ವಿ.ಎಸ್.ಉಗ್ರಪ್ಪ ಸಂಸತ್ತಿಗೆ, ಪರಿಷತ್ ಸ್ಥಾನ ಪಡೆಯಲು ಪೈಪೋಟಿ!

ಬೆಂಗಳೂರು, ನವೆಂಬರ್ 08 : ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಉಗ್ರಪ್ಪ ಅವರ ರಾಜೀನಾಮೆಯಿಂದ ತೆರವಾಗುವ ಪರಿಷತ್ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.

ಉಪ ಚುನಾವಣೆ ಫಲಿತಾಂಶ ಘೋಷಣೆಯಾದ 14 ದಿನದಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ವಿ.ಎಸ್.ಉಗ್ರಪ್ಪ ಅವರು ಇನ್ನೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಆದರೆ, ತೆರವಾಗುವ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ.

ವಿ.ಎಸ್.ಉಗ್ರಪ್ಪ ಅವರು 2014ರ ಜೂನ್ 24ರಂದು ವಿಧಾನ ಪರಿಷತ್‌ ಸದಸ್ಯರಾಗಿ ನಾಮಕರಣಗೊಂಡಿದ್ದರು. 2018ರ ನವೆಂಬರ್‌ನಲ್ಲಿ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 628365 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಮತ್ತೊಂದು ಕಡೆ ವಿಧಾನ ಪರಿಷತ್ ನಾಮಕರಣಕ್ಕೆ ಕಾಂಗ್ರೆಸ್ ಕೋಟಾ ಪೂರ್ಣಗೊಂಡಿದ್ದು, ಇಬ್ಬರು ನೇಮಕವಾಗಿದ್ದಾರೆ. ಜೆಡಿಎಸ್ ಒಂದು ಸ್ಥಾನವನ್ನು ಉಳಿಸಿಕೊಂಡಿದ್ದು, ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ನಾಮಕರಣಗೊಳ್ಳುವ ಸಾಧ್ಯತೆ ಇದೆ.....

19 ತಿಂಗಳ ಅವಧಿ ಇದೆ

19 ತಿಂಗಳ ಅವಧಿ ಇದೆ

ವಿ.ಎಸ್.ಉಗ್ರಪ್ಪ ಅವರು 2014ರ ಜೂನ್ 24ರಂದು ವಿಧಾನ ಪರಿಷತ್ ಸದಸ್ಯರಾಗಿ ನಾಮಕರಣಗೊಂಡಿದ್ದರು. ಅವರ ಅವಧಿ 2020ರ ಜೂನ್ 23ರ ತನಕ ಇದೆ. ಸುಮಾರು 19 ತಿಂಗಳು ಇರುವ ಪರಿಷತ್ ಸ್ಥಾನವನ್ನು ಪಡೆಯಲು ಕಾಂಗ್ರೆಸ್‌ನಲ್ಲಿ ಪೈಪೋಟಿ ಆರಂಭವಾಗಿದೆ.

ರಾಜೀನಾಮೆ ನೀಡಿಲ್ಲ

ರಾಜೀನಾಮೆ ನೀಡಿಲ್ಲ

ವಿ.ಎಸ್.ಉಗ್ರಪ್ಪ ಅವರು ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಇನ್ನೂ ರಾಜೀನಾಮೆ ನೀಡಿಲ್ಲ. ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡ 14 ದಿನದಲ್ಲಿ ರಾಜೀನಾಮೆ ನೀಡಬೇಕು. ಮುಂದಿನವಾರ ಅವರು ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಅದಕ್ಕೂ ಮೊದಲು ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಉಗ್ರಪ್ಪ ರಾಜೀನಾಮೆಯಿಂದ ತೆರವಾಗುವ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ.

ಯಾರ-ಯಾರ ಹೆಸರು?

ಯಾರ-ಯಾರ ಹೆಸರು?

ವಿ.ಎಸ್.ಉಗ್ರಪ್ಪ ಅವರ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ಹಲವು ನಾಯಕರ ಹೆಸರು ಕೇಳಿ ಬರುತ್ತಿದೆ. ರಾಜ್ಯ ಹಣಕಾಸು ಆಯೋಗದ ಮಾಜಿ ಸದಸ್ಯ, ಹಿರಿಯ ವಕೀಲ ಎಚ್.ಡಿ.ಅಮರನಾಥ್, ಮಾಜಿ ಮೇಯರ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಚಂದ್ರಪ್ಪ, ಧಾರವಾಡ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾಂತಮ್ಮ ಗುಜ್ಜಾಲ್, ಮಾಜಿ ಸಚಿವ ರಾಣಿ ಸತೀಶ್ ಅವರ ಹೆಸರು ಮುಂಚೂಣಿಯಲ್ಲಿದೆ.

ಜೆಡಿಎಸ್‌ನ ಒಂದು ಸ್ಥಾನ ಖಾಲಿ

ಜೆಡಿಎಸ್‌ನ ಒಂದು ಸ್ಥಾನ ಖಾಲಿ

ವಿಧಾನ ಪರಿಷತ್ತಿನಲ್ಲಿ ಮೂರು ನಾಮ ನಿರ್ದೇಶನ ಸ್ಥಾನಗಳು ಖಾಲಿ ಇದ್ದವು. ಇವುಗಳಲ್ಲಿ ಕಾಂಗ್ರೆಸ್‌ ಪಕ್ಷದಿಂದ ಪ್ರಕಾಶ್ ರಾಥೋಡ್ ಮತ್ತು ಯು.ಬಿ.ವೆಂಕಟೇಶ್ ನಾಮಕರಣಗೊಂಡಿದ್ದಾರೆ. ಜೆಡಿಎಸ್ ಪಕ್ಷ ಒಂದು ಸ್ಥಾನವನ್ನು ಖಾಲಿ ಇಟ್ಟುಕೊಂಡಿದೆ. ಈ ಸ್ಥಾನಕ್ಕೆ ಮಧು ಬಂಗಾರಪ್ಪ ಅವರು ನೇಮಕವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+