ವಿಧಾನಸೌಧದ ಅಂಗಳದಿಂದ ತೂರಿಬಂದ ಸುದ್ದಿ ತುಣುಕು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 12 : ವರಮಹಾಲಕ್ಷ್ಮಿ ಹಬ್ಬದ ಶುಭ ಸಂದರ್ಭದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಪೊಲೀಸರಿಗೆ ಸಂತಸದ ಸುದ್ದಿ ಪ್ರಕಟಿಸಿದ್ದಾರೆ. ಪ್ರಸಕ್ತ ಆಥಿ೯ಕ ವಷಾ೯೦ತ್ಯದೊಳಗೆ ರಾಜ್ಯ ಪೊಲೀಸ್‍ ಇಲಾಖೆಗೆ 20,158 ಪೇದೆಗಳು ಹಾಗೂ 889 ಇನ್‍ಸ್ಪೆಕ್ಟರ್‍ಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.

ನಿರಾಶ್ರಿತರಿಗೆ ರಾತ್ರಿ ಭೋಜನ ಭಾಗ್ಯ : ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ ಮತ್ತಿತರ ಸ್ಥಳಗಳಲ್ಲಿರುವ ನಿಗ೯ತಿಕರಿಗೆ ರಾತ್ರಿ ವೇಳೆ ಊಟ ನೀಡುವ ವ್ಯವಸ್ಥೆ ಜಾರಿಗೆ ತರಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮು೦ದಾಗಿದೆ. ಈ ಯೋಜನೆಗೆ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದಾರೆ. ಬೆ೦ಗಳೂರು ನಗರ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎ೦ದು ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

Latest news from Karnataka political corridor

1ರಿಂದ 5ರವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ : ಮಕ್ಕಳಿಗೆ 1 ರಿಂದ 5ನೆ ತರಗತಿವರೆಗೆ ಅವರವರ ಮಾತೃಭಾಷೆ/ ರಾಜ್ಯ ಭಾಷೆಯಲ್ಲಿ ಶಿಕ್ಷಣ ನೀಡಲು 'ರಾಷ್ಟ್ರೀಯ ಶಿಕ್ಷಣ ನೀತಿ 2016' ಅವಕಾಶ ಕಲ್ಪಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ 'ರಾಷ್ಟ್ರೀಯ ಶಿಕ್ಷಣ ನೀತಿ 2016'ರ ಕರಡನ್ನು ಸಾರ್ವಜನಿಕರ ಚರ್ಚೆಗೆ ಬಿಡುಗಡೆ ಮಾಡಿಲಾಗಿದೆ.

ಪಡಿತರ ಚೀಟಿ ಪಡೆಯಲು ನಿಯಮ ಸರಳೀಕರಣ : ಬಡವರು ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಇದ್ದ ನಿಯಮಗಳನ್ನು ಸರ್ಕಾರ ಸರಳೀಕರಿಸಿದೆ. ಹೊಸ ನಿಯಮದ ಪ್ರಕಾರ, ದ್ವಿಚಕ್ರ ವಾಹನ ಹೊಂದಿರುವವರು, ಟ್ಯಾಕ್ಸಿ, ಆಟೋ, ಗೂಡ್ಸ್‌ ಆಟೋ ಹೊಂದಿರುವವರೂ ಅರ್ಹರು. ಹಿಂದಿನ ನಿಯಮದ ಅನ್ವಯ ಬೈಕ್‌, ಟ್ರಾಕ್ಟರ್‌, ಬಾಡಿಗೆಗಾಗಿ ನಾಲ್ಕು ಚಕ್ರದ ವಾಹನ ಹೊಂದಿದವರು ಬಿಪಿಎಲ್‌ ಕಾರ್ಡ್‌ ಪಡೆಯಲು ಸಾಧ್ಯವಿರಲಿಲ್ಲ. ಹಿಂದೆ ಚಾಲ್ತಿಯಲ್ಲಿದ್ದ 14 ಕಠಿಣ ಮಾನದಂಡಗಳನ್ನು ತೆಗೆದು ಹಾಕಿ ಕೇವಲ ನಾಲ್ಕು ಸರಳ ನಿಯಮಗಳನ್ನು ಉಳಿಸಿಕೊಳ್ಳಲಾಗಿದೆ.

ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟ : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ 2016-17ನೇ ಸಾಲಿನ 'ಕರ್ನಾಟಕ ಕಲಾಶ್ರೀ' ವಾರ್ಷಿಕ ಪ್ರಶಸ್ತಿ ಪ್ರಕಟ ಮಾಡಿದ್ದು, 2016ನೇ ಸಾಲಿನ ಪ್ರಶಸ್ತಿಗೆ ಧಾರವಾಡದ ಪಂ ರವೀಂದ್ರ ಯಾವಗಲ್ ಮತ್ತು 2017ನೇ ಸಾಲಿನ ಪ್ರಶಸ್ತಿಗೆ ಗಮಕ ಕಲಾವಿದ ಕಾಸರಗೋಡಿನ ಸುಬ್ರಹ್ಮಣ್ಯ ಭಟ್ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಇನ್ನೂ 145 ವಸತಿ ಶಾಲೆ : ರಾಜ್ಯದಲ್ಲಿ ಹೊಸದಾಗಿ 145 ವಸತಿ ಶಾಲೆಗಳ ಸ್ಥಾಪನೆಗೆ ಆದೇಶ ನೀಡಲಾಗಿದ್ದು, ಮುಂದಿನ ತಿಂಗಳು ಇನ್ನೂ 245 ಶಾಲೆಗಳಿಗೆ ಮಂಜೂರಾತಿ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ತಿಳಿಸಿದ್ದಾರೆ.

ಕೆರೆ ಒತ್ತುವರಿ ದಾಖಲೆ ಸಲ್ಲಿಸಲು 20 ದಿನ ಗಡುವು : ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ಹಾಗೂ ಸಂರಕ್ಷಿತ ಪ್ರದೇಶದ ನಕ್ಷೆ ಹಾಗೂ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದಾಖಲೆಗಳನ್ನು 20 ದಿನದ ಒಳಗೆ ಸಲ್ಲಿಸಬೇಕು ಎಂದು ಬಿಬಿಎಂಪಿ, ಬಿಡಿಎ, ಜಿಲ್ಲಾಧಿಕಾರಿಗೆ ಗಡುವು ನೀಡಲಾಗಿದೆ ಎಂದು ಕೆರೆ ಒತ್ತುವರಿ ಸದನ ಸಮಿತಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Latest news from Karnataka political corridor. Karnataka government has announced many initiatives. Recruitment to police department, free food at night to shelterless people, ration card issue norms eased, more residential schools to come in the state etc.
Please Wait while comments are loading...