ವರ್ಕ್ ಫ್ರಂ ಹೋಂ: ಲ್ಯಾಪ್ ಟಾಪ್ ಮಾರಾಟಗಾರರಿಗೆ ಸಿಕ್ಕಿದ್ದೇ ಸೀರುಂಡೆ
ಕೊರೊನಾ ವೈರಸ್ ಹಾವಳಿಯಿಂದ ವಿಶ್ವವೆಲ್ಲಾ ತಲ್ಲಣವಾಗಿ ಕೂತಿದ್ದು ಒಂದು ಕಡೆಯಾದರೆ, ದಿನದಿಂದ ದಿನಕ್ಕೆ ಆರ್ಥಿಕತೆಯೂ ಕುಸಿಯುತ್ತಿರುವುದು ಇನ್ನೊಂದೆಡೆ. ಎಲ್ಲಾ ಉದ್ಯಮಗಳು ತೀವ್ರ ನಷ್ಟದಲ್ಲಿದ್ದರೆ, ಒಂದು ಉದ್ಯಮ ಮಾತ್ರ, ಭರ್ಜರಿ ವಹಿವಾಟು ನಡೆಸುತ್ತಿದೆ.
ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿನ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಮಾಡಲು ಹೇಳಿದೆ. ಆ ಮೂಲಕ, ಕೊರೊನಾ ವೈರಸ್ ಪಸರಿಸದಂತೆ, ಸಾಮಾಜಿಕ ಜವಾಬ್ದಾರಿಯ ನಿರ್ಧಾರವನ್ನು ತೆಗೆದುಕೊಂಡಿದೆ.
WFH ನೀಡಿರುವ ಹಲವು ಸಂಸ್ಥೆಗಳಲ್ಲಿ ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ಮೂಲಕ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿವೆ. ವರ್ಕ್ ಫ್ರಂ ಹೋಂ ನೀಡುವಾಗ, ಡೆಸ್ಕ್ ಟಾಪ್ ನಲ್ಲಿ ಕೆಲಸ ಮಾಡುವ ನೌಕರರಿಗೆ ಲ್ಯಾಪ್ ಟಾಪ್ ನೀಡುವ ಅನಿವಾರ್ತೆಯಲ್ಲಿ ಸಂಸ್ಥೆಗಳಿವೆ.

ಇದು ತಾತ್ಕಾಲಿಕ ಕೆಲಸ ಪದ್ದತಿ ಆಗಿರುವುದರಿಂದ, ಬಹುತೇಕ ಸಂಸ್ಥೆಗಳು ನೌಕರಿಗೆ ಲ್ಯಾಪ್ ಟಾಪ್ ಅನ್ನು ಮಾಸಿಕ ಬಾಡಿಗೆಯ ಆಧಾರದ ಮೇಲೆ ತೆಗೆದುಕೊಳ್ಲುತ್ತಿವೆ. ಹೆಚ್ಚಿನ ಕಂಪೆನಿಗಳು WFH ಮೊರೆ ಹೋಗಿರುವುದರಿಂದ, ಲ್ಯಾಪ್ ಟಾಪ್ ಮಾರಾಟದ ಉದ್ಯಮ ಸದ್ಯ ಸಿಕ್ಕಾಪಟ್ಟೆ ಬಿರುಸಾಗಿ ಸಾಗುತ್ತಿವೆ.
ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಬೇಡಿಕೆ ಬಂದಿರುವುದರಿಂದ, ಲ್ಯಾಪ್ ಟಾಪ್ ಬಾಡಿಗೆಗೆ ನೀಡುವ ಸಂಸ್ಥೆಗಳು, ಅಲ್ಲಲ್ಲಿ ಪರಿಸ್ಥಿತಿಗೆ ತಕ್ಕಂತೆ ಬೆಲೆಯನ್ನು ಏರಿಸಿವೆ. ಯಾರೂ ಕೇಳದ, ಮೂಲೆಯಲ್ಲಿ ಬಿದ್ದಿರುವ ಕಾನ್ಫಿಗರೇಶನ್ ಮಾಡೆಲ್ ಲ್ಯಾಪ್ ಗಳಿಗೂ ಎಲ್ಲಿಲ್ಲದ ಡಿಮಾಂಡ್.
ಇದೊಂದು, ತಾತ್ಕಾಲಿಕ ಪದ್ದತಿಯಾಗಿರುವುದರಿಂದ, ಕೆಲಸ ನಿರ್ವಹಿಸಲು ಸಾಕಾಗುವಷ್ಟು ಮಾಡೆಲಿನ ಲ್ಯಾಪ್ ಟಾಪ್ ಗಳನ್ನು ಸಂಸ್ಥೆಗಳು ತಮ್ಮ ನೌಕರರಿಗೆ ನೀಡುತ್ತಿವೆ. ಹಾಗಾಗಿ, ಧೂಳು ಹಿಡಿದು ಕೂತಿದ್ದ ಲ್ಯಾಪ್ ಟಾಪ್ ಗಳಿಗೆ ಅವಧಿಗಿಂತ ಮುಂಚೆನೇ ಆಯುಧಪೂಜೆ ಭಾಗ್ಯ.

ಉದಾಹರಣೆಗೆ, ಡಿಮಾಂಡ್ ಇಲ್ಲದ ಕೋರ್ ಐ3, 4th ಜನರೇಶನ್ ಲ್ಯಾಪ್ ಟಾಪ್ ಗಳನ್ನೂ ಸಂಸ್ಥೆಗಳು ಬಾಡಿಗೆಗೆ ತೆಗೆದುಕೊಳ್ಳುತ್ತಿವೆ. ಅಂದಾಜು, ತಿಂಗಳಿಗೆ 1,800 - 2,500 ರೂಪಾಯಿಗಳಿವೆ ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳುತ್ತಿವೆ.
ಒಟ್ಟಿನಲ್ಲಿ, ಕೊರೊನಾ ಹಾವಳಿ ಊರೆಲ್ಲಾ ಹಬ್ಬಿದ್ದರೂ, ಈ ಉದ್ಯಮ ಮಾತ್ರ ಭರ್ಜರಿ ವಹಿವಾಟು ನಡೆಸುತ್ತಿವೆ. ಬೆಲೆ ಏನೇ ಆಗಿರಲಿ, ಸಂಸ್ಥೆಗಳ ಪಾಲಿಗೆ ತುರ್ತು ಪರಿಸ್ಥಿತಿಯಂತಾಗಿರುವ ಈ ಸಮಯದಲ್ಲಿ ಲ್ಯಾಪ್ ಟಾಪ್ ಮಾರಾಟ / ಬಾಡಿಗೆ ನೀಡುವ ಸಂಸ್ಥೆಗಳು, ಕಸ್ಟಮರ್ ಸಪೋರ್ಟ್ ಚೆನ್ನಾಗಿ ಮಾಡುತ್ತಿವೆ ಎನ್ನುವುದು ಒಪ್ಪಿಕೊಳ್ಳಬೇಕಾದ ವಿಚಾರ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications