ಅಂಬರೀಶ್ ಮತ್ತೆ ಸಂಪುಟಕ್ಕೆ, ರಮ್ಯಾ ಮತ್ತೆ ಸಂಸತ್ ಸ್ಥಾನಕ್ಕೆ?

Posted By:
Subscribe to Oneindia Kannada

ಬೆಂಗಳೂರು, ಜೂ. 26: 'ರೆಬೆಲ್ ಸ್ಟಾರ್' ಅಂಬರೀಶ್ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ. ರಮ್ಯಾ ಅವರು ಸಂಸತ್ ಸದಸ್ಯ್ಯೆಯಾಗಿ ಉತ್ತಮ ಕಾರ್ಯನಿರ್ವಹಿಸಬಹುದು, ಕ್ಯಾಬಿನೆಟ್ ಗೆ ಅವರ ಸೇರ್ಪಡೆ ಕಷ್ಟ ಎಂದ ಡಿಕೆ ಶಿವಕುಮಾರ್, ಬಿಜೆಪಿ ಕಾರ್ಯಕರ್ತರ ಸಮಾವೇಶ ಇವೇ ಮುಂತಾದ ರಾಜಕೀಯ ಬೆಳವಣಿಗೆಗಳು ಭಾನುವಾರದ ಸಂಜೆ ತನಕ ಕಂಡು ಬಂದಿದೆ. ಕ್ವಿಕ್ ರೌಂಡಪ್ ಇಲ್ಲಿದೆ

ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಬೇಸರಗೊಂಡು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿರುವ ಮಾಜಿ ವಸತಿ ಸಚಿವ ಅಂಬರೀಶ್ ಅವರನ್ನು ಮರಳಿ ಸಂಪುಟಕ್ಕೆ ಸೇರ್ಪಡೆಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿದೆ.[ಕುರುಬರ ಸಮಾವೇಶದಲ್ಲಿ ಸಿಎಂ ಸಿದ್ದುಗೆ 'ಕಿಸ್ ಭಾಗ್ಯ']

ಅಂಬರೀಶ್ ಅವರ ಜತೆಗೆ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರನ್ನು ಸಂಪುಟಕ್ಕೆ ಸೇರಿಸಲು ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಆದರೆ, 34 ಸ್ಥಾನಗಳ ಪೈಕಿ ಒಂದು ಸ್ಥಾನ ಮಾತ್ರ ಬಾಕಿ ಇದೆ. ಇಬ್ಬರನ್ನು ಸೇರಿಸಿಕೊಳ್ಳಬೇಕಾದರೆ, ಮತ್ತೊಬ್ಬ ಹಾಲಿ ಸಚಿವರ ರಾಜೀನಾಮೆ ಅನಿವಾರ್ಯವಾಗುತ್ತದೆ.

Latest Political development in Karnataka on Sunday 26 June

ರಮ್ಯಾ ಎಂಎಲ್ಸಿ ಆಗುತ್ತಿಲ್ಲ: ವಿಧಾನ ಪರಿಷತ್‌ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರ ಹೆಸರು ಪ್ರಸ್ತಾವನೆಯಾಗಿಲ್ಲ. ಅವರನ್ನು ಸಂಸತ್ತಿನಲ್ಲಿ ನೋಡಲು ಇಚ್ಛಿಸುತ್ತೇವೆ. ಅವರನ್ನು ಎಂಎಲ್ಸಿಯಾಗಿಸಿ, ಕ್ಯಾಬಿನೆಟ್ ಗೆ ಸೇರಿಸಿಕೊಳ್ಳಲಾಗುವುದು ಎಂಬ ಸುದ್ದಿ ಹಬ್ಬಿದ್ದು, ಇದರಲ್ಲಿ ಹುರುಳಿಲ್ಲ. ಆದರೆ, ಶೀಘ್ರವೇ ಒಕ್ಕಲಿಗ ಕೋಟಾ ಶೀಘ್ರ ಭರ್ತಿಯಾಗಲಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. [ಆಂತರಿಕ ಕಚ್ಚಾಟದಿಂದ ಸಿದ್ದರಾಮಯ್ಯ ಸರ್ಕಾರದ ಅವನತಿ: ಡಿವಿಎಸ್]


ಎಸ್ ಎಂ ಕೃಷ್ಣ ಭೇಟಿಯಲ್ಲಿ ತಪ್ಪೇನಿಲ್ಲ: ಎಸ್ ಎಂ ಕೃಷ್ಣ ಅವರು ಹಿರಿಯ ನಾಯಕರು, ಮಾಜಿ ಸಿಎಂ, ಕೇಂದ್ರ ಸಚಿವರಾಗಿದ್ದವರು. ರಾಜಕೀಯದಲ್ಲಿ ಆಂತರಿಕ ವೈಮನಸ್ಯ ಬಂದಾಗ ಅವರನ್ನು ಸಂಪರ್ಕಿಸಿ ಸಲಹೆ ಕೇಳುವುದರಲ್ಲಿ ತಪ್ಪೇನಿಲ್ಲ ಎಂದರು.


ಇದೇ ವೇಳೆ ಅಂಬರೀಶ್ ಅವರ ಜೊತೆಗೆ ಸುಮಾರು 30 ನಿಮಿಷ ಮಾತುಕತೆ ನಡೆಸಿ ಬಂದಿರುವ ಡಿಕೆ ಶಿವಕುಮಾರ್ ಅವರು, ಮಂಡ್ಯ ಉಸ್ತವಾರಿಯಾಗಿರುವ ಹಿನ್ನೆಲೆಯಲ್ಲಿ ಅಂಬರೀಶ್‌ ಅವರನ್ನು ಭೇಟಿಯಾಗಲು ಬಂದಿದ್ದೆ. ಸಂಧಾನ ನಡೆಸಲು ಅಲ್ಲ. ಸಂಪುಟ ಪುನರ್ ರಚನೆ ವಿಷಯ ಸಿಎಂಗೆ ಬಿಟ್ಟಿದ್ದು ಎಂದರು.


ಈ ನಡುವೆ ಬೆಂಗಳೂರಿನ ಏಳೆಂಟು ಶಾಸಕರನ್ನು ಕಟ್ಟಿಕೊಂಡು ಸಾಮೂಹಿಕ ರಾಜೀನಾಮೆ ಬೆದರಿಕೆ ಒಡ್ಡಿದ್ದ ಎಸ್‌.ಟಿ. ಸೋಮಶೇಖರ್‌ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯತ್ವ ಸಿಕ್ಕಿದೆ. ಜೊತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಬೈರತಿ ಬಸವರಾಜ್ ಅವರನ್ನು ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಪ್ರಕಟಿಸಿದ್ದಾರೆ.


ಇತ್ತ ಮಾಜಿ ಕಂದಾಯ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಎಸ್ಸೆಂ ಕೃಷ್ಣರ ಮಾತಿಗೆ ಮಣಿದು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಹೀಗಾಗಿ ಭಾನುವಾರ ನಡೆಯಬೇಕಿದ್ದ ಭಿನ್ನಮತೀಯರ ಸಭೆ ರದ್ದಾಗಿದೆ. ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಇಷ್ಟರಲ್ಲೇ ತೀರ್ಮಾನ ಕೈಗೊಳ್ಳಲಿದೆ ಎಂಬ ಭರವಸೆಯಂತೂ ಶ್ರೀನಿವಾಸ್ ಪ್ರಸಾದ್ ಅವರಿಗಿದೆ.


ಬಿಜೆಪಿ ಕಾರ್ಯಕರ್ತರ ಸಮಾವೇಶ: ಯಲಹಂಕದಲ್ಲಿ ನಡೆದ ಸಮಾವೇಶಕ್ಕೆ ಹಿರಿಯ ನಾಯಕರಾದ ಅನಂತ ಕುಮಾರ್ ಹಾಗೂ ಆರ್ ಅಶೋಕ್ ಅವರು ಗೈರು. ಪಕ್ಷದಲ್ಲಿ ಗೊಂದಲವಿದೆ. ಕೆಎಸ್ ಈಶ್ವರಪ್ಪ ಅವರನ್ನು ಕರೆಸಿ ಮಾತನಾಡುತ್ತೇನೆ. ಆದರೆ, ಯಾವುದೇ ಭಿನ್ನಮತ ಚಟುವಟಿಕೆ ನಡೆದಿಲ್ಲ ಎಂದ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
CM Siddaramaiah likely to induct 'Rebel Star' MH Ambareesh back in to his cabinet along with MLC Govindaraju, Ramya is better suitable for MP post said DK Shivakumar, Congress dissident leaders meeting called off.. this and much more details on today's political report.
Please Wait while comments are loading...