ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Winter Session: ಡಿ. 19 ರಿಂದ 30ರ ವರೆಗೆ ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ

|
Google Oneindia Kannada News

ಬೆಂಗಳೂರು,ನವೆಂಬರ್ 17: ವಿಧಾನ ಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಡಿ.19 ರಿಂದ 30 ರ ವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಿರ್ಮಾನಿಸಲಾಗಿದೆ.

ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವನ್ನ ತೆಗೆದುಕೊಳ್ಳಲಾಗಿದೆ. ಸಚಿವ ಡಾ.ಕೆ. ಸುಧಾಕರ್ ಸುದ್ದಿಗೋಷ್ಠಿ ನಡೆಸುವ ಮೂಲಕ ಬೆಳಗಾವಿಯಲ್ಲಿ ಒಟ್ಟು ಹತ್ತು ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ಕಲಾಪವನ್ನು ನಡೆಸಲು ಸಂಪುಟ ನಿರ್ಧರಿಸಲಾಗಿದೆ ಎಂದರು.

ಗುಜರಾತ್ ಚುನಾವಣೆ 2022: ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಅಮಿತ್ ಶಾ ಪ್ರತಿಕ್ರಿಯೆ ಗುಜರಾತ್ ಚುನಾವಣೆ 2022: ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಅಮಿತ್ ಶಾ ಪ್ರತಿಕ್ರಿಯೆ

ಇನ್ನೂ ಪ್ರತಿ ವರ್ಷವೂ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ನಡೆಯುವ ಸಂದರ್ಭದಲ್ಲೂ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿ ಹಾಗೂ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಮೂಲಕ ಅಲ್ಲಿನ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಪರಿಹಾರವನ್ನ ನೀಡಬೇಕು ಎಂಬುದು ಕೇವಲ ಹೇಳಿಕೆಗೆ ಮಾತ್ರ ಸಿಮೀತವಾಗಿದೆ ಎಂಬುದು ಉತ್ತರ ಕರ್ನಾಟಕ ಭಾಗದ ಜನರ ಬೇಸರದ ಮಾತಾಗಿದೆ. ಕಳೆದ ವರ್ಷದ ಅಧಿವೇಶನದಲ್ಲೂ ಮೊದಲ ವಾರದ ಅಧಿವೇಶನ ಕಲಾಪದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿ ಹಾಗೂ ಸಮಸ್ಯೆಗಳ ಬಗ್ಗೆ ಪ್ರಸ್ತಾಪವೇ ಆಗಿರ್ಲಿಲ್ಲ,

Legislature session in Belgaum from December 19 to 30; Decision in cabinet meeting

ಇನ್ನೂ ಕಳೆದ ಬಾರಿ ನಡೆದ ಅಧಿವೇಶನದಲ್ಲಿ ಬಿಜೆಪಿಯ ಶಾಸಕರು, ಸಚಿವರ ವಿರುದ್ಧ ಅಕ್ರಮ ಭೂಕಬಳಿಕೆ ಆರೋಪ, ಕಾಂಗ್ರೆಸ್ ನಾಯಕ ಕೆ ಆರ್ ರಮೇಶ್ ಕುಮಾರ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಕುರಿತಾಗಿ ನೀಡಿದ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯನ ನಡುವೆ ವಾಗ್ಯುದ್ಧ, ಚರ್ಚೆಗಳಲ್ಲಿಯೇ ಸದನ ಮುಗಿದು ಹೋಗಿದ್ದು, ಅಲ್ಲದೇ ಪ್ರತಿಪಕ್ಷ ನಾಯಕರು ಬೆಳೆ ನಷ್ಟ, ಮಳೆಯಿಂದಾಗಿ ಆಸ್ತಿಪಾಸ್ತಿ ಹಾನಿ, ಪ್ರವಾಹ ಮತ್ತು ಸರ್ಕಾರದ ಪರಿಹಾರ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ಸರ್ಕಾರದ ಕಡೆಯಿಂದ ಇದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಕ್ಕಿರ್ಲಿಲ್ಲ.

ಅದಲ್ಲದೇ ಸರ್ಕಾರ ಮತಾಂತರ ನಿಷೇಧ ಕರಡು ಕಾಯ್ದೆ ತರುವ ನಿಟ್ಟಿನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳು ಎರಡೂ ಸದನಗಳಲ್ಲಿ ತಡೆಯೊಡ್ಡುವ ವಿಚಾರವಾಗಿ ಸಾಕಷ್ಟು ಗದ್ದಲ ಸದನದಲ್ಲಿ ನಡೆದಿದು ಸೂಕ್ತ ರೀತಿಯಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳು ಚರ್ಚೆಗೂ ಬರದೇ ಅಧಿವೇಶನವೇ ಮುಗಿದು ಹೋಗಿತ್ತು. ಇನ್ನೂ ಈ ಬಾರಿಯ ಚಳಿಗಾಲದ ಅಧಿವೇಶನಕ್ಕೆ ಡಿಸೆಂಬರ್ 19 ರಿಂದ 30 ರ ವರೆಗೂ ಒಟ್ಟು 10 ದಿನಗಳ ಕಾಲ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದೆ.

Legislature session in Belgaum from December 19 to 30; Decision in cabinet meeting

ಇನ್ನು ಇದು ಚುನಾವಣಾ ವರ್ಷವಾಗಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳಿಗೂ ಉತ್ತರ ಕರ್ನಾಟಕ ಭಾಗ ಅತ್ಯಂತ ಪ್ರಮುಖವಾಗಿದೆ. 2023 ರ ವಿಧಾನ ಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಸದನದಲ್ಲಿ ಸಮರ ಸಾರುವ ಸಾದ್ಯತೆಯೇ ಹೆಚ್ಚಾಗಿದೆ. ಇನ್ನೂ ಈ ಬಾರಿ ಬಿಟ್ ಕಾಯಿನ್ ಪ್ರಕರಣ, ಮತದಾರರ ಡೇಟಾ ಅಕ್ರಮ, ಟಿಪ್ಪು ಪ್ರತಿಮೆ ವಿವಾದ ಹಾಗೂ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಡೆದ ಅಕ್ರಮದ ಕುರಿತು ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ ವಿಚಾರಗಳು ಈ ಬಾರಿಯಾ ಅಧಿವೇಶನದಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಟ್ನಾಲಿ 10 ದಿನಗಳ ಕಾಲ ನಡೆಯುವ ಚಳಿಗಾಲದ ಅಧಿವೇಶನ ಎಷ್ಟರ ಮಟ್ಟಿಗೆ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆಯಾಗಬಹುದು ಎಂಬದು ಈ ಭಾಗದ ಜನರ ಪ್ರಶ್ನೆಯಾಗಿದೆ.

English summary
Legislature session in Belgaum from December 19 to 30; Decision in cabinet meeting,The date has been fixed for the winter legislative session,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X