ಮದ್ಯ ಮಾರಾಟ ಬಂದ್... ಅಕ್ಟೋಬರ್ 02 ಗುರವಾರ ಎಣ್ಣೆ ಮಾರಾಟ ನಿಷೇಧ... Liquor Price
ಮದ್ಯ ಮಾರಾಟ ಬಂದ್... ಅಂತಾ ಕೇಳಿದ ತಕ್ಷಣ ಮದ್ಯ ಪ್ರಿಯರು & ಪಕ್ಕಾ ಕುಡುಕರು ಬೇಸರವನ್ನ ಮಾಡಿಕೊಳ್ಳುತ್ತಾರೆ. ಯಾಕಂದ್ರೆ ಎಷ್ಟೋ ಜನರಿಗೆ ಎಣ್ಣೆ ಗಂಟಲಿಗೆ ಬೀಳದೆ ನಿದ್ದೆಯೇ ಬರೋದಿಲ್ಲ. ನಿದ್ದೆ ಬರಬೇಕು, ನೆಮ್ಮದಿ ಸಿಗಬೇಕು ಅಂದ್ರೆ ಕುಡಿಯಲೇಬೇಕು ಅನ್ನೋದು ಎಷ್ಟೋ ಜನರ ನಂಬಿಕೆ. ಇಂತಹ ಪರಿಸ್ಥಿತಿಯಲ್ಲಿ ದಿಢೀರ್ ಅಂತಾ ಎಣ್ಣೆ ಅಂಗಡಿಗೆ ರಜೆ ಮಾಡಿ ಬೀಗ ಹಾಕಿಬಿಟ್ಟರೆ ಪರಿಸ್ಥಿತಿ ಹೇಗೆ ಇರಲ್ಲ ಹೇಳಿ? ಹೌದು, ಮದ್ಯ ಮಾರಾಟ ಬಂದ್... ಅಕ್ಟೋಬರ್ 02 ಗುರವಾರ ಎಣ್ಣೆ ಮಾರಾಟ ನಿಷೇಧ ಗ್ಯಾರಂಟಿ ಆಗಿದೆ. ಇಷ್ಟು ಮಾತ್ರವಲ್ಲ ಮುಂದಿನ 03 ದಿನಗಳ ಕಾಲ ಎಣ್ಣೆ ಸಿಗೋದೆ ಅನುಮಾನ!
ಒಬ್ಬರಿಗೆ ಒಂದು ಕ್ವಾಟರ್, ಇನ್ನೂ ಕೆಲವರಿಗೆ 2 ಕ್ವಾಟರ್ ಕೊಟ್ಟರೂ ಸಾಲೋದಿಲ್ಲ. ಈ ನಡುವೆ 90 ಹೊಡೆದು ಟೈಟ್ ಆಗಿ ಬೀಳುವವರು ಕೂಡ ಇದ್ದಾರೆ. ಎಲ್ಲಾ ಅವರ ಕೆಪಾಸಿಟಿ ಮೇಲೆ ಡಿಪೆಂಡ್ ಎನ್ನಬಹುದು. ಸೆಲೆಬ್ರೇಷನ್ ಮಾಡುವಾಗ ದುಡ್ಡಿಗೆಲ್ಲಾ ಲೆಕ್ಕ ಹಾಕೋದಿಲ್ಲ ನಮ್ಮ ಜನ. ಹೀಗಾಗಿ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿ ಜನ ಎಂಜಾಯ್ ಮಾಡ್ತಾ ಇದ್ದು, ಎಣ್ಣೆ ರೇಟ್ ಜಾಸ್ತಿ ಆಗಿದ್ದರೂ ಕುಡಿಯೋರು ಮಾತ್ರ ಕಡಿಮೆ ಆಗುತ್ತಿಲ್ಲ. ಇಂತಹ ಸಮಯದಲ್ಲೇ ದಿಢೀರ್ ಅಂತಾ ಎಣ್ಣೆ ಅಂಗಡಿ ಬಾಗಿಲು ಹಾಕಿದ್ರೆ?

ಎಷ್ಟು ದಿನ ಎಣ್ಣೆ ಸಿಗಲ್ಲ?
ಅಂದಹಾಗೆ ಇದೀಗ ಅಕ್ಟೋಬರ್ 02 ಗುರವಾರ ಗಾಂಧಿ ಜಯಂತಿ ಕಾರಣಕ್ಕೆ ಎಣ್ಣೆ ಅಂಗಡಿಗಳು ಬಂದ್ ಆಗಲಿವೆ. ಇದೇ ಸಮಯದಲ್ಲಿ ದಸರಾ & ದುರ್ಗಾ ಪೂಜೆ ಇರುವ ಕಾರಣಕ್ಕೆ ಕೂಡ ಹಲವು ಪ್ರದೇಶಗಳಲ್ಲಿ ಲಿಕ್ಕರ್ ಮಾರಾಟ ಬಂದ್ ಆಗುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಮೂರು ದಿನಗಳ ಕಾಲ ಎಣ್ಣೆ ಸಿಗೋದಿಲ್ವಾ? ಅನ್ನೋ ಪ್ರಶ್ನೆ ಕೂಡ ಮೂಡಿದೆ. ಮತ್ತೊಂದು ಕಡೆ ಬಾರ್ & ರೆಸ್ಟೋರೆಂಟ್ ಬಂದ್ ಆಗುವ ಭಯದಲ್ಲಿ ಹಲವರು ಸ್ಟಾಕ್ ಮಾಡಿ ಇಟ್ಕೊಳೋದು ಉಂಟು! ಹಾಗೇ ಎಣ್ಣೆ ಮಾರಾಟ ಬಂದ್ ಆಗುವ ಕಾರಣಕ್ಕೆ ಕೋಟಿ ಕೋಟಿ ರೂಪಾಯಿ ಲಾಸ್ ಕೂಡ ಆಗಲಿದೆ ಅಂತಾ ಮದ್ಯ ಪ್ರಿಯರು ಸಮಜಾಯಿಷಿ ನೀಡುತ್ತಾ ಇದ್ದಾರೆ. ಹೀಗಿದ್ದಾಗ ಅಂಗಡಿಗಳ ಮಾಲೀಕರು ಮಾತ್ರ ರೂಲ್ಸ್ ಫಾಲೋ ಮಾಡೋದಕ್ಕೆ ಇದೀಗ ಸಜ್ಜಾಗಿದ್ದು, ಎಣ್ಣೆ ಅಂಗಡಿಗೆ ಬೀಗ ಹಾಕಲಿದ್ದಾರೆ!












Click it and Unblock the Notifications