Rain Alert: ಕರ್ನಾಟಕ ರಾಷ್ಟ್ರೀಯ ಹೆದ್ದಾರಿ ಮಳೆ ಮುನ್ಸೂಚನೆ: ಹವಾಮಾನ ವರದಿ

ಬೆಂಗಳೂರು, ಮೇ 30: ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸಾಧಾರಣ ದಿಂದ ಭಾರೀ ಮಳೆ ಆಗುತ್ತಿದೆ. ಕೆಲವೆಡೆ ಸೋನೆ ಮಳೆ ಸಹಿತ ಮಬ್ಬು ವಾತಾವರಣ ಕವಿದಿದೆ. ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರೀತ್ಯಗಳು ಮುಂದುವರಿದಿವೆ. ಬದಲಾವಣೆ ಹವಾಮಾನದ ಪರಿಣಾಮವಾಗಿ ಮುಂಗಾರು ಮಳೆ ಇನ್ನು ಕೆಲವು ದಿನಗಳ ಕಾಲ ರಾಜ್ಯದಲ್ಲಿ ಮುಂದುವರಿಯಲಿದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆ ಬರುವ ಮುನ್ಸೂಚನೆ ಇದೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆ ವಿವರ ಇಲ್ಲಿದೆ.

ಎಷ್ಟೋ ಭಾರಿ ಊರುಗಳಲ್ಲಿ, ವಾಸಿಸುವ ಪ್ರದೇಶಗಳಲ್ಲಿ ಮಳೆ ಇರುವುದಿಲ್ಲ. ವಾಹನ ಸಮೇತ ರಸ್ತೆ ಸಂಚಾರ ಆರಂಭಿಸಿದರೆ ಸಾಕು, ಗಾಳಿ ಸಹಿತ ಮಳೆ ಎದುರಾಗಿ ಬಿಡುತ್ತದೆ. ಊರಲ್ಲಿ ಮಳೆ ನಿಂತರ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಳೆ ಸುರಿಯುವನ್ನು ನೋಡಿದ್ದೀರಿ. ಈ ಸಂಬಂಧ ಹವಾಮಾನ ಇಲಾಖೆಯು ಊರು, ಜಿಲ್ಲೆಗಳ, ರಾಜ್ಯಗಳನ್ನು ಸಂಪರ್ಕಿಸುವ ಹೆದ್ದಾರಿಗಳ ಹವಾಮಾನ ಕುರಿತು ಪ್ರತ್ಯೇಕ ಮುನ್ಸೂಚನಾ ವರದಿ ನೀಡಿದೆ.

Light to Moderate Rain Alert in These National Highways Of Karnataka Weather forecast

ಸಾಧಾರಣದಿಂದ ಜೋರು ಮಳೆ ನಿರೀಕ್ಷೆ

ಕರ್ನಾಟಕದ ಅರ್ಧ ಭಾಗದಲ್ಲಿ ಅಂದರೆ, ಬೆಂಗಳೂರು-ಹಾಸನ ಹೆದ್ದಾರಿ, ಬೆಂಗಳೂರು-ಮೈಸೂರು ಹೆದ್ದಾರಿ, ಬೆಂಗಳೂರು-ದಾವಣೆಗೆರೆ, ಶಿವಮೊಗ್ಗ-ಬೆಂಗಳೂರು ಹೈವೇ ಸೇರಿದಂತೆ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೆಲವು ದಿನ ವ್ಯಾಪಕ ಮಳೆ ಮುನ್ಸೂಚನೆ ಇದೆ.

ಬೆಂಗಳೂರು, ತುಮಕೂರು, ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮೋಡ ಕವಿದ ವಾತಾರಣ ನಿರ್ಮಾಣವಾಗಿದೆ. ಇಲ್ಲೆಲ್ಲ ಹಗುರದಿಂದ ಸಾಧರಣ ಮಳೆ ಆಗಲಿದೆ. ಇನ್ನೂ ನೆಲಮಂಗಲ, ಹಾಸನ, ಸಕಲೇಶಪುರ ಮಾರ್ಗದಲ್ಲಿ, ಚಾರ್ಮಾಡಿ ಮತ್ತು ಶೀರಾಡಿ ಘಾಟ್ ಹೆದ್ದಾರಿ ಸುತ್ತಮತ್ತು ವ್ಯಾಪಕ ಮಳೆ ಬರಲಿದೆ. ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು, ವಾಹನ ಸವಾರರು ಎಚ್ಚರಿಕೆ ಮತ್ತು ಮುಂಜಾಗ್ರತೆ ವಹಿಸಬೇಕಿದೆ.

ಇನ್ನೂ ಹುಬ್ಬಳ್ಳಿಯಿಂದ ಕಾರವಾರ ಹೋಗುವ ಹೆದ್ದಾರಿ ಹಾಗೂ ಹಾಸನ-ಮಂಗಳೂರು ತೆರಳು ಹೆದ್ದಾರಿಗಳಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಇದೆ. ಕೆಲವೆಡೆ ಬಿಸಿಲಿನ ದರ್ಶನವಾದರೂ ಸಹಿತ ಉತ್ತಮ ಮಳೆ ನಿರೀಕ್ಷೆ ಇದೆ. ಕೆಲವೆಡೆ ತೀವ್ರ ಮಳೆಗೆ ಗುಡ್ಡ ಕುಸಿತದಂತಹ ಘಟನೆಗಳು ಸಂಭವಿಸಬಹುದು. ಆದ್ದರಿಂದ ವಾಹನಗಳನ್ನು ರಸ್ತೆ ಮಧ್ಯ ನಿಲ್ಲಿಸುವುದು, ಮರ ಬದಿ ನಿಲ್ಲುವುದು, ವಾಹನ ನಿಲ್ಲಿಸುವುದನ್ನು ತಪ್ಪಿಸಬೇಕಿದೆ.

ಬೃಹತ್ ಲಾರಿ, ಬಸ್, ಸರಕು ವಾಹನಗಳು ಮಾತ್ರವಲ್ಲದೇ, ಲಘು ವಾಹನಗಳಾದ ಬೈಕು, ಕಾರು, ಟಾಟಾ ಏಸ್, ತ್ರಿಚಕ್ರ ವಾಹನಗಳು ಎಚ್ಚರಿಕೆ ವಹಿಸಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಿಸುವಂತೆ 'ಒನ್ ಇಂಡಿಯಾ' ಸಲಹೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+