ಒಟ್ಟೊಟ್ಟಿಗೆ 4 ರಾಜಯೋಗದಿಂದ ತೆರೆಯುವುದು ಐದು ರಾಶಿಯವರ ಭಾಗ್ಯದ ಬಾಗಿಲು, ಹಣಕಾಸಿನ ಸಮಸ್ಯೆಗೆ ಸಿಗುವುದು ಪರಿಹಾರ
ಇಂದು ಅಂದರೆ ಮೇ 13ರಂದು ಅಪರ ಏಕಾದಶಿ. ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಇದನ್ನು ಆಚರಿಸಲಾಗುತ್ತದೆ. ಅಪರ ಏಕಾದಶಿಯಂದು ಮಾಡುವ ಉಪವಾಸದಿಂದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಗ್ರಹಗಳು ಇಂದು ರಾಜಯೋಗವನ್ನು ರೂಪಿಸುತ್ತಿವೆ.
5 ಅದೃಷ್ಟ ರಾಶಿಗಳು :
ಇಂದು, ಏಕಾದಶಿಯಂದು, ಗ್ರಹಗಳ ಚಲನೆಗಳು ವಿಶೇಷ ಮಹತ್ಚ ಪಡೆದಿವೆ. ಮಂಗಳನು ತನ್ನದೇ ಆದ ರಾಶಿಯಲ್ಲಿ ಕುಳಿತು ರುಚಕ್ ರಾಜಯೋಗವನ್ನು ರೂಪಿಸುತ್ತಿದ್ದಾನೆ. ಇದಲ್ಲದೆ, ಸೂರ್ಯ ಮತ್ತು ಬುಧ ಕೂಡ ಮೇಷ ರಾಶಿಯಲ್ಲಿರುವ ಪರಿಣಾಮ ಸೂರ್ಯ, ಮಂಗಳ ಮತ್ತು ಬುಧ ಒಟ್ಟಾಗಿ ತ್ರಿಗ್ರಹಿ ಯೋಗವನ್ನು ರೂಪಿಸುತ್ತವೆ. ಸೂರ್ಯ ಮತ್ತು ಬುಧ ಒಟ್ಟಾಗಿ ಬುಧಾದಿತ್ಯ ರಾಜಯೋಗವನ್ನು ನಿರ್ಮಾಣವಾಗುತ್ತಿದೆ. ಇನ್ನು ಶುಕ್ರನು ತನ್ನದೇ ಆದ ರಾಶಿ ಅಂದರೆ ವೃಷಭ ರಾಶಿಯಲ್ಲಿ ಕುಳಿತು ಮಾಲವ್ಯ ರಾಜಯೋಗವನ್ನು ರೂಪಿಸುತ್ತಾನೆ. ಇದರ ಜೊತೆಗೆ ಆಯುಷ್ಮಾನ್ ಯೋಗವು ಕೂಡಾ ರೂಪುಗೊಳ್ಳುತ್ತಿದೆ. ಈ ಎಲ್ಲಾ ರಾಜಯೋಗಗಳು 5 ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಲಿದೆ.

ವೃಷಭ ರಾಶಿ: ವೃತ್ತಿ ಜೀವನದಲ್ಲಿ ಪ್ರಗತಿ ಕಂಡುಬರಲಿದೆ. ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಕೆಲಸದ ಜಾಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಉನ್ನತ ಸ್ಥಾನಮಾನದ ಜೊತೆಗೆ ಆದಾಯ ಕೂಡಾ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ಎಲ್ಲವೂ ನಿಮ್ಮ ಮಾತೊನ ಪ್ರಕಾರವೇ ನಡೆಯುವುದು. ಅವಿವಾಹಿತರಿಗೆ ಮದುವೆ ಪ್ರಸ್ತಾಪ ಕೂಡಿ ಬರಬಹುದು.
ಮಿಥುನ ರಾಶಿ: ಈ ರಾಶಿಯ ಉದ್ಯಮಿಗಳು ವಿಶೇಷ ಲಾಭವನ್ನು ಪಡೆಯುವರು. ಬಾಕಿ ಇರುವ ಹಣವನ್ನು ಮರಳಿ ಬರುವುದು. ನೀವು ಯಾವ ರೀತಿ ಮಾತುಕತೆ ನಡೆಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಯಶಸ್ಸು ನಿರ್ಧಾರವಾಗುವುದು. ಹಣಕಾಸಿನ ಒತ್ತಡ ನಿವಾರಣೆಯಾಗುವುದು. ವ್ಯಾಪಾರ ವ್ಯವಾಹಾರ ವಿಶೇಷ ರೀತಿಯಲ್ಲಿ ಅಭಿವೃದ್ಧಿಯಾಗುವುದು.
ಕನ್ಯಾ ರಾಶಿ: ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ. ಅದರಲ್ಲಿಯೂ ಈ ದಿನ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರ ನಿಮಗೆ ಸಂತೋಷ ನೀಡುವುದು. ಅಲ್ಲದೆ, ವ್ಯವಹಾರದಲ್ಲಿ ಗಮನಾರ್ಹ ಲಾಭವಾಗುವುದು. ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಬೇರೆ ಬೇರೆ ಮೂಲಗಳಿಂದ ಹಣ ಹರಿದು ಬರುವುದು. ನೀವು ಮಾಡುವ ಕೆಲಸಕ್ಕೆ ಸಂಗಾತಿಯ ಬೆಂಬಲ ಸಿಗುವುದು.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುವುದು. ನಿಮದಮ ಮನಸ್ಸಿನ ಮಾತುಗಳನ್ನು ಸ್ಪಷ್ಟವಾಗಿ ಹೇಳುವುದು ನಿಮಗೆ ಸಾಧ್ಯವಾಗುತ್ತದೆ. ವೃತ್ತಿಜೀವನದಲ್ಲಿ ಪ್ರಗತಿಯಾಗುವ ಸಾಧ್ಯತೆಯಿದೆ. ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಸಿಗುವುದು. ಅಪೂರ್ಣ ಕೆಲಸಗಳು ಪೂರ್ಣಗೊಳ್ಳುತ್ತವೆ.
ಮಕರ ರಾಶಿ: ಹಣದ ಹರಿವು ಹೆಚ್ಚಾಗುವುದು. ಹಣ ಸಂಪಾದನೆಗೆ ಹೊಸ ಮಾರ್ಗಗಳು ಸೃಷ್ಟಿಯಾಗುವುದು. ಆರ್ಥಿಕ ವಿಷಯಗಳಲ್ಲಿ ಈ ರಾಶಿಯವರಿಗೆ ಅತ್ಯಂತ ಶುಭ ದಿನವಾಗಿರುವುದು. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುವುದು. ಈ ಸಮಯ ಕೆಲಸ ಮತ್ತು ವ್ಯವಹಾರ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಮನೆಯಲ್ಲಿ ಸಂತೋಷದ ವಾತಾವರಣವಿರುವುದು. ಮನೆ ಮನದಲ್ಲಿ ಶಾಂತಿ ನೆಲೆಯಾಗುವುದು.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications