28 : ಏರೋಸ್ಪೇಸ್ ವಲಯದ ಮುಂಚೂಣಿಯ ಕಂಪನಿ ಲಾಕ್ ಹೀಡ್ ಮಾರ್ಟಿನ್ ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದಾಗಿದೆ. ಕಂಪೆನಿಯ ಭಾರತದ ಮುಖ್ಯಸ್ಥರು ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿಯಾಗಲಿದ್ದಾರೆ.

ಲಾಕ್ ಹೀಡ್ ಮಾರ್ಟಿನ್ ಕಂಪನಿಯ ಉಪಾಧ್ಯಕ್ಷ, ರಿಚರ್ಡ್ ಎಫ್ ಎಂಬ್ರೋಸ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು. ಭೇಟಿಯ ಮರುದಿನವೇ ಯಡಿಯೂರಪ್ಪಗೆ ಪತ್ರ ಬರೆದು ತಮ್ಮ ಕಂಪೆನಿಯ ಭಾರತದ ಮುಖ್ಯಸ್ಥರು ಸಂಪರ್ಕಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದುಕುಸಿದ ವಾಹನ ಉದ್ಯಮ ಚೇತರಿಕೆಗೆ ನಿರ್ಮಲಾ ಸೀತಾರಾಮನ್ ಮದ್ದು

ಯಡಿಯೂರಪ್ಪ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಲಾಕ್ ಹೀಡ್ ಮಾರ್ಟಿನ್ ಕಂಪನಿಯ ಉಪಾಧ್ಯಕ್ಷ ರಿಚರ್ಡ್ ಎಫ್ ಎಂಬ್ರೋಸ್ ಅವರು ಬರೆದ ಪತ್ರ ಇಂದು ತಲುಪಿದೆ. ಮೇಲ್ನೊಟಕ್ಕೆ ಇದೊಂದು ಸಾಮಾನ್ಯ ಪತ್ರವೆನಿಸಿದರೂ ಅದರ ಗಹನತೆಯನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ" ಎಂದು ಹೇಳಿದ್ದಾರೆ.

ಸಾಲದ ಸುಳಿ: ಕನ್ನಡಿಗರು ಉದ್ಯಮ ಕಟ್ಟಲು ಹೆದರುತ್ತಾರೇಕೆ? ಸಾಲದ ಸುಳಿ: ಕನ್ನಡಿಗರು ಉದ್ಯಮ ಕಟ್ಟಲು ಹೆದರುತ್ತಾರೇಕೆ?

Lockheed Martin Corporation To Invest In Karnataka

"ಲಾಕ್ ಹೀಡ್ ಮಾರ್ಟಿನ್ ಅಮೆರಿಕದ ಏರೋಸ್ಪೇಸ್ ವಲಯದ ಬೃಹತ್ ಕಂಪನಿಯಾಗಿದ್ದು, ಅದು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ದಾವೋಸ್ ಭೇಟಿ ಫಲಪ್ರದವಾಗಿದೆ ಎಂದು ಹೇಳಲು ಇದು ಒಂದು ಉದಾಹರಣೆ'' ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಸಿಲಿಕಾನ್ ವ್ಯಾಲಿಯಲ್ಲಿ ಹಾರ್ಡ್‌‌ವೇರ್‍ ಉದ್ಯಮ ಬೆಳವಣಿಗೆಗೆ ಎಲ್ಸಿಯಾ ನೆರವುಸಿಲಿಕಾನ್ ವ್ಯಾಲಿಯಲ್ಲಿ ಹಾರ್ಡ್‌‌ವೇರ್‍ ಉದ್ಯಮ ಬೆಳವಣಿಗೆಗೆ ಎಲ್ಸಿಯಾ ನೆರವು

"ಈ ಪತ್ರ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸುವ ಬಗ್ಗೆ ನಮ್ಮ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಇದಲ್ಲದೆ ನಮ್ಮ ದಾವೋಸ್ ಭೇಟಿ ಬಗ್ಗೆ ಅನುಮಾನ ವ್ಯಕ್ತಪಡಿಸುವವರಿಗೆ ಇದು ಉತ್ತರವಾಗಿದೆ" ಎಂದು ಯಡಿಯೂರಪ್ಪ ಪ್ರಕಟಣೆಯಲ್ಲಿ ಹೇಳಿದ್ದಾರೆ.

"ದಾವೋಸ್ ಭೇಟಿಯು ನಮ್ಮ ರಾಜ್ಯಕ್ಕೆ ಬಂಡವಾಳ ಹರಿದು ಬರುವಲ್ಲಿ ಮತ್ತು ನವೆಂಬರ್‌ನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಯಶಸ್ವಿ ಕಾಣುತ್ತೇವೆ ಎಂಬ ನಮ್ಮ ನಂಬಿಕೆ ಗಟ್ಟಿಯಾಗಿದೆ" ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

English summary
Karnataka chief minister B. S. Yediyurappa said that Lockheed Martin Corporation showed interest to invest in state. Lockheed Martin Corporation is an American global aerospace, defense, security and advanced technologies company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X