ಮತ್ತೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಶುರು: ಜಯಮೃತ್ಯುಂಜಯ ಶ್ರೀ ಹೇಳಿದ್ದೇನು?

ದಾವಣಗೆರೆ, ಜುಲೈ 24: ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಶ್ರಾವಣ ಮಾಸದಿಂದ ಮತ್ತೆ ಶುರು ಮಾಡುತ್ತೇವೆ ಎಂದು ಕೂಡಲ ಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ದಾವಣಗೆರೆಯಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅದರು,ಈಗಷ್ಟೆ ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಬಜೆಟ್ ಮುಗಿಸಿದೆ. ಈ ಬಗ್ಗೆ ನಮ್ಮ ಸಮಾಜದ ಶಾಸಕರೊಂದಿಗೆ ಚರ್ಚೆ ಮಾಡುತ್ತಿದ್ದೇವೆ. ಮುಂದಿನ ಹೋರಾಟ ಯಾವ ರೀತಿ ಮಾಡಬೇಕು ಚರ್ಚೆಯಾಗಬೇಕಿದೆ. ಜನಾಂದೋಲನ ಹೋರಾಟ ಮಾಡಬೇಕು ಎಂಬುದರ ಚರ್ಚೆ ನಡೆಸುತ್ತೇವೆ, ಈಗಾಗಲೇ ನಾನು ಕೂಡ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

lingayat-separate-religion

ಹಿಂದಿನ ಮೀಸಲಾತಿ ವಿಚಾರ ಸುಪ್ರೀ ಕೋರ್ಟ್ ನಲ್ಲಿದೆ. ಅದನ್ನು ಸರಿಪಡಿಸಬೇಕಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿಯಾದಾಗ ಬಜೆಟ್ ಅಧಿವೇಶನ ಬಳಿಕ ತಿಳಿಸುತ್ತೇವೆ ಎಂದಿದ್ದರು. ಶುಕ್ರವಾರವಷ್ಟೇ ಬಜೆಟ್ ಅಧಿವೇಶನ ಮುಗಿದಿದೆ. ಅವರ ಅಭಿಪ್ರಾಯಕ್ಕೆ ಕಾಯುತ್ತಿದ್ದೇವೆ. ಈ ಬಗ್ಗೆ ಶೀಘ್ರ ಸರ್ಕಾರ ತಮ್ಮ ಉತ್ತರವನ್ನ ತಿಳಿಸಬೇಕು ಎಂದು ಜಯ ಮೃತ್ಯುಂಜಯ ಶ್ರೀಗಳ ಒತ್ತಾಯಿಸಿದರು.

ಹಾಲುಮತ ಸಮಾಜ ಎಸ್ಟಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಸಂತೋಷದ ವಿಚಾರ. ಹಿಂದಿನ ಸರ್ಕಾರ ನಮಗೆ 2ಡಿ ಮೀಸಲಾತಿ ನೀಡಿದ್ದು ಸುಪ್ರೀಂ ಕೋರ್ಟ್ ನಲ್ಲಿದೆ. ಮುಖ್ಯಮಂತ್ರಿಗಳು 2ಎ ಮೀಸಲಾತಿಗೆ ಇರುವ ಸ್ಟೇ ತೆರವುಗೊಳಿಸಬೇಕು. ನಮ್ಮನ್ನ 2ಎ ಒಳಗಾದರು ಸೇರಿಸಿ ಅಥವಾ 2ಡಿ ಮೀಸಲಾತಿಗೆ ಆದೇಶ ಮಾಡಿ. ಲೋಕಸಭೆ ಚುನಾವಣೆಯೊಳಗೆ ನಮಗೆ ಸಾಮಾಜಿಕ ನ್ಯಾಯ ಕೊಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಈ ಕುರಿತು ಕಾನೂನು ತಜ್ಞರ ಜೊತೆ ಸಭೆ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ನಿಲುವನ್ನ ಸ್ಪಷ್ಟಪಡಿಸಿಬೇಕು. ಪಂಚಮಸಾಲಿ ಸಮಾಜಕ್ಕೆ ಬೇಕಾದ ಸೌಲಭ್ಯಗಳನ್ನ ಒದಗಿಸಬೇಕು, ಎಲ್ಲ ಲಿಂಗಾತರಿಗೂ ಸೆಂಟ್ರಲ್ ಓಬಿಸಿ ಪ್ರಮಾಣ ಪತ್ರ ನೀಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಹಾಲುಮತ ಸಮಾಜಕ್ಕೆ ಎಸ್ಟಿ ನೀಡಿದ್ದು ನಮಗೆ ಅನುಕೂಲವಾಗಿದೆ, ಅವರ ಜಾಗಕ್ಕೆ ನಾವು ಸೇರಬಹುದೆಂಬ ಆಶಯವಿದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+