ಬೆಂಗಳೂರಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಬಿಲಾಲ್ ಗೆ ಜೀವಾವಧಿ ಶಿಕ್ಷೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 5: ಉಗ್ರ ಇಮ್ರಾನ್ ಬಿಲಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಿ, ಬೆಂಗಳೂರಿನ ಸೆಷನ್ಸ್ ಕೋರ್ಟ್ ಬುಧವಾರ ಆದೇಶ ನೀಡಿದೆ. ಜತೆಗೆ ದಂಡ ಕೂಡ ವಿಧಿಸಲಾಗಿದೆ. 2007ರಲ್ಲಿ ಬೆಂಗಳೂರು ಪೊಲೀಸರು ಅತನನ್ನು ಬಂಧಿಸಿದ್ದರು. ಎ.ಕೆ. 56 ಬಂದೂಕು, ಗ್ರೆನೇಡ್, ಸ್ಯಾಟಲೈಟ್ ಫೋನ್ ವಶಪಡಿಸಿಕೊಳ್ಳಲಾಗಿತ್ತು.

ಬೆಂಗಳೂರಿನ ವಿವಿಧೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಬಿಲಾಲ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಬೆಂಗಳೂರಿನ 56ನೇ ಸೆಷನ್ಸ್ ಕೋರ್ಟ್ ಮಂಗಳವಾರ ಬಿಲಾಲ್ ನನ್ನು ಅಪರಾಧಿ ಎಂದು ಘೋಷಿಸಿತ್ತು.[ಸರ್ಜಿಕಲ್ ಸ್ಟ್ರೈಕ್ ಬರೀ ಕಥೆ, ಸುಳ್ಳಿನ ಅಂತೆ..ಕಂತೆ: ಕಾಂಗ್ರೆಸ್ ಮುಖಂಡ]

Lifetime imprisonment for terrorist Imran Bilal

ಬುಧವಾರ ಶಿಕ್ಷೆ ಪ್ರಮಾಣ ಘೋಷಿಸಿದ ನ್ಯಾಯಾಧೀಶ ಕೊಟ್ರಯ್ಯ ಎಂ.ಹಿರೇಮಠ ಎರಡು ಪ್ರಕರಣಗಳಲ್ಲಿ ಹತ್ತು ವರ್ಷ ಜೈಲು ಶಿಕ್ಷೆ ಪ್ರಕಟಿಸಿದರು. ಉಳಿದ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದರು. ಉಗ್ರ ಇಮ್ರಾನ್ ಬಿಲಾಲ್ ಬೆಂಗಳೂರಿನ ವಿವಿಧೆಡೆ ವಿಧ್ವಂಸಕ ಕೃತ್ಯ ನಡೆಸಲು ಹುನ್ನಾರ ನಡೆಸಿದ್ದ.[ದೇಶದ ಪ್ರಮುಖ ನಗರಗಳಲ್ಲಿ ಪಾಕಿಸ್ತಾನದಿಂದ ಉಗ್ರರ ದಾಳಿ ಸಾಧ್ಯತೆ!]

2007ರ ಜನವರಿಯಲ್ಲಿ ಗೊರಗುಂಟೆ ಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿ ಖಸಗಿ ಬಸ್ ನಲ್ಲಿ ಹೋಗುತ್ತಿದ್ದ ಇಮ್ರಾನ್ ಬಿಲಾಲ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಮೂವತ್ತೆರಡು ವರ್ಷದ ಆತ ಮೂಲತಃ ಜಮ್ಮು-ಕಾಶ್ಮೀರದವನು. ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ. ಬಂಧನದ ವೇಳೆ ಮೊಬೈಲ್ ಫೋನ್ ಗಳು, ಹಲವು ಸಿಮ್ ಕಾರ್ಡ್ ಗಳು ಹಾಗೂ ಬೆಂಗಳೂರು ನಗರ ಮ್ಯಾಪ್ ಅನ್ನು ಅತನಿಂದ ವಶಪಡಿಸಿಕೊಳ್ಳಲಾಗಿತ್ತು.[ಏರ್‌ಪೋರ್ಟ್‌, ಇನ್ಫೋಸಿಸ್‌ ಸಿಡಿಸಲು'ಉಗ್ರ' ಹುನ್ನಾರ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Terrorist Imran Bilal sentenced for life time imprisonment from Bengaluru 56 session court on Wednesday. He was arrested by CCB police on 2007. He planned some explosions in Bengaluru.
Please Wait while comments are loading...