• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನದ 24 ಗಂಟೆ ದಿನಸಿ, ಸೂಪರ್ ಮಾರ್ಕೆಟ್ ಅಂಗಡಿ ಓಪನ್

|

ಬೆಂಗಳೂರು, ಮಾರ್ಚ್ 25: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಮಾಡಿದ್ದರೂ ಯುಗಾದಿ ಹಬ್ಬದ ನಿಮಿತ್ತ ಶಾಪಿಂಗ್ ಜೋರಾಗಿ ನಡೆದಿರುವುದು ಕಂಡು ಬಂದಿದೆ. ಅಲ್ಲದೆ, ಸೋಷಿಯಲ್ ಡಿಸ್ಟೆಂಸಿಂಗ್ ಮರೆತು ಅಗತ್ಯ ವಸ್ತು ಖರೀದಿಸಲು ಮುಂದಾದ ದೃಶ್ಯಗಳು ಸಾಮಾನ್ಯವಾಗಿದೆ. ದಿನ ಬಳಕೆಯ ಅಗತ್ಯ ವಸ್ತುಗಳಿಗೆ ಜನರು ಮುಗಿ ಬೀಳುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ಕರ್ನಾಟಕ ಪೊಲೀಸ್ ತೆಗೆದುಕೊಂಡಿದೆ.

ಕೊರೊನಾ: ಯುಗಾದಿಯ ದಿನ ಕಣ್ಣೀರು ಇಡುತ್ತಿರುವ ಬೆಂಗಳೂರು ರಸ್ತೆಗಳು

ದಿನದ 24 ಗಂಟೆ ದಿನಸಿ, ಸೂಪರ್ ಮಾರ್ಕೆಟ್ ಅಂಗಡಿಗಳನ್ನು ತೆಗೆಯುವುದಕ್ಕೆ ಒತ್ತಡ ಬಂದಿದ್ದರಿಂದ ಮಾರುಕಟ್ಟೆ ಓಪನ್ ಅಗತ್ಯ ಬಿದ್ದರೆ 24 X 7 ಓಪನ್ ಮಾಡಬಹುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅನುಮತಿ ನೀಡಿದ್ದಾರೆ. ಆದರೆ, ಗುಂಪು ಸೇರದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಟ್ವೀಟ್ ಮಾಡಿ, ದಿನದ 24 ಗಂಟೆ ದಿನಸಿ ಅಂಗಡಿ ಓಪನ್ ಮಾಡಲು ಅನುಮತಿ ನೀಡಲಾಗಿದೆ. ಜನಜಂಗುಳಿ ತಪ್ಪಿಸಲು 24 ಗಂಟೆಯೂ ಓಪನ್ ಮಾಡಲು ಅನುಮತಿ ನೀಡಲಾಗಿದೆ. ದಿನಸಿ, ಸೂಪರ್ ಮಾರ್ಕೆಟ್ ಗೆ ಮಾತ್ರ ಅನುಮತಿ ನೀಡಲಾಗಿದೆ. ಗುಂಪು ಸೇರದಂತೆ ಪೊಲೀಸರ ಮನವಿ ಮಾಡಿದ್ದಾರೆ. ಅಲ್ಲದೇ ವೈದ್ಯಕೀಯ ನೆರವಿಗೆ ಪಾಸ್ ಅಗತ್ಯ ಇಲ್ಲ ಎಂದಿದ್ದಾರೆ.

English summary
Karnataka DGP Praveen Sood has allowed grocery shops and supermarkets to remain open 24 X 7 all over Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X