ಶಕ್ತಿ ಯೋಜನೆ ವಿರುದ್ಧ ಹೈಕೋರ್ಟ್ ಗೆ PIL ಸಲ್ಲಿಸಿದ ಕಾನೂನು ವಿದ್ಯಾರ್ಥಿಗಳು, ಕಾರಣ?
ಬೆಂಗಳೂರು, ಜುಲೈ 31: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ. ಆದರೆ ಈ ಯೋಜನೆ ವಿರುದ್ಧವಾಗಿ ಇದೀಗ ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾಂಗ್ರೆಸ್ ಒಂದೊಂದೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುತ್ತಿವೆ. ಕಳೆದ ಜೂನ್ 11ರಂದು ಶಕ್ತಿಯೋಜನೆ ಜಾರಿ ಆಯಿತು ಅಂದಿನಿಂದ ಈ ವರೆಗೆ ಕೋಟ್ಯಾಂತರ ಮಹಿಳೆಯರು ನಿತ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸುತ್ತಿದ್ದಾರೆ. ಆದರೆ ಬಸ್‌ಗಾಗಿ ನೂಕು ನುಗ್ಗಲು, ಬಸ್‌ನಿಂದ ವಿದ್ಯಾರ್ಥಿಗಳು ಬಿದ್ದ್ ಘಟನೆತಗಳು ನಡೆದಿವೆ. ಇತರ ಪ್ರಯಾಣಿಕರಿಗೆ ಬಸ್ ಹತ್ತಲು ಸೂಕ್ತ ವ್ಯವಸ್ಥೆ ಮಾಡಲಾಗಿಲ್ಲ. ಈ ಸಂಬಂಧ ಕ್ರಮ ವಹಿಸುವಂತೆ ಕೋರಿ ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಶಕ್ತಿ ಯೋಜನೆಯ ಲಾಭ ಜೊತೆಗೆ ಜನರಿ ತೆರಿಗೆ ಹಣದ ನಷ್ಟವು ಅಷ್ಟೇ ಇದೆ. ಮಹಿಳೆಯರ ಉಚಿತ ಬಸ್ ಪ್ರಯಾಣದಿಂದಾಗಿ ವಿದ್ಯಾರ್ಥಿಗಳು, ವಯೋವೃದ್ಧರೂ ಸಮಸ್ಯೆ ಅನುಭವಿಸುವಂತಾಗಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ಪರಿಹಾರ ಕೈಗೊಳ್ಳಬೇಕು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆ
ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ತಾಮುಂದು, ನಾಮುಂದೆ ಬಸ್ ಏರುತ್ತಿದ್ದಾರೆ. ಇದರಿಂದ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. ಸಾರಿಗೆ ಬಸ್‌ಗಳಲ್ಲಿ ಸೀಟಿಗಾಗಿ ಗಲಾಟೆಗಳು ಸಹ ನಡೆದಿವೆ. ಇದರಿಂದ ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು, ವಿಶೇಷ ಚೇತನರು, ಮಕ್ಕಳು ಬಸ್ ಹತ್ತಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

ಶಾಲಾ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳು ತಲುಪಲು ಆಗುತ್ತಿಲ್ಲ. ಇನ್ನೂ ಕೆಲವೆಡೆ ತುಂಬಿದ ಬಸ್ ಹತ್ತಲಾಗದೆ ವಿದ್ಯಾರ್ಥಿಗಳು ಬಸ್ ನಿಂದ ಬಿದ್ದ ಘಟನೆ ನಡೆದಿವೆ. ಯೋಜನೆಗೆ ಒಂದೇ ವಾರದಲ್ಲಿ ಜನರ ತೆರಿಗೆ ಹಣದಿಂದ 100 ಕೋಟಿ ರೂ.ಹಣ ವೆಚ್ಚ ಭರಿಸಲಾಗಿದೆ ಎಂದು ಸರ್ಕಾರವೇ ತಿಳಿಸಿದೆ. ಅಂದರೆ ವಾರ್ಷಿಕವಾಗಿ ಇದೊಂದು ಯೋಜನೆಗೆ ಹಣವನ್ನು ಬಳಸಲಾಗಿದೆ. ಅಂದರೆ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಹಣ ಬೇಕಾಗಬಹುದು.
ಟಿಕೆಟ್ ಖರೀದಿಸಿ ಬಸ್‌ನಲ್ಲಿ ಪ್ರಯಾಣ ಮಾಡುವ ಪುರುಷರಿಗೆ ಎಲ್ಲ ಬಸ್‌ಗಳಲ್ಲಿ ಶೇಕಡಾ 50ರಷ್ಟು ಆಸನ ಮೀಡಲಿಡಬೇಕು.ಸಾರಿಗೆ ಬಸ್‌ನಲ್ಲಿ ಮಕ್ಕಳು, ವೃದ್ಧರು ಬಸ್ ಹತ್ತಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಕೆಯಾದ ಪಿಐಎಸ್‌ನಲ್ಲಿ ಕೋರಲಾಗಿದೆ.












Click it and Unblock the Notifications