ದೇವೇಗೌಡ ನಿವಾಸಕ್ಕೆ ಕಾಂಗ್ರೆಸ್ ನಾಯಕರ ಭೇಟಿ: ಮೈತ್ರಿಗೆ ಫುಲ್‌ಸ್ಟಾಪ್?
ಬೆಂಗಳೂರು, ಜುಲೈ 10: ಕರ್ನಾಟಕ ರಾಜಕೀಯದ ಹೈಡ್ರಾಮಾ ಕುತೂಹಲಕಾರಿ ತಿರುವು ಪಡೆದುಕೊಳ್ಳುವ ಲಕ್ಷಣ ತೋರಿಸುತ್ತಿದೆ. ರಾಜಕೀಯದ ಬೆಳವಣಿಗೆಗಳು ಸಿನಿಮೀಯ ರೀತಿಯಲ್ಲಿ ಸಾಗುತ್ತಿವೆ.
ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಭೇಟಿ ಮಾಡಿ ಅವರ ಮನವೊಲಿಸಲು ಬೆಳಿಗ್ಗೆಯೇ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಮತ್ತು ಅರಸೀಕೆರೆ ಜೆಡಿಎಸ್ ಶಾಸಕ ಕೆಎಸ್ ಶಿವಲಿಂಗೇಗೌಡ ಅವರು ಮುಂಬೈ ತಲುಪಿದ್ದಾರೆ. ಶಾಸಕರು ಉಳಿದುಕೊಂಡಿರುವ ರೆನೈಸನ್ಸ್ ಹೋಟೆಲ್ ಮುಂಭಾಗ ಕಾವಲು ಹಾಕಿರುವ ಪೊಲೀಸರು ಈ ಇಬ್ಬರು ಮುಖಂಡರಿಗೆ ಒಳಗೆ ಬಿಡಲು ನಿರಾಕರಿಸಿದ್ದಾರೆ.
ಇದರಿಂದ ಹೋಟೆಲ್ ಎದುರು ಭಾರಿ ಡ್ರಾಮಾ ನಡೆಯುತ್ತಿದೆ. ಇತ್ತ ಡಿಕೆ ಶಿವಕುಮಾರ್ ಅವರು ಅತೃಪ್ತ ಶಾಸಕರನ್ನು ವಾಪಸ್ ಕರೆದುಕೊಂಡು ಬರಲಿದ್ದಾರೆ ಎಂಬ ನಿರೀಕ್ಷೆಗಳು ದೋಸ್ತಿ ಸರ್ಕಾರದ ಎರಡೂ ಪಕ್ಷಗಳ ಮುಖಂಡರಲ್ಲಿ ಮೂಡಿದೆ.

ದೋಸ್ತಿ ಸರ್ಕಾರವನ್ನು ಉಳಿಸಲು ಅಧಿವೇಶನ ಆರಂಭವಾಗುವ ಶುಕ್ರವಾರದ ಒಳಗೆ ಅತೃಪ್ತ ಶಾಸಕರನ್ನು ಕರೆದುಕೊಂಡು ಬರುವುದು ಅವರಿಗೆ ಅನಿವಾರ್ಯವಾಗಿದೆ.


Office of Milind Deora: Mr Milind Deora and other Congress leaders have been released. The police is taking Mr DK Shivkumar to the airport. He is being forcibly sent back to Bengaluru. https://t.co/dgIkOsYPZ1
— ANI (@ANI) 10 July 2019
ಈಗ ಗೊತ್ತಾಯ್ತು, ದಿನೇಶ್ ಗುಂಡೂರಾವ್ ಮತ್ತು ಪ್ರಿಯಾಂಕ ಖರ್ಗೆ ಅವತಾರ ನೋಡಿದ ಮೇಲೆ ಯಾಕೆ ಕಾಂಗ್ರೆಸ್ ಸದಸ್ಯರು ಸದನಕ್ಜೆ ರಾಜಿನಾಮೆ ಕೊಡುತ್ತಿದ್ದಾರೆಂದು.
— Nimma Sureshkumar (@nimmasuresh) 10 July 2019












Click it and Unblock the Notifications