ಪರಿಷತ್ ಚುನಾವಣೆ : ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 10 : ವಿಧಾನಪರಿಷತ್ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ 25 ಕ್ಷೇತ್ರದಲ್ಲೂ ಸ್ಪರ್ಧಿಸುತ್ತೇವೆ ಎಂದು ಜೆಡಿಎಸ್ ನಾಯಕರು ಹೇಳಿದ್ದರು. ಅಂತಿಮವಾಗಿ 19 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಬಂಡಾಯದ ಬಿಸಿಯೂ ತಟ್ಟಿದೆ.

ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಡಿಸೆಂಬರ್ 9 ಕೊನೆಯ ದಿನವಾಗಿತ್ತು. ಜೆಡಿಎಸ್‌ ಪಕ್ಷದ 19 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಚುನಾವಣಾ ಕಣದಲ್ಲಿದ್ದಾರೆ. ['ಪರಿಷತ್ ಚುನಾವಣೆ ಸೋಲಿನ ಹೊಣೆ ಹೊರುವುದಿಲ್ಲ']

jds

ಮಂಡ್ಯ ಕ್ಷೇತ್ರದಲ್ಲಿ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಅವರು ಸೂಚಿಸಿದ ಬಿ.ರಾಮಕೃಷ್ಣ ಅವರಿಗೆ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನವೆದ್ದಿದೆ. ಚೆಲುವರಾಯಸ್ವಾಮಿ ಬೆಂಬಲ ಪಡೆದ ರಾಮಕೃಷ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದರಿಂದಾಗಿ ಬಂಡಾಯದ ಬಿಸಿ ತಟ್ಟಿದೆ. [ಕೊಡಗು : ಜೆಡಿಎಸ್ ಅಭ್ಯರ್ಥಿ ಬಗ್ಗೆ ಗೊಂದಲ]

ಹಾಲಿ ಸದಸ್ಯರಾದ ತುಮಕೂರಿನ ಹುಲಿ ನಾಯ್ಕರ್ ಮತ್ತು ಮಂಡ್ಯದ ರಾಮಕೃಷ್ಣ ಅವರಿಗೆ ಟಿಕೆಟ್ ಕೈ ತಪ್ಪಿದೆ. ಕೊಡಗು ಜಿಲ್ಲೆಯಲ್ಲಿ ಮೂರು ಬಾರಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿ, ಅಂತಿಮವಾಗಿ ಸಂಕೇತ್ ಪೂವಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. [ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]


19 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

* ಶಿವಮೊಗ್ಗ - ಎಚ್‌.ಎನ್.ನಿರಂಜನ್
* ಕೊಡಗು - ಸಂಕೇತ್ ಪೂವಯ್ಯ
* ಉತ್ತರ ಕನ್ನಡ - ರವಿಕುಮಾರ್
* ಕೋಲಾರ - ಸಿ.ಆರ್.ಮನೋಹರ
* ಮೈಸೂರು - ಸಂದೇಶ ನಾಗರಾಜ್
* ತುಮಕೂರು -ಕಾಂತರಾಜ್
* ಹಾಸನ - ಪಟೇಲ್ ಶಿವರಾಂ
* ಮಂಡ್ಯ - ಅಪ್ಪಾಜಿ ಗೌಡ
* ಕಲಬುರಗಿ - ದೇವೇಗೌಡ ತೆಲ್ಲೂರ್
* ಚಿತ್ರದುರ್ಗ - ಎಲ್.ಸೋಮಣ್ಣ
* ಮಂಗಳೂರು - ಪ್ರವೀಣಚಂದ್ರ ಜೈನ್
* ಉಡುಪಿ - ಪ್ರಕಾಶ ಶೆಟ್ಟಿ
* ಬೆಂಗಳೂರು ಗ್ರಾಮಾಂತರ - ಇ.ಕೃಷ್ಣಪ್ಪ
* ಚಿಕ್ಕಮಗಳೂರು - ರಂಜನ್ ಅಜಿತ್‌ಕುಮಾರ್
* ಬೀದರ್ - ಎಚ್.ಪಿ.ಸುಬ್ಬಾರೆಡ್ಡಿ
* ಬಳ್ಳಾರಿ - ಪ್ರದೀಪ್ ರೆಡ್ಡಿ
* ಬೆಳಗಾವಿ - ಡಿ.ಬಿ.ನಾಯಕ್
* ವಿಜಯಪುರ - ಕಾಂತಪ್ಪ ಎಸ್ ಹಿಂತೆಕೇರಿ
* ಧಾರವಾಡ - ಬಿ.ಎಸ್.ವಾಗೀಶ್ ಕುಮಾರ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Janata Dal (Secular) 19 candidates filed nomination papers for the Legislative council election scheduled for December 27, 2015. Election will be held for 25 seats.
Please Wait while comments are loading...