Lal Krishna Advani: ಅಡ್ವಾಣಿ ಸಾವಿನ ಕುರಿತು ಪೋಸ್ಟ್ ಹಂಚಿಕೊಂಡ ಕೇಂದ್ರ ಸಚಿವ ವಿ. ಸೋಮಣ್ಣ & ಸಂಸದ ಡಾ. ಮಂಜುನಾಥ್?
ಲಾಲ್ ಕೃಷ್ಣ ಅಡ್ವಾಣಿ ಅವರ ಸಾವಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹೀಗೆ ಸುಳ್ಳು ಸುದ್ದಿ ಹರಡುತ್ತಿರುವ ಸಮಯದಲ್ಲೇ ಎಲ್ಲರೂ ಹಿಂದೆ & ಮುಂದೆ ಯೋಚನೆ ಮಾಡದೆ ಅಡ್ವಾಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಪರಿಸ್ಥಿತಿ ಈ ರೀತಿ ವಿಕೋಪಕ್ಕೆ ಹೋಗಿರುವ ಸಮಯದಲ್ಲೇ ಕೇಂದ್ರ ಸಚಿವ ವಿ. ಸೋಮಣ್ಣ & ಸಂಸದ ಡಾ. ಮಂಜುನಾಥ್ ಕೂಡ ಅಡ್ವಾಣಿ ಅವರ ವಿಚಾರದಲ್ಲಿ ದೊಡ್ಡ ಎಡವಟ್ಟು ಮಾಡಿದ್ದಾರೆ.
ಅಂದಹಾಗೆ ಲಾಲ್ ಕೃಷ್ಣ ಅಡ್ವಾಣಿ ಅವರು ಕೆಲವು ದಿನಗಳ ಹಿಂದಷ್ಟೇ ವಯೋ ಸಹಜವಾದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದ್ದರು. ಆ ನಂತರ ಚಿಕಿತ್ಸೆ ಪಡೆದು ಅವರು ಡಿಸ್ಚಾರ್ಜ್ ಕೂಡ ಆಗಿದ್ದರು. ಆದರೆ ಹೀಗೆ, ಭಾರತದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿ ಬಂದ ನಂತರ ಯಾರೋ ಕಿಡಿಗೇಡಿಗಳು, ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಹೀಗಿದ್ದಾಗ ಕರ್ನಾಟಕ ಮೂಲದ ಕೇಂದ್ರ ಸಚಿವ ವಿ. ಸೋಮಣ್ಣ & ಸಂಸದ ಡಾ. ಮಂಜುನಾಥ್ ಹಿಂದೆ & ಮುಂದೆ ಯೋಚಿಸದೇ ಕಿಡಿಗೇಡಿಗಳು ತೋಡಿದ ಸುಳ್ಳು ಸುದ್ದಿಯ ಹಳ್ಳಕ್ಕೆ ಬಿದ್ದು, ಅಡ್ವಾಣಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಆರೋಪ ಕೇಳಿಬಂದಿದೆ.

ಅಡ್ವಾಣಿ ಅವರು ಆರೋಗ್ಯವಾಗಿ ಇದ್ದಾರೆ
ಲಾಲ್ ಕೃಷ್ಣ ಅಡ್ವಾಣಿ ಅವರು ಸಂಪೂರ್ಣ ಆರೋಗ್ಯವಾಗಿ ಇದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಸಿಕ್ಕಿದೆ. ಹೀಗಾಗಿ ಸಾಮಾನ್ಯ ಜನ ಸೋಷಿಯಲ್ ಮೀಡಿಯಾದ ಮೂಲಕ ಈ ಸುಳ್ಳು ಸುದ್ದಿ ಶೇರ್ ಮಾಡುತ್ತಿದ್ದಾರೆ. ಸಾಮಾನ್ಯ ಜನರು ಬಿಡಿ ಜನಪ್ರತಿನಿಧಿ ಅಂತಾ ಕರೆಸಿಕೊಳ್ಳುವವರು ಕೂಡ ಈ ರೀತಿಯಾಗಿ ಸುಳ್ಳು ಸುದ್ದಿ ಹಂಚಿಕೊಂಡಿರುವ ಕಾರಣ ಇದೀಗ ಎಲ್ಲೆಲ್ಲೂ ಆಕ್ರೋಶ ಮೊಳಗುತ್ತಿದೆ. ಈ ರೀತಿಯಾಗಿ ಮಾಡುವುದು ತಪ್ಪು ಎನ್ನುತ್ತಾ ತಜ್ಞರು ಬುದ್ಧಿ ಹೇಳುತ್ತಿದ್ದಾರೆ. ಅಲ್ಲದೆ ಅಡ್ವಾಣಿ ಅವರ ಬಗ್ಗೆ ಮೊದಲಿಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದು ಯಾರು? ಅನ್ನೋದು ತಿಳಿದು ಶಿಕ್ಷೆ ಕೊಡಿಸುವಂತೆ ಆಗ್ರಹ ಕೇಳಿಬಂದಿದೆ.
ಹೋರಾಟದ ನೆಲೆಯಿಂದ ಅಡ್ವಾಣಿ ಅವರು..
1927 ನವೆಂಬರ್ 8 ರಂದು ಜನಿಸಿದ ಲಾಲ್ ಕೃಷ್ಣ ಅಡ್ವಾಣಿ ಅವರು ಹೋರಾಟದ ನೆಲೆಯಿಂದ ಬಂದ ನಾಯಕ. ಬಿಜೆಪಿ ಪಕ್ಷದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದ ಲಾಲ್ ಕೃಷ್ಣ ಅಡ್ವಾಣಿ ಅವರು, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲೂ ಸದ್ದು ಮಾಡಿದ್ದರು. ಹಾಗೇ ದೊಡ್ಡ ದೊಡ್ಡ ಹೋರಾಟದಲ್ಲಿ & ಕಾಂಗ್ರೆಸ್ ವಿರುದ್ಧ ಭಾರಿ ದೊಡ್ಡ ಪ್ರತಿಭಟನೆಗಳನ್ನು ಹಮ್ಮಿಕೊಂಡು ಸದ್ದು ಮಾಡಿದ್ದರು.
ವಾಜಪೇಯಿ ಅವರ ಸರ್ಕಾರದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಉಪಪ್ರಧಾನಿ ಆಗಿ ಕೆಲಸ ಮಾಡಿ, ಇಡೀ ದೇಶದ & ಜಗತ್ತಿನ ಗಮನವನ್ನ ಸೆಳೆದಿದ್ದರು. ಹೀಗಿದ್ದಾಗ ಅವರಿಗೆ 96 ವರ್ಷ ವಯಸ್ಸು ಆಗಿದ್ದು, ಯಾರೋ ಕೆಲವು ಕಿಡಿಗೇಡಿ ಯುವಕರು ಸೋಷಿಯಲ್ ಮೀಡಿಯಾ ಮೂಲಕ ಅವರ ಸಾವಿನ ಕುರಿತು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಈ ಬಗ್ಗೆ ಜನಾಕ್ರೋಶಕ್ಕೆ ಈ ಸುಳ್ಳು ಸುದ್ದಿಯು ಕಾರಣವಾಗ್ತಿದೆ. ಅಲ್ಲದೆ ಹೀಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪೊಲೀಸರು ಕ್ರಮವನ್ನ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ ಜನ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications