ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿದ್ದರು ಕುಮಾರಸ್ವಾಮಿ
Recommended Video

ಬೆಂಗಳೂರು, ಮಾರ್ಚ್ 04: ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿ ಆಡಳಿತ ನಡೆಸುತ್ತಿರುವ ಕುಮಾರಸ್ವಾಮಿ ಅವರು ಕೆಲವು ತಿಂಗಳುಗಳ ಹಿಂದೆ ರಾಜಕೀಯ ನಿವೃತ್ತಿಗೆ ಯೋಚಿಸಿದ್ದರಂತೆ!
ಹೌದು, ಅವರೇ ಈ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಕೇವಲ 38 ಸೀಟು ಬಂದಾಗ ಹತಾಶರಾಗಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಯೋಚಿಸಿದ್ದರಂತೆ ಕುಮಾರಸ್ವಾಮಿ.
ಕಡಿಮೆ ಸೀಟು ಬಂದಾಗ ಹತಾಶನಾಗಿ ರಾಜಕೀಯ ನಿವೃತ್ತಿಗೆ ಯೋಚನೆ ಮಾಡಿದ್ದೆ ಆದರೆ ಅಷ್ಟರಲ್ಲಿ ಕಾಂಗ್ರೆಸ್ ನಿಂದ ಕರೆ ಬಂತು. ನಾನು ನಿವೃತ್ತಿಯ ಯೋಚನೆಯಲ್ಲಿದ್ದಾಗ ಕಾಂಗ್ರೆಸ್ ನನ್ನ ಕೈ ಹಿಡಿಯಿತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
'ಕರ್ನಾಟಕ ಮುನ್ನಡೆ' ಸಂವಾದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.

'ಮೈತ್ರಿ ಸರ್ಕಾರ ನಡೆಸುವುದು ಸವಾಲು'
ಮೈತ್ರಿ ಸರ್ಕಾರ ಮುನ್ನಡೆಸುವುದು ಯಾವಾಗಲೂ ಸವಾಲು, 12 ವರ್ಷದ ಹಿಂದೆ ನಾನು ಮೈತ್ರಿ ಸರ್ಕಾರ ರಚಿಸಿದ್ದಾಗ ನನಗೆ ಹೆಚ್ಚಿನ ಅರ್ಹತೆ ಇರಲಿಲ್ಲ. ನಾನು ದೇವೇಗೌಡ ಅವರಮಗ ಎಂಬುದೊಂದೆ ನನಗಿದ್ದ ಅರ್ಹತೆ. ಆದರೆ ಆಗಿನ ಪರಿಸ್ಥಿತಿ ಬೇರೆ ಈಗಿನ ಪರಿಸ್ಥಿತಿ ಬೇರೆ ಎಂದು ಕುಮಾರಸ್ವಾಮಿ ಹೇಳಿದರು.

ಜನರೇ ನನಗೆ ಸ್ಪೂರ್ತಿ: ಎಚ್‌ಡಿಕೆ
ನನ್ನ ಭೇಟಿಗೆ ಬರುವ ಜನರೇ ನನಗೆ ಕೆಲಸ ಮಾಡಲು ಸ್ಫೂರ್ತಿ ಒದಗಿಸುತ್ತಾರೆ. ನನಗೆ ನನ್ನ ತಂದೆ ಆದರ್ಶ ಅವರೇ ನನಗೆ ಗುರು, ಅವರ ಮಾರ್ಗದರ್ಶನವೇ ನನಗೆ ಜನ ಸೇವೆಗೆ ದಾರಿ ತೋರುತ್ತಿದೆ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಜನರನ್ನು ಹೇಗೆ ಮೇಲೆತ್ತಬೇಕು ಎಂದು ಸದಾ ಚಿಂತಿಸುತ್ತಿರುತ್ತೇನೆ ಎಂದು ಕುಮಾರಸ್ವಾಮಿ ಅವರು ಸಂವಾದದಲ್ಲಿ ಭಾವುಕರಾಗಿ ಹೇಳಿಕೊಂಡರು.

ಕೆಲವು ಸಚಿವರ ಬಗ್ಗೆ ಅಸಮಾಧಾನ
ಪ್ರಸ್ತುತ ಸಂಪುಟದಲ್ಲಿನ ಕೆಲವು ಸಚಿವರ ಬಗ್ಗೆ ಅಸಮಾಧಾನವನ್ನೂ ವ್ಯಕ್ತಪಡಿಸಿದ ಅವರು, ಕೆಲವು ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕು ಉಸ್ತುವಾರಿ ಸಚಿವರಂತೆ ವರ್ತಿಸುತ್ತಿದ್ದಾರೆ. ಅವರು ಕೇವಲ ತಮ್ಮ ಕ್ಷೇತ್ರಗಳಿಗಷ್ಟೆ ಸಚಿವರಾಗಿದ್ದಾರೆ ಈ ಬಗ್ಗೆ ಬೇಸರವಿದೆ ಎಂದು ಅವರು ಹೇಳಿದರು.

'ಲ್ಯಾಂಡ್ ಡೆವೆಲಪರ್ಸ್ ರಾಜಕಾರಣಿಗಳು ಹೆಚ್ಚಾಗಿದ್ದಾರೆ'
ಈಗೆಲ್ಲಾ ಜನರ ಸೇವೆ ಮಾಡಿ ರಾಜಕೀಯಕ್ಕೆ ಬಂದವರ ಸಂಖ್ಯೆ ಬಹಳ ಕಡಿಮೆ. ಅಬಕಾರಿ ಲಾಭಿ, ಶಿಕ್ಷಣದ ಲಾಭಿ ಇದ್ದಂತೆ ಈಗ ಲ್ಯಾಂಡ್ ಡೆವೆಲಪರ್ಸ್ ಲಾಭಿ ಇದೆ. ಅದನ್ನು ಮಾಡಿ ಲಾಭ ಮಾಡಿ ಅಧಿಕಾರಕ್ಕೆ ಬಂದವರೇ ಹೆಚ್ಚು, ಅಂತಹವರಿಂದ ಜನಸೇವೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications