ಪರಿಷತ್ ಫೈಟ್ : ಉಡುಪಿಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಉಡುಪಿ, ಡಿಸೆಂಬರ್ 07 : ವಿಧಾನ ಪರಿಷತ್‌ ಚುನಾವಣೆಗೆದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ. ಆದರೆ, ಕಾಂಗ್ರೆಸ್‌ ನಾಯಕರಾದ ಜಯಪ್ರಕಾಶ್‌ ಹೆಗ್ಡೆ ಮತ್ತು ಭುಜಂಗ ಶೆಟ್ಟಿಯವರು ಸೋಮವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಟಿಕೆಟ್ ಹಂಚಿಕೆ ನಂತರ ಎದ್ದಿರುವ ಅಸಮಾಧಾನ ಕ್ಷೇತ್ರದಲ್ಲಿ ಇನ್ನೂ ಶಮನವಾಗಿಲ್ಲ. ಅಭ್ಯರ್ಥಿ ಬದಲಾಗದೇ ಯಾವುದೇ ಕಾರಣಕ್ಕೆ ನಮ್ಮ ನಾಮಪತ್ರ ವಾಪಾಸ್ ಪಡೆಯುವುದಿಲ್ಲ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳಾದ ಜಯಪ್ರಕಾಶ್ ಹೆಗ್ಡೆ ಹಾಗೂ ಭುಜಂಗ ಶೆಟ್ಟಿ ಅವರು ಪಟ್ಟು ಹಿಡಿದು ಕುಳಿತಿದ್ದಾರೆ. [ಪಕ್ಷೇತರರಾಗಿ ಜಯಪ್ರಕಾಶ್ ಹೆಗ್ಡೆ ಸ್ಪರ್ಧೆ]

siddaramaiah

ಸೋಮವಾರ ಮಧ್ಯಾಹ್ನ ಬ್ರಹ್ಮಾವರದಿಂದ ಬೃಹತ್ ಕಾರ್ಯಕರ್ತರ ಜಾಥಾ ಮೂಲಕ ಮಂಗಳೂರಿಗೆ ತೆರಳಿ ಉಭಯ ನಾಯಕರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು ಎಂದು ಉಭಯ ನಾಯಕರು ಒತ್ತಾಯಿಸಿದ್ದಾರೆ. [ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ]

ಅಭ್ಯರ್ಥಿಯನ್ನು ಬದಲಾವಣೆ ಮಾಡಲು ಇನ್ನೂ ಅವಕಾಶ ಇರುವುದರಿಂದ ಕಾದು ನೋಡುವ ತಂತ್ರಕ್ಕೆ ಜಯಪ್ರಕಾಶ್ ಹೆಗ್ಡೆಯವರು ಮೊರೆ ಹೋಗಿದ್ದಾರೆ. ಸ್ಥಳೀಯ ಆಡಳಿತದ ಪ್ರತಿನಿಧಿಗಳ ಅಪಾರ ಬೆಂಬಲಗಳಿಸಿರುವ ಹೆಗ್ಡೆಯವರು ನಾಮಪತ್ರ ವಾಪಸ್ ಪಡೆಯೋಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಉಡುಪಿಯಲ್ಲಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆಯವರು 'ಪಕ್ಷದಲ್ಲಿ ನಿಷ್ಕ್ರೀಯವಾಗಿರುವ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಹೈಕಮಾಂಡ್ ಟಿಕೆಟ್ ನೀಡುವ ಮೂಲಕ ಪಕ್ಷದ ನಿಷ್ಟಾವಂತರಿಗೆ ವಂಚನೆ ಮಾಡಿದೆ' ಎಂದು ಆರೋಪಿಸಿದ್ದಾರೆ.

ಭುಜಂಗಶೆಟ್ಟಿ ಅವರು, 'ಕಾಂಗ್ರೆಸ್‌ನಲ್ಲಿ ಯಾರೂ ಅಭ್ಯರ್ಥಿಗಳೇ ಇಲ್ಲವೇ ಎಂದು ಪ್ರಶ್ನಿಸಿದ್ದು, ತನಗೆ 16 ವರ್ಷ ಬರೀ ಭರವಸೆ ಕೊಟ್ಟು ಹೈಕಮಾಂಡ್ ಹಾಗೂ ಕಾಂಗ್ರೆಸ್ ನಾಯಕರು ವಂಚಿಸಿದ್ದಾರೆ' ಎಂದು ದೂರಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
K. Jayaprakash Hegde and B. Bhujanga Shetty filed their nomination for legislative council election from Udupi and Dakshina Kannada local authorities constituency on Monday, December 7. Congress announced Prathap Chandra Shetty name for constituency.
Please Wait while comments are loading...