ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

karnataka rain: ದಕ್ಷಿಣ ಒಳನಾಡಿನ ಹಲವೆಡೆ ಸಾಧಾರಣ ಮಳೆ ಸಾಧ್ಯತೆ

|
Google Oneindia Kannada News

ರಾಜ್ಯದಲ್ಲಿ ಈ ಬಾರಿ ಮೈಕೊರೆಯುವ ಚಳಿ ಹೆಚ್ಚಿದ್ದು ಹವಮಾನ ಇಲಾಖೆ ಹಲವೆಡೆ ಸಾಧಾರಣ ಮಳೆಯಾಗುವ ಸೂಚನೆಯನ್ನು ನೀಡಿದೆ. ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಅದು ಹೇಳಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮೋಡ ಕವಿದ ವಾತಾವರಣವಿದ್ದು ಅಧಿಕ ಮಂಜಿನಿಂದಾಗಿ ಬೆಳಗಿನ ಜಾವ ಗೋಚರತೆ ಕಡಿಮೆಯಾಗುವ ಸಾಧ್ಯತೆಗಳಿವೆ. ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ ಭಾಗಶ: ಮೋಡ ಕವಿದ ವಾತಾವರಣವಿರಲಿದ್ದು ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡು ಮತ್ತು ಕರಾವಳಿಯಲ್ಲಿ ಒಣಹವೆ ಮುಂದುವರೆದಿದೆ. ಬೆಂಗಳೂರಿನ ಕೆಐಎಎಲ್​ನಲ್ಲಿ 28.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ 15.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಎಚ್‌ಎಎಲ್‌ನಲ್ಲಿ 26.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 27.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಇಂದು ಪಂಜಾಬ್, ಹರ್ಯಾಣ ಮತ್ತು ಚಂಡೀಗಢ ಮತ್ತು ಉತ್ತರ ಪ್ರದೇಶದಲ್ಲಿ ಲಘುವಾಗಿ ಮಳೆಯಾಗುವ ಸಾಧ್ಯತೆಯಿದೆ. ಲಾಹೌಲ್-ಸ್ಪಿತಿ ಮತ್ತು ಕಿನ್ನೌರ್, ಚಂಬಾ, ಕಂಗ್ರಾ, ಮಂಡಿ, ಕುಲು, ಶಿಮ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಹಿಮಪಾತವಾಗುವ ನಿರೀಕ್ಷೆ ಇದೆ. ಜನವರಿ 25ರವರೆಗೆ ಬೆಟ್ಟ ಪ್ರದೇಶಗಳಲ್ಲಿ ಲಘುವಾಗಿ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಮನಾಲಿಯಲ್ಲಿ 12 ಸೆಂ.ಮೀ, ಗೊಂಡ್ಲಾದಲ್ಲಿ 11 ಸೆಂ.ಮೀ, ಕಲ್ಪಾದಲ್ಲಿ 7 ಸೆಂ.ಮೀ, ತಿಸ್ಸಾ, ಪೂಹ್ ಹಾಗೂ ಹಂಸಾದಲ್ಲಿ ತಲಾ ಐದು ಸೆಂ.ಮೀ, ಡಾಲ್ಹೌಸಿಯಲ್ಲಿ 8 ಸೆಂ.ಮೀ ಹಿಮಪಾತವಾಗಿದೆ.

Light rain over many parts of southern interior during next 48 hours

ಇನ್ನೂ ದೆಹಲಿಯಲ್ಲಿ ಅತ್ಯಂತ ಕೆಟ್ಟ ವಾಯುಮಾಲಿನ್ಯ ದಾಖಲಾಗಿದೆ. ಸೋಮವಾರ 381ನಲ್ಲಿ ದಾಖಲಾಗಿರುವ ವಾಯು ಗುಣಮಟ್ಟ ಸೂಚ್ಯಂಕದೊಂದಿಗೆ (AQI) ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟ 'ಅತ್ಯಂತ ಕಳಪೆ ವರ್ಗದಲ್ಲಿ' ಉಳಿದಿದೆ. ದೆಹಲಿ ವಿಶ್ವವಿದ್ಯಾನಿಲಯ ಪ್ರದೇಶದಲ್ಲಿ AQI 389 ರಷ್ಟಿದ್ದರೆ, IIT ದೆಹಲಿ ಪ್ರದೇಶದಲ್ಲಿ ಇದು 382 ನಲ್ಲಿ ದಾಖಲಾಗಿದೆ. ವಿಮಾನ ನಿಲ್ದಾಣ (T3) ಪ್ರದೇಶದಲ್ಲಿ ಗಾಳಿಯ ಗುಣಮಟ್ಟ 387 ನಲ್ಲಿ ದಾಖಲಾಗಿದೆ. SAFAR ಪ್ರಕಾರ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) AQI 'ಅತ್ಯಂತ ಕಳಪೆ ವರ್ಗ'ದಲ್ಲಿ ಉಳಿದಿದೆ. ಗುರುಗ್ರಾಮ್‌ನಲ್ಲಿ ಎಕ್ಯೂ 388 ಎಂದು ದಾಖಲಾಗಿದ್ದರೆ, ನೋಯ್ಡಾ ಕೂಡ ಅದೇ ಅಂಕಿಅಂಶವನ್ನು ದಾಖಲಿಸಿದೆ.

Light rain over many parts of southern interior during next 48 hours

0 ರಿಂದ 100 ರವರೆಗಿನ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ಉತ್ತಮವೆಂದು ಪರಿಗಣಿಸಲಾಗುತ್ತದೆ, 100 ರಿಂದ 200 ರವರೆಗೆ ಮಧ್ಯಮವಾಗಿರುತ್ತದೆ, 200 ರಿಂದ 300 ರವರೆಗೆ ಅದು ಕಳಪೆಯಾಗಿರುತ್ತದೆ ಮತ್ತು 300 ರಿಂದ 400 ರವರೆಗೆ ಇದು ಅತ್ಯಂತ ಕಳಪೆ ಮತ್ತು 400 ರಿಂದ 500 ರವರೆಗೆ ತೀವ್ರ ಎಂದು ಪರಿಗಣಿಸಲಾಗುತ್ತದೆ.

English summary
Meteorological Department has said that light to moderate rain will occur in many parts of the southern hinterland in the next 48 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X