ಲಿಂಗಾಯಿತ ಪ್ರತ್ಯೇಕ ಧರ್ಮ: ಶಿವಶಿವಾ.. ಸಂತರ ಬಾಯಿಯಿಂದ ಇಂಥಾ ಮಾತಾ?

Posted By:
Subscribe to Oneindia Kannada
   ಲಿಂಗಾಯತ ಧಾರ್ಮ ಪ್ರತ್ಯೇಕ ಧರ್ಮ | ಜಯ ಮೃತ್ಹುಂಜಯ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ | Oneindia Kannada

   ಲಿಂಗಾಯಿತ ಪ್ರತ್ಯೇಕ ಧರ್ಮ ಎನ್ನುವ ಕೂಗಿಗೆ ಬೆಂಕಿಹಚ್ಚಿದವರು, ತನ್ನ ಪಾಡಿಗಿದ್ದ ಮಗುವನ್ನು ಚಿವಟಿ, ಅದು ಅಳೋಕೆ ಶುರುಮಾಡಿದ ಮೇಲೆ, ಅದನ್ನೂ ಸಮಾಧಾನವೂ ಪಡಿಸದೆ, ಮೂಲೆಯಲ್ಲಿ ಕೂತು ಮುಸಿಮುಸಿ ನಗುವಂತೆ ಮಾಡಿದೆ ಪ್ರತ್ಯೇಕ ಧರ್ಮದ ಈ ಹೋರಾಟ.

   ಇಡೀ ನಾಡೇ ನಡೆದಾಡುವ ದೇವರೆಂದೇ ಗೌರವಿಸುವ ಸಿದ್ದಗಂಗಾ ಶ್ರೀಗಳೇ ಲಿಂಗಾಯಿತ ಮತ್ತು ವೀರಶೈವ ಎರಡೂ ಒಂದೇ ಧರ್ಮ ಎಂದು ಹೇಳಿದ ಮೇಲೂ, ಪ್ರತ್ಯೇಕ ಧರ್ಮದ ಹೋರಾಟ, ಅಸೆಂಬ್ಲಿ ಚುನಾವಣೆಯ ಈ ಹೊಸ್ತಿಲಲ್ಲಿ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ.

   ಹುಬ್ಬಳ್ಳಿಯಲ್ಲಿ ಮತ್ತೆ ಮೊಳಗಿತು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ

   ಎರಡೂ ಸಮುದಾಯವೂ ಒಂದೇ, ಹಿಂದೂ ಧರ್ಮವನ್ನು ಒಡೆಯುವ ಕೆಲಸ ಬೇಡ ಎನ್ನುವ ಉಡುಪಿ ಹಿರಿಯ ಪೇಜಾವರ ಶ್ರೀಗಳಿಗೆ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತರ್ ಅವರಿಗೆ 'ನಮ್ಮ ವಿಚಾರ ನಾವು ನೋಡಿಕೊಳ್ಳುತ್ತೇವೆ, ನೀವು ತಲೆಹಾಕಬೇಡಿ' ಎನ್ನುವ ಹೇಳಿಕೆಗಳು, ಪ್ರತ್ಯೇಕ ಧರ್ಮಕ್ಕೆ ಹೋರಾಡುತ್ತಿರುವ ಕೆಲವು ಮುಖಂಡರು/ಸ್ವಾಮೀಜಿಗಳಿಂದ ಬರುತ್ತಿದೆ.

   ಹುಬ್ಬಳ್ಳಿಯಲ್ಲಿ ಭಾನುವಾರ (ನ 5) ನಡೆದ 'ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಗಾಗಿ' ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಸಂತರೊಬ್ಬರು, ಇಡೀ ಹಿಂದೂ ಸಮದಾಯವೇ ತಲೆತಗ್ಗಿಸುವಂತಹ ಮಾತನ್ನಾಡಿದ್ದಾರೆ. ಇಂತವರೆಲ್ಲಾ ಸಂತರಾ, ಬಸವಣ್ಣ ಇಂತವರನ್ನೆಲ್ಲಾ ಮೆಚ್ಚುತ್ತಾನಾ ಎಂದು ಹೇಸಿಗೆ ಪಡುವ ಹೇಳಿಕೆಯನ್ನು ನೀಡಿದ್ದಾರೆ.

   ನಗರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮುಖಂಡರ/ಶ್ರೀಗಳ ಒಟ್ಟಾರೆ ಭಾಷಣವನ್ನು ಅವಲೋಕಿಸುವುದಾದರೆ, ಇದು ಸಮುದಾಯದ ಪ್ರಭಾವಿ ಮುಖಂಡರನ್ನು ಜೊತೆಗೆ, ಪ್ರತ್ಯೇಕ ಧರ್ಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ಪೀಠಾಧಿಪತಿಗಳನ್ನು ಟಾರ್ಗೆಟ್ ಮಾಡಲೆಂದೇ ಆಯೋಜಿಸಿದ ಸಮಾವೇಶದಂತಿತ್ತು. ಮುಂದೆ ಓದಿ..

   ಸಿಎಂ ಹೇಳಿಕೆಯಿಂದಾಗಿ ಹೊಸ ರೂಪ ಪಡೆಯುತ್ತಿರುವ ಹೋರಾಟ

   ಸಿಎಂ ಹೇಳಿಕೆಯಿಂದಾಗಿ ಹೊಸ ರೂಪ ಪಡೆಯುತ್ತಿರುವ ಹೋರಾಟ

   ಲಿಂಗಾಯಿತ ಪ್ರತ್ಯೇಕ ಧರ್ಮ ಎನ್ನುವ ಸಣ್ಣ ಕೂಗು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯಿಂದಾಗಿ ಈಗ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಲಿಂಗಾಯಿತ ಮತ್ತು ವೀರಶೈವ ಎನ್ನುವುದು ಎರಡೂ ಬೇರೆ ಬೇರೆ ಎಂದು, ಎಲ್ಲರೂ ಒಟ್ಟಾಗಿ ಬಂದರೆ, ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ ಎಂದು ಸಿಎಂ ಹೇಳಿದ್ದರು. ಅದಕ್ಕೆ ಪೂರಕವಾದ ವೇದಿಕೆಯನ್ನ ಸಿದ್ದಪಡಿಸಲು ಅವರ ಪರಮಾಪ್ತ ಸಚಿವ ಎಂ ಬಿ ಪಾಟೀಲರು ಈಗ ಮುಂದಾಗಿದ್ದಾರೆ.

   ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ

   ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ

   ಹುಬ್ಬಳ್ಳಿಯ ಭಾನುವಾರದ ಸಮಾವೇಶದಲ್ಲಿ ಮಾತಾನಾಡುತ್ತಿದ್ದ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, . "ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು. ಐವರು ತಂದೆಗೆ ಹುಟ್ಟಿದವರು ವೀರಶೈವರು" ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿ ತಮ್ಮ ಬಾಯಿ ಚಪಲ ತೀರಿಸಿಕೊಂಡಿದ್ದಾರೆ.

   ಬಸವಣ್ಣನೂ ಮೆಚ್ಚದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

   ಬಸವಣ್ಣನೂ ಮೆಚ್ಚದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

   ಬಸವಣ್ಣನೂ ಮೆಚ್ಚದ ಶ್ರೀಗಳ ಈ ಹೇಳಿಕೆಗೆ ಸಮಾವೇಶದಲ್ಲಿ ಭಾರೀ ಕರತಾಡನ ವ್ಯಕ್ತವಾದರೂ, ಸಮುದಾಯ ಇಬ್ಬಾಗ ಆಗಬಾರದು ಎನ್ನುವ ಹಿರಿಯ ಸಿದ್ದಗಂಗಾ ಮತ್ತು ರಂಭಾಪುರಿ ಮುಂತಾದ ಶ್ರೀಗಳೇ ತಲೆತಗ್ಗಿಸುವಂತೆ ಮಾಡಿದ್ದಾರೆ ಜಯಮೃತ್ಯುಂಜಯ ಸ್ವಾಮೀಜಿಗಳು. ಈ ಸ್ವಾಮೀಜಿಯ ಮೇಲೆ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

   ಶಾಮನೂರು ಶಿವಶಂಕರಪ್ಪ, ಜಗದೀಶ್ ಶೆಟ್ಟರ್, ಪ್ರಭಾಕರ್ ಕೋರೆ

   ಶಾಮನೂರು ಶಿವಶಂಕರಪ್ಪ, ಜಗದೀಶ್ ಶೆಟ್ಟರ್, ಪ್ರಭಾಕರ್ ಕೋರೆ

   ಶಾಮನೂರು ಶಿವಶಂಕರಪ್ಪ, ಜಗದೀಶ್ ಶೆಟ್ಟರ್, ಪ್ರಭಾಕರ್ ಕೋರೆ, ಪಂಚಮಪೀಠವನ್ನು ವಿರೋಧಿಸುವ ಭಾಷಣಗಳೇ ಸಮಾವೇಶದಲ್ಲಿ ಹರಿದು ಬರುತ್ತಿದ್ದನ್ನು ಅವಲೋಕಿಸಿದರೆ, ಇದರಲ್ಲಿ ರಾಜಕೀಯ ದುರ್ವಾಸನೆ ಎದ್ದೆದ್ದು ಕಾಣುತ್ತಿರುವುದಂತೂ ಹೌದು.

   ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿರುವ ಲಿಂಗಾಯಿತ ಸಮುದಾಯ

   ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿರುವ ಲಿಂಗಾಯಿತ ಸಮುದಾಯ

   ಜನಸಂಖ್ಯೆಯ ಆಧಾರದಲ್ಲಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿರುವ ಲಿಂಗಾಯಿತ ಸಮುದಾಯವನ್ನು ಒಡೆದು ರಾಜಕೀಯ ಮೈಲೇಜ್ ಪಡೆದುಕೊಳ್ಳುವ ಕೆಲಸಗಳು ನಡೆಯುತ್ತಿರುವುದು, ಮೇಲ್ನೋಟಕ್ಕೆ ಕಾಣಿಸುತ್ತಿರುವಂತ ಸತ್ಯ, ಎನ್ನುವ ಸೂಕ್ಷತೆಯನ್ನು ಪೀಠಾಧಿತಿಪತಿಗಳು ಅರಿತು, ಒಗ್ಗಟ್ಟಾಗಿ ಸಾಗಿದರೆ. ಎಲ್ಲವೂ ಸುಸೂತ್ರ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Lingayat separate religion: Controversial statement of Basava Jaya Mruthyunjaya Swamiji of Koodalasangama Panchamasali Math in Hubballi during Lingayat rally on Sunday (Nov 5) for separate religion status for Lingayat.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ