ಎಂ.ಕೆ.ಗಣಪತಿ ಅವರ ಮೇಲಿದ್ದ ಆರೋಪಗಳು

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜುಲೈ 08 : ಮಂಗಳೂರು ಐಜಿ ಕಚೇರಿಯ (ಪಶ್ಚಿಮ ವಲಯ) ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. 'ತಮ್ಮ ಸಾವಿಗೆ ಹಿರಿಯ ಅಧಿಕಾರಿಗಳು, ಸಚಿವ ಕೆ.ಜೆ.ಜಾರ್ಜ್‌ ಕಾರಣ' ಎಂದು ಗಣಪತಿ ಅವರು ವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ವಿಡಿಯೋ ವಿವಾದ ಹುಟ್ಟು ಹಾಕಿದೆ.

'ಪ್ರಕರಣವೊಂದರ ಸಂಬಂಧ ಎಂ.ಕೆ.ಗಣಪತಿ ಅವರನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದರು. ಆಗ ಅವರು ನನ್ನನ್ನು ಭೇಟಿಯಾಗಿದ್ದರು. ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಅವರಿಗೆ ತಿಳಿಸಿದ್ದೆ' ಎಂದು ಹಿಂದಿನ ಗೃಹ ಸಚಿವ ಕೆ.ಜೆ.ಜಾರ್ಜ್‌ ಹೇಳಿಕೆ ನೀಡಿದ್ದಾರೆ.[ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ಸಿಐಡಿಗೆ]

List of allegations against DySP MK Ganapathi

ಮಂಗಳೂರಿನಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಗಣಪತಿ ಅವರನ್ನು 2007ರಲ್ಲಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ ಯಶವಂತಪುರ, ಮಡಿವಾಳ, ರಾಜಗೋಪಾಲನಗರ ಹಾಗೂ ವಿಶೇಷ ಜಾರಿ ಘಟಕದಲ್ಲಿ ಅವರು ಕೆಲಸ ಮಾಡಿದ್ದರು. 2016ರ ಏಪ್ರಿಲ್‌ನಲ್ಲಿ ಡಿವೈಎಸ್‌ಪಿ ಹುದ್ದೆಗೆ ಬಡ್ತಿ ಪಡೆದು, ಮಂಗಳೂರಿಗೆ ವರ್ಗಾವಣೆಗೊಂಡಿದ್ದರು.[ಡಿವೈಎಸ್‌ಪಿ ಎಂ.ಕೆ.ಗಣಪತಿ ಸಂಕ್ಷಿಪ್ತ ಪರಿಚಯ]

ವಿವಿಧ ಕಡೆ ಕರ್ತವ್ಯ ಮಾಡುವಾಗ ಗಣಪತಿ ಅವರನ್ನು ಒಟ್ಟು ಮೂರು ಬಾರಿ ಅಮಾನತು ಮಾಡಲಾಗಿತ್ತು. ಗಣಪತಿ ಅವರ ಮೇಲೆಇದ್ದ ಆರೋಪಗಳ ವಿವರಗಳು ಇಲ್ಲಿವೆ.....

* 2010ರಲ್ಲಿ ಯಶವಂತಪುರ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾಗ ರೌಡಿ ಪ್ರಶಾಂತ್ ಅಲಿಯಾಸ್ ಪಚ್ಚಿ ಎನ್‌ಕೌಂಟರ್ ನಡೆದಿತ್ತು. ಪ್ರಶಾಂತನ ತಾಯಿ ಇದು ನಕಲಿ ಎನ್‌ ಕೌಂಟರ್ ಎಂದು ಕಾನೂನು ಹೋರಾಟ ಆರಂಭಿಸಿದ್ದರು. ಈ ಪ್ರಕರಣದಲ್ಲಿ ಇಲಾಖೆಯ ತನಿಖೆ ಎದುರಿಸಿ ಅವರು ಅಮಾನತುಗೊಂಡಿದ್ದರು.[ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

* ಮಡಿವಾಳ ಠಾಣೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದಾಗ ಇಲಾಖೆ ಕೊಟ್ಟ ರಿವಾಲ್ವಾರ್ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಗುರಿಯಾಗಿದ್ದರು.

* ರಾಜಗೋಪಾಲ ನಗರ ಠಾಣೆಯಲ್ಲಿ ಕಾರ್ಯ ನಿರ್ವಹಿಸುವಾಗ ಕರ್ತವ್ಯ ಲೋಪದ ಆಧಾರದ ಮೇಲೆ ಅಮಾನತುಗೊಂಡಿದ್ದರು.[ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆಗೆ ಕಾರಣ ಯಾರು?]

* ಮನೆಗಳವು ಆರೋಪಿಯಿಂದ ವಶಪಡಿಸಿಕೊಂಡ ಹಣವನ್ನು ವಾರಸುದಾರರಿಗೆ ನೀಡದೆ ವಂಚಿಸಿದ ಆರೋಪವೂ ಕೇಳಿಬಂದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangalore Inspector General office (Western Range) DySP MK Ganapathi committed suicide On July 7, 2016. Here are the list of allegations against him.
Please Wait while comments are loading...