ಕರ್ನಾಟಕದಲ್ಲಿ ಮೋದಿ : 4 ಕಾರ್ಯಕ್ರಮಗಳ ಚಿತ್ರ, ವರದಿ
ಬೆಂಗಳೂರು, ಅಕ್ಟೋಬರ್ 29 : ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ನಾಲ್ಕು ಕಡೆ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.
ಧರ್ಮಸ್ಥಳ : ಬೆಳಗ್ಗೆ ಮೋದಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ನಂತರ ಉಜಿರೆಯಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿದರು.
ಎಚ್‌ಎಎಲ್ ವಿಮಾನ ನಿಲ್ದಾಣ : ಧರ್ಮಸ್ಥಳದಿಂದ ಮೋದಿ ಬೆಂಗಳೂರಿಗೆ ಆಗಮಿಸಿದು. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಅರಮನೆ ಮೈದಾನ : ಅರಮನೆ ಮೈದಾನಕ್ಕೆ ಆಗಮಿಸಿದ ಮೋದಿ ಸೌಂದರ್ಯ ಲಹರಿ ಮಹಾ ಸಮರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೀದರ್‌ನಲ್ಲಿ ನರೇಂದ್ರ ಮೋದಿ : ಸಂಜೆ ಬೀದರ್-ಕಲಬುರಗಿ ರೈಲು ಮಾರ್ಗ ಉದ್ಘಾಟಿಸಿದ ನರೇಂದ್ರ ಮೋದಿ, ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಹಿಂದಿನ ಸುದ್ದಿಗಳು
ಪ್ರಧಾನಿ ನರೇಂದ್ರ ಮೋದಿ ಒಂದು ದಿನದ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಭಾನುವಾರ ಅವರು ಧರ್ಮಸ್ಥಳ, ಬೆಂಗಳೂರು, ಬೀದರ್‌ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
In Pics : ಧರ್ಮಸ್ಥಳದಲ್ಲಿ ನರೇಂದ್ರ ಮೋದಿ
ನರೇಂದ್ರ ಮೋದಿ ಭೇಟಿಯ ಹಿನ್ನಲೆಯಲ್ಲಿ ಧರ್ಮಸ್ಥಳ, ಬೀದರ್ ಮತ್ತು ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೆಳಗ್ಗೆ 11 ಗಂಟೆಗೆ ಮೋದಿ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದು, ಮಂಜುನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಸಮಯ 6 ಗಂಟೆ : ಬೀದರ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಸಮಯ 4.30 : ಅರಮನೆ ಮೈದಾನದ ಕಾರ್ಯಕ್ರಮ ಮುಗಿಸಿ ಮೋದಿ, ಬೀದರ್‌ಗೆ ತೆರಳಿದರು.
ಸಮಯ 3.30 : ಅರಮನೆ ಮೈದಾನಕ್ಕೆ ಆಗಮಿಸಿದ ನರೇಂದ್ರ ಮೋದಿ
ಸಮಯ 2.50 : ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ
ಸಮಯ 1 ಗಂಟೆ : ಪ್ರಧಾನಿ ನರೇಂದ್ರ ಮೋದಿ ಉಜಿರೆಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು
ಸಮಯ 11.40 : ಉಜಿರೆಗೆ ಆಗಮಿಸಿದ ನರೇಂದ್ರ ಮೋದಿ
ಸಮಯ 11.30 : ಧರ್ಮಸ್ಥಳದಲ್ಲಿ ಪೂಜೆ ಸಲ್ಲಿಸಿ ಹೊರ ಬಂದ ಮೋದಿ, ರಸ್ತೆ ಮಾರ್ಗದ ಮೂಲಕ ಉಜಿರೆಗೆ ಪ್ರಯಾಣ
ಸಮಯ 11.10 : ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಮೋದಿ ಆಗಮನ, ಮೋದಿ ಸ್ವಾಗತಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ಸಮಯ 10.55 : ಧರ್ಮಸ್ಥಳಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
ಸಮಯ 10.46 : ಮೋದಿ ಅವರನ್ನು ಸ್ವಾಗತಿಸಿದ ಕೇಂದ್ರ ಸಚಿವ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್
PM Modi arrives in Karnataka's Mangaluru, to offer prayers at Shri Manjunatha Swami Temple at Dharmasthala & address a public meeting pic.twitter.com/BCaM6yFFMa
— ANI (@ANI) October 29, 2017
ಸಮಯ 10.35 : ಹೆಲಿಕಾಪ್ಟರ್‌ನಲ್ಲಿ ಮೋದಿ ಬಜ್ಪೆಯಿಂದ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ
ಸಮಯ 10.30 : ವಿಶೇಷ ವಿಮಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದರು












Click it and Unblock the Notifications