ಬಿಹಾರದಂತೆ ಕರ್ನಾಟಕದಲ್ಲೂ ಜೆ.ಡಿ.ಯು ವಿಭಜನೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05: ಬಿಹಾರದಲ್ಲಿ ಜನತಾದಳ(ಸಂಯುಕ್ತ) ಜೆ.ಡಿ.ಯು. ಎರಡು ಬಣಗಳಾಗಿ ವಿಭಜನೆಯಾಗಿದ್ದು ನೆನಪಿರಬಹುದು. ಶರದ್ ಯಾದವ್ ಮತ್ತು ನಿತೀಶ್ ಕುಮಾರ್ ಬಣಗಳು ಸೃಷ್ಟಿಯಾಗಿವೆ. ಇದೇ ರೀತಿ ಕರ್ನಾಟಕದಲ್ಲೂ ಜೆ.ಡಿ.ಯು. ವಿಭಜನೆಯಾಗಿದೆ.

ಜೆಎಚ್ ಪಟೇಲರ ಪುತ್ರ ಮಹಿಮಾ ಈಗ ಜೆಡಿಯು ಅಧ್ಯಕ್ಷ

ನಿತೀಶ್ ಕುಮಾರ್ ಬಣಕ್ಕೆ ಮಾಜಿ ಶಾಸಕ ಮಹಿಮಾ ಪಟೇಲ್ ಅವರು ಅಧ್ಯಕ್ಷರಾಗಿದ್ದಾರೆ. ಶರದ್ ಯಾದವ್ ಅವರ ಬಣಕ್ಕೆ ಡಾ. ಎಂ.ಪಿ. ನಾಡಗೌಡ ಅಧ್ಯಕ್ಷರಾಗಿದ್ದಾರೆ.

Like Bihar JDU, Karnataka JDU also split

ಬಾಣದ ಗುರುತು ಯಾರಿಗೆ?: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಬಣದವರು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದಾರೆ. ನಾಡಗೌಡ ಅವರು ಜೆ.ಡಿ.ಯು. ಪಕ್ಷದ ಚುನಾವಣೆ ಚಿಹ್ನೆ 'ಬಾಣ'ದ ಗುರುತನ್ನು ತಮ್ಮ ಬಣಕ್ಕೆ ನೀಡಬೇಕೆಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಎನ್ ಡಿಎ ಮೈತ್ರಿಕೊಟದೊಳಗೆ ಜೆಡಿಯು ಸೇರ್ಪಡೆ

1999ರಲ್ಲಿ ಸಮತಾ ಪಕ್ಷ, ಲೋಕಶಕ್ತಿ, ಜನತಾದಳ ಮೊದಲಾದ ಪಕ್ಷಗಳು ಸೇರಿ ಜೆ.ಡಿ.ಯು. ಅಸ್ತಿತ್ವಕ್ಕೆ ಬಂದಿತ್ತು. ಸುಮಾರು 20 ರಾಜ್ಯ ಘಟಕಗಳು ಶರದ್ ಯಾದವ್ ಅವರ ಜೊತೆಗಿವೆ ಎಂದು ನಾಡಗೌಡ ಹೇಳಿದ್ದಾರೆ.

ಈಗ ಚುನಾವಣೆ ವೇಳೆ ಮತದಾರರಿಗೆ ಗೊಂದಲ ಉಂಟಾಗದಿರಲೆಂದು ಪಕ್ಷಕ್ಕೆ ಮರುನಾಮಕರಣ ಮಾಡುವ ಚಿಂತನೆ ಇದೆ ಎಂದಿದ್ದಾರೆ.

ಇನ್ನೊಂದೆಡೆ, ಇತ್ತೀಚೆಗೆ ಜೆಡಿಎಸ್ ತೊರೆದು ಜೆ.ಡಿ.ಯು ಸೇರಿ, ಅಧ್ಯಕ್ಷರಾಗಿರುವ ಮಹಿಮಾ ಪಟೇಲ್ ಅವರು ಜೆಡಿಯು ಬೆಂಬಲಿತ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Like in Bihar, Karnataka Janata Dal(United) also split. M.P. Nadagouda is four-time MLC and national vice-president of Janata Dal (U) is state president of Sharad Yadav's JDU. Former MLA Mahima Patel is president of Nitish Kumar's JDU.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ