• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ 'ಮುನ್ನುಗ್ಗಿ ದೆಹಲಿಗೆ'

|

ಬೆಂಗಳೂರು, ಸೆಪ್ಟೆಂಬರ್ 27: ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಲಿಂಗಾಐತ ಪ್ರತ್ಯೇಕ ಧರ್ಮ ವಿವಾದವು ಆ ನಂತರ ತಣ್ಣಗಾದಂತೆ ಕಂಡಿತ್ತು. ಆದರೆ ಈಗ ಮತ್ತೆ ತಲೆ ಎತ್ತಿದೆ.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ 'ಮುನ್ನುಗ್ಗಿ ದೆಹಲಿಗೆ' ಕಾರ್ಯಕ್ರಮವನ್ನು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಆಯೋಜಿಸಿದೆ.

ಪೀಠಾಧಿಪತಿಗಳ ಹೇಳಿಕೆಗಳಲ್ಲಿ ಬಹಿರಂಗವಾದ ರಾಜಕಾರಣಿಗಳ ಅಂತರಂಗ!

ಡಿಸೆಂಬರ್ 10, 11, 12 ರಂದು ದೆಹಲಿಯ ತಲಕೊಟ್ಟಾರ ಒಳಾಂಗಣ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು. ಎಲ್ಲರೂ ಭಾಗವಹಿಸುವಂತೆ ಲಿಂಗಾಐತ ಪ್ರತ್ಯೇಕ ಧರ್ಮ ಹೋರಾಟ ಸಮಿತಿ ಕರೆ ನೀಡಿದೆ.

ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವನ್ನಾಗಿ ಪರಿಗಣಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿ ಕೇಂದ್ರಕ್ಕೆ ಪ್ರಸ್ತಾವವನ್ನು ರವಾನಿಸಿತ್ತು. ಆದರೆ ಅದಿನ್ನೂ ಕೇಂದ್ರದ ಅಂಗಳದಲ್ಲಿಯೇ ಇದೆ. ಹಾಗಾಗಿ ದೆಹಲಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಒತ್ತಡ ಹೇರಲಾಗುತ್ತಿದೆ.

ಲಿಂಗಾಯತ ಸಮುದಾಯದ ಭವಿಷ್ಯದ ನಾಯಕ ಬಿವೈ ವಿಜಯೇಂದ್ರ?

ಕಾಂಗ್ರೆಸ್‌ ಶಾಸಕ ಎಂ.ಬಿ.ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಹಲವು ಮುಖಂಡರು ಈ ಹೋರಾಟದ ಮುಂಚೂಣಿಯಲ್ಲಿದ್ದರು. ಎಂಬಿ ಪಾಟೀಲ್ ಅವರು ಹೊರತುಪಟ್ಟಂತೆ ಇನ್ನುಳಿದವರು ಚುನಾವಣೆಯಲ್ಲಿ ಸೋತ ಕಾರಣ ಹಾಗೂ ಎಂ.ಬಿ.ಪಾಟೀಲ್ ಸಹ ರಾಜಕೀಯವಾಗಿ ಶಕ್ತಿ ಕಳೆದುಕೊಂಡ ಕಾರಣ ಇತ್ತೀಚೆಗೆ ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮ ಹೋರಾಟ ಹಿನ್ನೆಲೆಗೆ ಸರಿದಿತ್ತು.

English summary
Lingayat separate religion protest shifted to Delhi. December 10,11,12 organizing big protest rally in Delhi to demand Lengayat Separate religion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X