ಪರಿಷತ್ ಚುನಾವಣೆ : ಏಳನೇ ಬಾರಿ ಅಖಾಡಕ್ಕಿಳಿದ ಹೊರಟ್ಟಿ

Posted By:
Subscribe to Oneindia Kannada

ಬೆಂಗಳೂರು, ಮೇ 17 : ಮಾಜಿ ಸಚಿವ ಮತ್ತು ಹಿರಿಯ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರಿಗೆ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಪುನಃ ಟಿಕೆಟ್ ಸಿಕ್ಕಿದೆ. ಈಗಾಗಲೇ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ 6 ಬಾರಿ ಗೆಲುವು ಸಾಧಿಸಿರುವ ಅವರು 7ನೇ ಬಾರಿಗೆ ಸ್ಪರ್ಧಿಸಲು ಟಿಕೆಟ್ ಪಡೆದಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಸೋಮವಾರ ಬೆಂಗಳೂರಿನಲ್ಲಿ ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬಸವರಾಜ ಹೊರಟ್ಟಿ ಅವರಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. [ಪರಿಷತ್ ಚುನಾವಣೆ : ಹೊರಟ್ಟಿ ಸೋಲು ಖಚಿತ]

basavaraj horatti

4 ಸ್ಥಾನಗಳಿಗೆ ಚುನಾವಣೆ : ದಕ್ಷಿಣ ಪದವೀಧರ, ಪಶ್ಚಿಮ ಶಿಕ್ಷಕ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಲ್ವರು ವಿಧಾನಪರಿಷತ್ ಸದಸ್ಯರ ಅವಧಿ ಜುಲೈ 4ಕ್ಕೆ ಅಂತ್ಯಗೊಳ್ಳಲಿದೆ, ಅವರಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜೂನ್ 9ರಂದು ಮತದಾನ ನಡೆಯಲಿದ್ದು, ಜೂನ್ 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. [4 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆ ಘೋಷಣೆ]

ಚೆಲುವರಾಯಸ್ವಾಮಿಗೆ ಹಿನ್ನಡೆ : ವಿಧಾನಪರಿಷತ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಅವರಿಗೆ ಹಿನ್ನಡೆ ಉಂಟಾಗಿದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಚೆಲುವರಾಯಸ್ವಾಮಿ ಅವರ ಬೆಂಬಲಿಗರಾದ ವಿ.ಕೆ.ಜಗದೀಶ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಕೆ.ಟಿ.ಶ್ರೀಕಂಠೇಗೌಡರಿಗೆ ಟಿಕೆಟ್ ನೀಡಲಾಗಿದೆ. [ವಿಧಾನಪರಿಷತ್ ಚುನಾವಣೆಗೆ ಪ್ರೊ.ಭಗವಾನ್ ಸ್ಪರ್ಧೆ]

ಅಭ್ಯರ್ಥಿಗಳ ಪಟ್ಟಿ

* ಪವಾಯುವ್ಯ ಶಿಕ್ಷಕರ ಕ್ಷೇತ್ರ - ಶಿವಲಿಂಗಪ್ಪ ಶಿವರುದ್ರಪ್ಪ ಅಂಗಡಿ
* ವಾಯುವ್ಯ ಪದವೀಧರ ಕ್ಷೇತ್ರ - ಸಾತಗೌಡ ಮಲ್ಲನಗೌಡ ಪಾಟೀಲ್
* ದಕ್ಷಿಣ ಶಿಕ್ಷಕರ ಕ್ಷೇತ್ರ - ಬಸವರಾಜ ಹೊರಟ್ಟಿ
* ದಕ್ಷಿಣ ಪದವೀಧರ ಕ್ಷೇತ್ರ - ಕೆ.ಟಿ.ಶ್ರೀಕಂಠೇಗೌಡ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
JD(S)National President H.D.Deve Gowda announced the list of party candidates for the Legislative Council elections from graduate's and teacher's constituencies. Senior party leader Basavaraj Horatti will be fighting for a record seventh consecutive term in election form West Teacher's constituency.
Please Wait while comments are loading...