KUWJ: ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಾನಂದ ತಗಡೂರಿಗೆ ಕೆಯುಡಬ್ಲ್ಯೂಜೆ ಭಾವಪೂರ್ಣ ಅಭಿನಂದನೆ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಹಾಗೂ ರಂಗಕರ್ಮಿ ಶಿವಾನಂದ ತಗಡೂರು ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಭಾವಪೂರ್ಣವಾಗಿ ಅಭಿನಂದಿಸಿದೆ.

ನಗರದ ಕಂದಾಯ ಭವನದಲ್ಲಿರುವ ಡಿವಿಜಿ ಸಭಾಂಗಣದಲ್ಲಿ ಸೋಮವಾರ ನಡೆದ KUWJ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಶಿವಾನಂದ ತಗಡೂರು ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಇದೇ ವೇಳೆ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದ ಕರ್ನಾಟಕ ನಾಟಕ ಅಕಾಡೆಮಿಗೆ ಅಭಿನಂದನೆ ಸಲ್ಲಿಸುವ ನಿರ್ಣಯವನ್ನೂ ಸರ್ವಾನುಮತದಿಂದ ಅಂಗೀಕರಿಸಲಾಯಿತು.

KUWJ Congratulate Bengaluru Senior Journalist Shivanand Thagadur on Karnataka Nataka Akademi Award

KUWJ:ರಂಗಕಲಾವಿದನನ್ನು ಗುರುತಿಸಿದ ಪ್ರಶಸ್ತಿ

ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಎನ್. ರವಿಕುಮಾರ್ (ಟೆಲೆಕ್ಸ್) ಮಾತನಾಡಿ, ಶಿವಾನಂದ ತಗಡೂರು ಅವರನ್ನು ಬಹುತೇಕರು ಹಿರಿಯ ಪತ್ರಕರ್ತರಾಗಿ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾಗಿ ಗುರುತಿಸುತ್ತಾರೆ. ಆದರೆ ಅವರೊಳಗಿನ ಸಮರ್ಪಿತ ರಂಗಕಲಾವಿದನ ಪರಿಚಯ ಅಷ್ಟಾಗಿ ಅನೇಕರಿಗೆ ಇಲ್ಲ ಎಂದು ಹೇಳಿದರು.

ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶಿಸುವ ಮುನ್ನವೇ ಶಿವಾನಂದ ತಗಡೂರು ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರೈತ ಚಳವಳಿ, ಬಾಗೂರು-ನವಿಲೆ ಹೋರಾಟ ಸೇರಿದಂತೆ ಹಲವು ಜನಾಂದೋಲನಗಳಲ್ಲಿ ಭಾಗವಹಿಸಿದ್ದ ಅವರು, ಸಾಮಾಜಿಕ ಪರಿವರ್ತನೆಗಾಗಿ ರಂಗಭೂಮಿಯನ್ನು ಪರಿಣಾಮಕಾರಿ ಮಾಧ್ಯಮವಾಗಿ ಬಳಸಿಕೊಂಡವರು ಎಂದು ಸ್ಮರಿಸಿದರು.

ರಂಗಭೂಮಿಗೆ ಸಮರ್ಪಿತ ಸೇವೆ

ಪರದೆ ಮುಂದೆ ಹಾಗೂ ಪರದೆ ಹಿಂದೆ ಸಮಾನವಾಗಿ ದುಡಿದಿರುವ ಶಿವಾನಂದ ತಗಡೂರು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಹೊಂದಿದ್ದಾರೆ. ತಮ್ಮ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡಿರುವ ಅವರ ಬದುಕು ರಂಗಭೂಮಿಯ ಮೇಲಿನ ಬದ್ಧತೆ, ನಿಷ್ಠೆ ಮತ್ತು ಸೇವೆಗೆ ಸಾಕ್ಷಿಯಾಗಿದೆ ಎಂದು ರವಿಕುಮಾರ್ ಹೇಳಿದರು. ಇಂತಹ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿರುವುದು ಅತ್ಯಂತ ಸಾರ್ಥಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಪ್ರಶಸ್ತಿ ಕೇವಲ ಶಿವಾನಂದ ತಗಡೂರು ಅವರಿಗೆ ಸಂದಿರುವ ವೈಯಕ್ತಿಕ ಗೌರವವಲ್ಲ. ಇದು ರಾಜ್ಯದ ಎಲ್ಲ ಕಾರ್ಯನಿರತ ಪತ್ರಕರ್ತರಿಗೆ ಸಂದ ಗೌರವವೂ ಹೌದು. ಇದರಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಘನತೆ ಮತ್ತಷ್ಟು ಹೆಚ್ಚಿದೆ ಎಂದು ಎನ್. ರವಿಕುಮಾರ್ ಹೇಳಿದರು. ಈ ಗೌರವ ನೀಡಿದ ಕರ್ನಾಟಕ ನಾಟಕ ಅಕಾಡೆಮಿಗೆ KUWJ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.

ಸಂಘಕ್ಕೊಂದು ಗರಿಮೆ

KUWJ ಹಿರಿಯ ಉಪಾಧ್ಯಕ್ಷ ಹೆಚ್.ಬಿ. ಮದನಗೌಡ ಮಾತನಾಡಿ, ಶಿವಾನಂದ ತಗಡೂರು ಅವರಿಗೆ ಈ ಗೌರವ ಬಹಳ ಹಿಂದೆಯೇ ದೊರೆಯಬೇಕಾಗಿತ್ತು. ತಡವಾದರೂ ಈಗ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ಸಂತಸದ ವಿಷಯವಾಗಿದ್ದು, ಇದು ಸಂಘಕ್ಕೇ ಗರಿಮೆಯಾಗಿದೆ ಎಂದು ಹೇಳಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯ ಪತ್ರಕರ್ತರು ಶಿವಾನಂದ ತಗಡೂರು ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಮತ್ತಿಕೆರೆ ಜಯರಾಮ್, ರಮೇಶ್ ಅಜ್ಜಮಾಡ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಕಾರ್ಯದರ್ಶಿಗಳಾದ ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಪುಂಡಲೀಕ ಬಾಳೋಜಿ, ಖಜಾಂಚಿ ವಾಸುದೇವ ಹೊಳ್ಳ ಸೇರಿದಂತೆ ರಾಜ್ಯ ಕಾರ್ಯಕಾರಿಣಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+