ಸುಧಾ ಮೂರ್ತಿ ಅವರ ಸಿಂಪ್ಲಿಸಿಟಿ ಕತೆ ಕೇಳಲಾಗದೇ 70 ಗಂಟೆ ಕೆಲಸ ಮಾಡ್ತಾರಂತೆ ನಾರಾಯಣ ಮೂರ್ತಿ... Sudha Murty
ಇನ್ಫೋಸಿಸ್ ಸಂಸ್ಥೆಯ ಸುಧಾ ಮೂರ್ತಿ ಅವರು ತಮ್ಮ ಸಾಹಿತ್ಯ ಹಾಗೂ ಭಾಷಣದ ಮೂಲಕ ಇಡೀ ಇಂಡಿಯಾದಲ್ಲಿ ಹೆಸರು ಮಾಡಿದ್ದಾರೆ. ಸುಧಾ ಮೂರ್ತಿ ಅವರು ಹಲವು ಪುಸ್ತಕಗಳನ್ನೂ ಬರೆದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸುಧಾಮೂರ್ತಿ ಅವರ ಗಂಡ ನಾರಾಯಣ ಮೂರ್ತಿ ಅವರು ತಮ್ಮ 70 ಗಂಟೆ ಕೆಲಸದ ಕಾರಣಕ್ಕೆ ಟ್ರೋಲ್ ಆಗುತ್ತಿದ್ದಾರೆ. ಇಂತಹ ಸಮಯದಲ್ಲೇ, ನಾರಾಯಣ ಮೂರ್ತಿ ಅವರು 70 ಗಂಟೆ ಕೆಲಸ ಮಾಡುವುದಕ್ಕೆ ಕಾರಣ ಸಿಕ್ಕಿದೆ!
ಸುಧಾ ಮೂರ್ತಿ ಅವರು ಲವ್ ಮಾಡಿ ಮದುವೆ ಆದವರು, ನಾರಾಯಣ ಮೂರ್ತಿ & ಸುಧಾ ಮೂರ್ತಿ ಅವರದ್ದು ಲವ್ ಕಂ ಅರೇಂಜ್ ಮ್ಯಾರೇಜ್. ಹೀಗೆ ಹಲವು ವರ್ಷಗಳ ಕಾಲ ಪ್ರೀತಿ ಮಾಡಿ, ತಮ್ಮದೇ ಒಂದು ದೊಡ್ಡ ಸಂಸ್ಥೆಯನ್ನು ಕಟ್ಟಿ ನಂತರ ವಿವಾಹ ಬಂಧನಕ್ಕೆ ಅವರು ಒಳಗಾದರು. ಇನ್ಫೋಸಿಸ್ ಸಂಸ್ಥೆಯನ್ನ ಸ್ಥಾಪನೆ ಮಾಡುವುದಕ್ಕೂ ಮೊದಲು ಸುಧಾ ಮೂರ್ತಿ ಹಾಗೂ ನಾರಾಯಣ ಮೂರ್ತಿ ಅವರು ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು. ಹೀಗಿದ್ದಾಗ ದೊಡ್ಡ ಸಾಧನೆ ಮಾಡಿರುವ ಸುಧಾ ಮೂರ್ತಿ & ನಾರಾಯಣ ಮೂರ್ತಿ ಪದೇ ಪದೇ ಟ್ರೋಲ್ ಆಗ್ತಿದ್ದಾರೆ!

70 ಗಂಟೆ ಕೆಲಸ ಮಾಡುವುದಕ್ಕೆ ಕಾರಣವೇನು?
ನಾರಾಯಣ ಮೂರ್ತಿ ಉದ್ಯಮಿಯಾಗಿ ದೊಡ್ಡ ಯಶಸ್ಸು ಸಾಧಿಸಿದ್ದು, ಅಮೆರಿಕದಲ್ಲಿ ಇದ್ದ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅವರು ಎದುರಿಸಿದ್ದರಂತೆ. ಒಂದು ಹೊತ್ತಿಗೆ ಬನ್ ತಿಂದು, ಇನ್ನೂ ಅರ್ಧ ಬನ್ ಉಳಿಸಿಕೊಂಡು ಮತ್ತೊಂದು ಹೊತ್ತಿಗೂ ಅದನ್ನೇ ತಿನ್ನುತ್ತಿದ್ದ ನಾರಾಯಣ ಮೂರ್ತಿ ಅವರು ಕಷ್ಟದಲ್ಲೇ ಜೀವನ ಸಾಗಿಸಿ ಸಾಧನೆ ಮಾಡಿದ್ದಾರಂತೆ. ಈ ರೀತಿ ಕಥೆಗಳು ನೂರಾರು ಇದ್ದು, ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಇಲ್ಲ. ಹೀಗಿದ್ದಾಗಲೇ, ಸುಧಾ ಮೂರ್ತಿ ಅವರ ಸಿಂಪ್ಲಿಸಿಟಿ ಕತೆ ಕೇಳಲಾಗದೇ 70 ಗಂಟೆ ಕೆಲಸ ಮಾಡ್ತಾರಂತೆ ನಾರಾಯಣ ಮೂರ್ತಿ...












Click it and Unblock the Notifications