• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮುಂದುವರಿದ ಸಿ ಎಂ ಇಬ್ರಾಹಿಂ ವಾಕ್ ಲಹರಿ: ಈ ಬಾರಿ ರಾಮಮಂದಿರ, ಕರಸೇವೆ

|
   ವಿವಾದ ಬಗೆಹರಿಸುತ್ತಾರಂತೆ ಸಿ ಎಂ ಇಬ್ರಾಹಿಂ..! | Oneindia Kannada

   ವಿಜಯಪುರ, ನ 15: ತಮ್ಮ ವ್ಯಂಗ್ಯಮಿಶ್ರಿತ ವಾಗ್ದಾಳಿಗೆ ಹೆಸರಾಗಿರುವ ಕಾಂಗ್ರೆಸ್ ಮುಖಂಡ ಸಿ ಎಂ ಇಬ್ರಾಹಿಂ, ಮತ್ತೆ ಬಿಜೆಪಿ ಮತ್ತು ಬಿಜೆಪಿಯ ಅಜೆಂಡಾದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

   ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಇಬ್ರಾಹಿಂ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಯಾವ ಸಾಬ್ರೂ ವಿರೋಧಿಸುವುದಿಲ್ಲ. ಆದರೆ, ಬಿಜೆಪಿಗೆ ಅಲ್ಲಿ ರಾಮಮಂದಿರ ನಿರ್ಮಾಣವಾಗುವುದು ಬೇಕಾಗಿಲ್ಲ ಎಂದ ಇಬ್ರಾಹಿಂ ಹೇಳಿದ್ದಾರೆ.

   ಸಿದ್ದರಾಮಯ್ಯಗೆ ಜನರ ಚಿಂತೆ, ಯಡಿಯೂರಪ್ಪಗೆ ಶೋಭಾ ಚಿಂತೆ

   ರಾಮಮಂದಿರದ ವಿಚಾರ, ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ನಾವು ಸಿದ್ದ. ಸುಪ್ರೀಂಕೋರ್ಟ್ ತೀರ್ಪು ಏನೇ ಬರಲಿ, ಅದಕ್ಕೂ ನಾವು ಬದ್ದ. ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ಇಬ್ರಾಹಿಂ ಕಿವಿಮಾತನ್ನು ಹೇಳಿದ್ದಾರೆ.

   ಶಿವಾಜಿ ಜಯಂತಿಯನ್ನು ನಾವು ಮುಸ್ಲಿಮರೆಲ್ಲಾ ಸೇರಿ ಆಚರಿಸುತ್ತೇವೆ, ಆದರೆ ಟಿಪ್ಪು ಜಯಂತಿ ಆಚರಣೆಗೆ ವಿರೋಧಿಸುವುದು ತರವಲ್ಲ. ವಸುದೇವ ಕುಟುಂಬಕಂ ರೀತಿಯಲ್ಲಿ ನಾವೆಲ್ಲಾ ಅನ್ಯೋನ್ಯತೆಯಿಂದ ಬಾಳಬೇಕಾಗಿದೆ ಎಂದು ಇಬ್ರಾಹಿಂ ಆಗ್ರಹಿಸಿದ್ದಾರೆ.

   ಮೋದಿಗೆ ಬರೀ ಮುಸ್ಲಿಂ ಹೆಂಡತಿಯರದ್ದೇ ಚಿಂತೆ

   ಶಿವಾಜಿ ಜಯಂತಿ ಆಚರಣೆಯ ವಿಚಾರದಲ್ಲಿ ನಾನು ಅಂಜುಮಾನ್ ಕಮಿಟಿಗೆ ಪತ್ರ ಬರೆಯುತ್ತೇನೆ ಎಂದಿರುವ ಇಬ್ರಾಹಿಂ, ರಾಮಮಂದಿರಕ್ಕಾಗಿ ಕರಸೇವೆಗೆ ಸಿದ್ದ ಎಂದಿದ್ದಾರೆ. ಮುಂದೆ ಓದಿ..

   ಭವ್ಯ ರಾಮಮಂದಿರ ನಿರ್ಮಾಣ

   ಭವ್ಯ ರಾಮಮಂದಿರ ನಿರ್ಮಾಣ

   ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿಯವರು ಸಾರ್ವಜನಿಕರಿಂದ ಇಟ್ಟಿಗೆ ತೆಗೆದುಕೊಂಡರು, ಅದರ ಕಥೆ ಏನಾಯಿತು? ಆದರೆ, ನಾವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಬಯಸುವವರು. ಅದಕ್ಕಾಗಿ ಇಟ್ಟಿಗೆ ಕೊಡಲೂ ಸಿದ್ದರಿದ್ದೇವೆ, ಕರ ಸೇವೆ ಮಾಡಲು ಸಜ್ಜಾಗುತ್ತೇವೆ - ಸಿ ಎಂ ಇಬ್ರಾಹಿಂ.

   1859ರಿಂದಲೂ ಬಗೆಹರಿಯದ ರಾಮಜನ್ಮ ಭೂಮಿ ವಿವಾದ

   ಹಾರ ಹಾಕುವುದು, ಮೆರವಣಿಗೆ ಮಾಡುವುದು ನಮ್ಮ ಸಂಪ್ರದಾಯವಲ್ಲ

   ಹಾರ ಹಾಕುವುದು, ಮೆರವಣಿಗೆ ಮಾಡುವುದು ನಮ್ಮ ಸಂಪ್ರದಾಯವಲ್ಲ

   ಈ ಬಾರಿ ಟಿಪ್ಪು ಜಯಂತಿ ಆಚರಣೆ ಬಹಳ ನಿರಾಶೆ ತಂದಿದೆ. ಫೋಟೊ ಇಡೋದು, ಅದಕ್ಕೆ ಹಾರ ಹಾಕುವುದು, ಮೆರವಣಿಗೆ ಮಾಡುವುದು ನಮ್ಮ ಸಂಪ್ರದಾಯವಲ್ಲ. ನಾವು ನೋಡಿ, ಶಿವಾಜಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಸಿದ್ದರಿದ್ದೇವೆ. ಶೃಂಗೇರಿ, ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಸಭೆ ಸೇರುತ್ತೇವೆ - ಸಿ ಎಂ ಇಬ್ರಾಹಿಂ.

   'ಟಿಪ್ಪು' ಜಪದಲ್ಲಿ ಕಳೆದುಕೊಂಡಿದ್ದೇ ಹೆಚ್ಚು: ರಾಜಕಾರಣಿಗಳಲ್ಲಿ ಕಾಡುತ್ತಿದೆಯೇ ಭಯ?

   ಸಾಬ್ರ ಹೆಂಡತಿಯರ ಮೇಲಿದ್ದಷ್ಟು ಪ್ರೀತಿ ರಾಮ ಮಂದಿರದ ಮೇಲಿಲ್ಲ

   ಸಾಬ್ರ ಹೆಂಡತಿಯರ ಮೇಲಿದ್ದಷ್ಟು ಪ್ರೀತಿ ರಾಮ ಮಂದಿರದ ಮೇಲಿಲ್ಲ

   ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಇಬ್ರಾಹಿಂ, ನಮ್ ಪ್ರಧಾನಿ ಮೋದಿಗೆ ಸಾಬ್ರ ಹೆಂಡತಿಯರ ಮೇಲಿದ್ದಷ್ಟು ಪ್ರೀತಿ ರಾಮ ಮಂದಿರ ನಿರ್ಮಾಣ ಮಾಡುವುದರಲ್ಲಿ ಇಲ್ಲ. ರಾಮ ಮಂದಿರ ಬಿಜೆಪಿಗೆ ವೋಟ್ ಬ್ಯಾಂಕೇ ಹೊರತು, ಅದರಲ್ಲಿ ಅವರಿಗೆ ಇಚ್ಚಾಶಕ್ತಿಯಿಲ್ಲ ಎಂದು ಪರೋಕ್ಷವಾಗಿ ತ್ರಿಬಲ್ ತಲಾಖ್ ಬಗ್ಗೆ ಮೋದಿ ಸರಕಾರದ ನಿರ್ಧಾರವನ್ನು ಟೀಕಿಸಿದ್ದರು.

   ಮೋದಿ ತನ್ನ ಹೆಂಡತಿಗೆ ಜೀವನಾಂಶ ಕೊಡ್ತಾ ಇದ್ದಾರಾ

   ಮೋದಿ ತನ್ನ ಹೆಂಡತಿಗೆ ಜೀವನಾಂಶ ಕೊಡ್ತಾ ಇದ್ದಾರಾ

   ಬೇರೆಯವರ ಹೆಂಡತಿಯ ಬಗ್ಗೆ ಮಾತನಾಡುವ ಮೋದಿ ಸಾಹೇಬ್ರು, ತನ್ನ ಹೆಂಡತಿಯನ್ನು ಬಿಟ್ಟಿದ್ದಾರೆ. ಹೋಗ್ಲಿ, ಅವರಿಗೆ ಜೀವನಾಂಶ ಕೊಡ್ತಾ ಇದ್ದಾರಾ, ಅದೂ ಇಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಬಾವುಟ ಹಾರಿಸುವುದು, ಗೋವನ್ನು ಇಟ್ಟುಕೊಂಡು ರಾಜಕೀಯ ಮಾಡಿದ್ರು. ಗೋವಿನ ಮೇಲೆ ಪ್ರೀತಿ ಇದ್ದಿದ್ದರೆ, ದೇಶದಲ್ಲಿ ಹೆಚ್ಚಿನ ಕಡೆ ಅವರದ್ದೇ ಸರಕಾರವಿದೆ, ಬ್ಯಾನ್ ಮಾಡ್ಲಿ - ಸಿ ಎಂ ಇಬ್ರಾಹಿಂ.

   ಮೋದಿಗೆ ಬರೀ ಮುಸ್ಲಿಂ ಹೆಂಡತಿಯರದ್ದೇ ಚಿಂತೆ: ಮತ್ತೆ ಮಾತು ಹರಿಯಬಿಟ್ಟ ಸಿಎಂ ಇಬ್ರಾಹಿಂ

   ಸಿದ್ದರಾಮಣ್ಣಂಗೆ ರಾಜ್ಯದ ಚಿಂತೆ, ಯಡಿಯೂರಪ್ಪಂಗೆ ಶೋಭಕ್ಕನ ಚಿಂತೆ

   ಸಿದ್ದರಾಮಣ್ಣಂಗೆ ರಾಜ್ಯದ ಚಿಂತೆ, ಯಡಿಯೂರಪ್ಪಂಗೆ ಶೋಭಕ್ಕನ ಚಿಂತೆ

   ಮೊನ್ನೆ ಮೊನ್ನೆ ನಡೆದ ಉಪಚುನಾವಣೆಯಲ್ಲೂ ವಿವಾದಕಾರಿ ಹೇಳಿಕೆ ನೀಡಿದ್ದ ಇಬ್ರಾಹಿಂ, ನಮ್ ಸಿದ್ದರಾಮಣ್ಣಂಗೆ ರಾಜ್ಯದ ಚಿಂತೆ. ಆದರೆ, ಯಡಿಯೂರಪ್ಪನವರಿಗೆ ಶೋಭಕ್ಕನ ಚಿಂತೆ ಎಂದಿದ್ದರು. ವಿಕಟ ರಾಜಕಾರಣಿ ಎಂದೇ ಖ್ಯಾತರಾದ ಇಬ್ರಾಹಿಂ, ಚಕೋರಂಗೆ ಚಂದ್ರಮನ ಚಿಂತೆ, ಅಂಬುಜೆಗೆ ಬಾನುವಿನ ಚಿಂತೆ, ಸಿದ್ದರಾಮಯ್ಯಗೆ ಜನರ ಚಿಂತೆ, ಯಡಿಯೂರಪ್ಪಗೆ ಶೋಭಾ ಚಿಂತೆ' ಎಂದ ಇಬ್ರಾಹಿಂ ತಮ್ಮ ಭಾಷಣದ ಪೂರಾ ವ್ಯಂಗ್ಯದ ಮೂಲಕ ಮೋದಿ ಹಾಗೂ ರಾಜ್ಯ ಬಿಜೆಪಿಯನ್ನು ಕುಟುಕಿದ್ದರು.

   English summary
   Let Ram Mandir built in Ayodhya itself, we are ready to do the Karseva,Congress leader CM Ibrahim statement in Vijayapura. While talking to the media Ibrahim said, we are ready to do the Shivaji Jayanthi grandly.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X